• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೃಂಗೇರಿ ಅತ್ಯಾಚಾರ ಪ್ರಕರಣ; ಮೌನ ಮುರಿದ ಶೋಭಾ ಕರಂದ್ಲಾಜೆ

|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ 03: ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದೆ. ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರಕರಣದ ಬಗ್ಗೆ ಮೌನ ಮುರಿದಿದ್ದಾರೆ.

ಮಂಗಳವಾರ ವಿಧಾನಸಭೆ ಕಲಾಪದಲ್ಲಿ ಶೃಂಗೇರಿ ಕಾಂಗ್ರೆಸ್ ಶಾಸಕ ರಾಜೇಗೌಡ ಈ ಕುರಿತು ವಿಷಯ ಪ್ರಸ್ತಾಪಿಸಿದ್ದರು. "ಪ್ರಕರಣದಲ್ಲಿ ಆರೋಪಿಗಳಾದ ಬಹುತೇಕರು ರಾಜಕೀಯ ಪಕ್ಷದಲ್ಲಿ, ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ, ನಿಷ್ಪಕ್ಷಪಾತ ತನಿಖೆಯಾಗಬೇಕು" ಎಂದು ಒತ್ತಾಯಿಸಿದ್ದರು.

ಶೃಂಗೇರಿ; ಸಾಮೂಹಿಕ ಅತ್ಯಾಚಾರ, 17 ಜನರ ವಿರುದ್ಧ ಎಫ್‌ಐಆರ್ ಶೃಂಗೇರಿ; ಸಾಮೂಹಿಕ ಅತ್ಯಾಚಾರ, 17 ಜನರ ವಿರುದ್ಧ ಎಫ್‌ಐಆರ್

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆದಿತ್ತು. ಬುಧವಾರ ಪ್ರಕರಣದ ಕುರಿತು ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

ಶೃಂಗೇರಿಯಲ್ಲಿ ಸಾಮೂಹಿಕ ಅತ್ಯಾಚಾರ; ಸದನದಲ್ಲಿ ವಿಷಯ ಪ್ರಸ್ತಾಪ ಶೃಂಗೇರಿಯಲ್ಲಿ ಸಾಮೂಹಿಕ ಅತ್ಯಾಚಾರ; ಸದನದಲ್ಲಿ ವಿಷಯ ಪ್ರಸ್ತಾಪ

ಸಂಸದೆ ಹೇಳಿದ್ದೇನು?;

ಶೃಂಗೇರಿಯ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಬಲಾತ್ಕಾರ, ಅತ್ಯಾಚಾರ ಅತ್ಯಂತ ಖಂಡನೀಯವಾದುದು. ಈ ಘಟನೆ ಬೆಳಕಿಗೆ ಬಂದ ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಂಪರ್ಕ ಮಾಡಿ ತಪ್ಪಿತಸ್ತರನ್ನು ಬಂಧಿಸಲು, ಮತ್ತು ಬಾಲಕಿಗೆ ಸೂಕ್ತ ರಕ್ಷಣೆ ಕೊಡವಂತೆ ಸೂಚಿಸಿರುತ್ತೇನೆ.

ದಯಾ ಮರಣಕ್ಕೆ ಪತ್ರ ಬರೆದ ಚಿಕ್ಕಮಗಳೂರು ವೃದ್ಧರ ಕಣ್ಣೀರ ಕಥೆ ದಯಾ ಮರಣಕ್ಕೆ ಪತ್ರ ಬರೆದ ಚಿಕ್ಕಮಗಳೂರು ವೃದ್ಧರ ಕಣ್ಣೀರ ಕಥೆ

ಬಾಲಕಿಯನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಿದ ತಕ್ಷಣದಲ್ಲಿಯೇ ತಪ್ಪಿತಸ್ತರನ್ನು ಪೊಲೀಸರು ಬಂಧಿಸಿರುತ್ತಾರೆ. ಬಾಲಕಿಯನ್ನು ಕರೆತಂದು ದುರುಪಯೋಗ ಮಾಡಿದ ಅವಳ ಚಿಕ್ಕಮ್ಮ ಎಂದು ಕರೆಯಲ್ಪಡುವ ಗೀತಳನ್ನು ಕೂಡ ಬಂಧಿಸಿ ವಿಚಾರಿಸಲಾಗುತ್ತಿದೆ.

SSLC ಓದುವ ಹುಡುಗಿ ತನ್ನ ಊರಿನಿಂದ ಇಲ್ಲಿಗೆ ಯಾಕೆ ಬಂದಳು? ಯಾಕೆ ಅವಳನ್ನು ಚಿಕ್ಕಮ್ಮ ದುರುಪಯೋಗ ಮಾಡಿದಳು? ಇದೇ ರೀತಿ ಇನ್ಯಾವ ಹುಡುಗಿಯ ಜೊತೆ ಗೀತಾ ಸಂಪರ್ಕ ಬೆಳೆಸಿದ್ದಾಳೆ ಎಂಬುದರ ಕುರಿತು ಕೂಡ ತನಿಖೆ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ.

ಪ್ರಕರಣ ಗಂಭೀರವಾಗಿದ್ದು, ಅಪ್ರಾಪ್ತ ಬಾಲಕಿಯ ಭವಿಷ್ಯದ ವಿಚಾರವಾಗಿರುವುದರಿಂದ, ಮಾಧ್ಯಮಕ್ಕೆ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಪ್ರತಿನಿತ್ಯ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದು, ಈ ಕೇಸನ್ನು ನಿಗಾವಹಿಸಿ ಗಮನಿಸಲಾಗುತ್ತಿದೆ.

English summary
15 year old girl gang raped in Sringeri, Chikkamagaluru district. Udupi-Chikkamagalu MP Shobha Karandlaje breaks silence in issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X