ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅ.22ರಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಶೃಂಗೇರಿ ಬಂದ್

|
Google Oneindia Kannada News

ಚಿಕ್ಕಮಗಳೂರು, ಅಕ್ಟೋಬರ್ 22: ಶೃಂಗೇರಿ ಪಟ್ಟಣದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸಿ ಶುಕ್ರವಾರ ಸ್ವಯಂಪ್ರೇರಿತ ಶೃಂಗೇರಿ ಬಂದ್ ನಡೆಸಲು ಸ್ಥಳೀಯರು ನಿರ್ಧರಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸ್ಥಳೀಯ ಸಂಘಟನೆಗಳು 100 ಬೆಡ್​ಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವಂತೆ ಆಗ್ರಹಿಸಿವೆ. ಸ್ಥಳೀಯ ಆಡಳಿತ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದಲೇ ಶುಕ್ರವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಸ್ವಯಂಪ್ರೇರಿತ ಶೃಂಗೇರಿ ಬಂದ್ ನಡೆಸಲು ವಿನಂತಿಸಲಾಗಿದೆ. ಪ್ರವಾಸಿಗರು ಹಾಗೂ ಭಕ್ತರು ಶೃಂಗೇರಿಗೆ ಬರಬಾರದು ಎಂದು ಮನವಿ ಮಾಡಲಾಗಿದೆ.

ಕಳೆದ 14 ವರ್ಷಗಳಿಂದ ಶೃಂಗೇರಿಯಲ್ಲಿ ಸುಸಜ್ಜಿತ ಆಸ್ಪತ್ರೆ ಸ್ಥಾಪನೆಗಾಗಿ ಜನರು ಆಗ್ರಹಿಸುತ್ತಲೇ ಇದ್ದಾರೆ. ಸೂಕ್ತ ಚಿಕಿತ್ಸೆ ಸಿಗದೆ ಜನರು ಪರದಾಡುತ್ತಿದ್ದಾರೆ. ಏನೇ ಗಂಭೀರ ಅನಾರೋಗ್ಯ ಉಂಟಾದರೆ ಮಂಗಳೂರು ಇಲ್ಲವೇ ಮಣಿಪಾಲಕ್ಕೆ ಹೋಗಬೇಕು. ಹೀಗಾಗಿ ಶೃಂಗೇರಿ ಪಟ್ಟಣದಲ್ಲಿ ಆಸ್ಪತ್ರೆ ನಿರ್ಮಿಸಲು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನಾಳೆ ಸ್ವಯಂಪ್ರೇರಿತ ಶೃಂಗೇರಿ ಬಂದ್​ಗೆ ಕರೆ ನೀಡಲಾಗಿದೆ.

ಸ್ವಯಂಪ್ರೇರಿತ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಬಂದ್​ಗೆ ವ್ಯಾಪಕ ಬೆಂಬಲ ದೊರೆತಿದ್ದು, ಶೃಂಗೇರಿ ಪಟ್ಟಣ ಸಂಪೂರ್ಣ ಸ್ತಬ್ಧವಾಗಿದೆ.

Sringeri Bandh On October 22nd To Demand The Construction Of A Well-equipped Hospital

'ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ' ಈ ಬಂದ್​ಗೆ ಕರೆ ನೀಡಿದೆ. 14 ವರ್ಷಗಳಿಂದ ಸುಸಜ್ಜಿತ ಆಸ್ಪತ್ರೆಗೆ ಶೃಂಗೇರಿಯಲ್ಲಿ ಕೇಳಿ ಬರುತ್ತಲೇ ಇದೆ. ಶೃಂಗೇರಿಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಈ ಹಿಂದೆ ಸಾಕಷ್ಟು ಜನರು ಸಾವನ್ನಪ್ಪಿದ್ದಾರೆ. ಉತ್ತಮ ಚಿಕಿತ್ಸೆಗಾಗಿ ಶೃಂಗೇರಿ ಜನರು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನು ಅವಲಂಬಿಸಿದ್ದಾರೆ. ಶೃಂಗೇರಿಯಲ್ಲಿ ಉತ್ತಮ ಆಸ್ಪತ್ರೆ ಸ್ಥಾಪಿಸಬೇಕು ಎಂದು ಆಗ್ರಹಿಸಲೆಂದು ಜನರು ಸ್ವಯಂಪ್ರೇರಿತ ಶೃಂಗೇರಿ ಬಂದ್​ಗೆ ಕರೆ ನೀಡಿದ್ದಾರೆ.

ಕಾಫಿನಾಡಿನಲ್ಲಿ ಭಾರೀ ಮಳೆ; ಭೂಕುಸಿತ
ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬುಧವಾರ ರಾತ್ರಿ ಭಾರೀ ಮಳೆ ಸುರಿದಿದೆ. ಇದರ ಪರಿಣಾಮ ಹೊನ್ನಮ್ಮನಹಳ್ಳ ಜಲಪಾತದ ಬಳಿ ಭೂಕುಸಿತ ಉಂಟಾಗಿದೆ. ಗಿರಿಭಾಗಕ್ಕೆ ತೆರಳುವ ರಸ್ತೆಯ ಕವಿಕಲ್‌ಗಂಡಿ ಸೇರಿದಂತೆ ಅಲ್ಲಲ್ಲಿ ರಸ್ತೆ ತಡೆಗೋಡೆ ಕುಸಿದುದ ಹೋಗಿದೆ.

Sringeri Bandh On October 22nd To Demand The Construction Of A Well-equipped Hospital

ಹೊನ್ನಮ್ಮನಹಳ್ಳ ಜಲಪಾತದ ಹತ್ತಿರ ತೆರಳುವ ಮೆಟ್ಟಿಲುಗಳ ಅಕ್ಕಪಕ್ಕದಲ್ಲಿ ಭೂ ಕುಸಿತಗೊಂಡಿದ್ದು ಪಕ್ಕದ ಹೊನ್ನಮ್ಮನ ದೇವಸ್ಥಾನಕ್ಕೂ ಹಾನಿ ಉಂಟಾಗಿದೆ. ಮೆಟ್ಟಿಲುಗಳ ಕೆಳಗೆ ಸಂಪೂರ್ಣ ಧರೆಕುಸಿದಿದ್ದು ಮೆಟ್ಟಿಲುಗಳು ಸಹ ಕುಸಿದು ಬೀಳುವ ಆತಂಕ ಎದುರಾಗಿದೆ.

ಭೂ ಕುಸಿತದ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಹೊನ್ನಮ್ಮನಹಳ್ಳ ಜಲಪಾತದ ಹತ್ತಿರ ತೆರಳದಂತೆ ಸೂಚಿಸಲಾಗಿದೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಭೂ ಕಸಿತವಾಗಿರುವ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಪಂಡರವಳ್ಳಿ ಸಮೀಪವೂ ಸಹ ರಸ್ತೆಗೆ ಬೃಹತ್ ಗಾತ್ರದ ಬಂಡೆ ಬಿದ್ದಿದ್ದು, ವಾಹನ ಸವಾರರು ಹರಸಾಹಸ ಪಡುವಂತಾಗಿದೆ.

Sringeri Bandh On October 22nd To Demand The Construction Of A Well-equipped Hospital

ಗಿರಿಭಾಗಕ್ಕೆ ತೆರಳುವ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ನಿರ್ಮಿಸಲಾದ ತಡೆಗೋಡೆ ಬುಧವಾರ ರಾತ್ರಿ ಸುರಿದ ಮಳೆಗೆ ಅಲ್ಲಲ್ಲಿ ಬಿರುಕು ಬಿಟ್ಟಿದೆ ಹಾಗೂ ತಡೆಗೋಡೆಗಳ ಪಕ್ಕದಲ್ಲಿ ರಸ್ತೆ ಸಣ್ಣದಾಗಿ ಬಿರುಕು ಬಿಟ್ಟು ಭೂಕುಸಿತ ಉಂಟಾಗುವ ಆತಂಕ ಎದುರಾಗಿದೆ.

Recommended Video

India vs Pakistan ಪಂದ್ಯದ ಬಗ್ಗೆ ಯಾರು ಏನು ಹೇಳಿದರು | Oneindia Kannada

English summary
The locals have decided to hold a voluntary Sringeri Bandh on Friday demanding the construction of a well-equipped hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X