ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಕೀಯ ದೂರ ಸರಿದ ಪ್ರಮೋದ್ ಮುತಾಲಿಕ್: ಕಾರಣ ಏನು?

|
Google Oneindia Kannada News

Recommended Video

ಪ್ರಮೋದ್ ಮುತಾಲಿಕ್ ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ, ರಾಜಕೀಯಕ್ಕೆ ವಿದಾಯ ಹೇಳಲಿದ್ದಾರಾ? | Oneindia Kannada

ಚಿಕ್ಕಮಗಳೂರು, ಜೂನ್ 20: ಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ರಾಜಕೀಯದಿಂದ ದೂರ ಉಳಿಯುವುದಾಗಿ ಪ್ರಕಟಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ, ಜಾತಿ ಇದ್ದರೆ ಮಾತ್ರವೇ ರಾಜಕೀಯದಲ್ಲಿ ಲಾಭಿ ಮಾಡಲು ಸಾಧ್ಯ ಇದ್ಯಾವುದು ನನ್ನ ಬಳಿ ಇಲ್ಲ ಎಂದು ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಸತ್ಯ ನಿಮ್ಮ ಪರವಾಗಿದ್ರೆ, ನ್ಯಾಯಾಲಯಕ್ಕೆ ಹೋಗಿ:ಬಿಜೆಪಿಗೆ ಪ್ರಮೋದ್ ಮುತಾಲಿಕ್ ಸವಾಲು ಸತ್ಯ ನಿಮ್ಮ ಪರವಾಗಿದ್ರೆ, ನ್ಯಾಯಾಲಯಕ್ಕೆ ಹೋಗಿ:ಬಿಜೆಪಿಗೆ ಪ್ರಮೋದ್ ಮುತಾಲಿಕ್ ಸವಾಲು

ರಾಜಕೀಯದ ಸಹವಾಸವೇ ಬೇಡ, ಇನ್ನೆಂದೂ ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದು ಪ್ರಮೋದ್ ಮುತಾಲಿಕ್ ಘೋಷಿಸಿದ್ದು, ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ನೆಲೆ ಕಂಡುಕೊಳ್ಳುವುದು ಕಷ್ಟ, ಪಕ್ಷೇತರವಾಗಿ ಗೆದ್ದರೂ ಯಾರಿಗೂ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಮುತಾಲಿಕ್ ಹೇಳಿದ್ದಾರೆ.

'ಹಿಂದೂಗೆ ಬಿಜೆಪಿ, ಸಂಘ ಪರಿವಾರ ಬೆಂಬಲಿಸುವುದಿಲ್ಲ'

'ಹಿಂದೂಗೆ ಬಿಜೆಪಿ, ಸಂಘ ಪರಿವಾರ ಬೆಂಬಲಿಸುವುದಿಲ್ಲ'

ನಿಷ್ಠಾವಂತ ಹಿಂದೂ ಕಾರ್ಯಕರ್ತನಿಗೆ ಬಿಜೆಪಿ ಆಗಲಿ ಸಂಘ ಪರಿವಾರವಾಗಲಿ ಬೆಂಬಲ ಕೊಡುವುದಿಲ್ಲ, ರಾಜಕೀಯದಲ್ಲಿ ವಿಫಲವಾಗಿರುವ ಬಗ್ಗೆ ಬೇಸರವಿದೆ. ಆದರೆ ಇನ್ನೆಂದೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಶ್ರೀರಾಮ ಸೇನೆಯ ಯಾವೊಬ್ಬ ಮುಖಂಡನೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಸಂಘಟನೆಯನ್ನು ಬಲಗೊಳಿಸುತ್ತೇನೆ ಎಂದು ಅವರು ಹೇಳಿದರು.

ವ್ಯಾಲೆಂಟೈನ್ಸ್ ಡೇ ಆಚರಣೆಗೆ ಪ್ರಮೋದ್ ಮುತಾಲಿಕ್ ವಿರೋಧ ವ್ಯಾಲೆಂಟೈನ್ಸ್ ಡೇ ಆಚರಣೆಗೆ ಪ್ರಮೋದ್ ಮುತಾಲಿಕ್ ವಿರೋಧ

ಗೋರಕ್ಷಕ ಶಿವು ಸಾವು ಸಿಬಿಐಗೆ ಒಪ್ಪಿಸಲು ಆಗ್ರಹ

ಗೋರಕ್ಷಕ ಶಿವು ಸಾವು ಸಿಬಿಐಗೆ ಒಪ್ಪಿಸಲು ಆಗ್ರಹ

ಗೋರಕ್ಷಕ ಶಿವು ಸಾವಿನ ತನಿಖೆಯನ್ನು ಸರ್ಕಾರವು ಸಿಬಿಐಗೆ ಒಪ್ಪಿಸಬೇಕು ಎಂದು ಮುತಾಲಿಕ್ ಒತ್ತಾಯಿಸಿದರು. ಶಿವು ಸಾವನ್ನು ಆತ್ಮಹತ್ಯೆ ಎಂದು ಅದನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಅವರು ಹೇಳಿದರು.

ಎಂಇಎಸ್ ಟಿಕೆಟ್‌ನಿಂದಲೂ ಸ್ಪರ್ಧಿಸಿದ್ದರು

ಎಂಇಎಸ್ ಟಿಕೆಟ್‌ನಿಂದಲೂ ಸ್ಪರ್ಧಿಸಿದ್ದರು

ಹಿಂದೂ ಪ್ರತಿಪಾದಿ ಆಗಿರುವ ಪ್ರಮೋದ್ ಮುತಾಲಿಕ್ ಅವರು ಹಲವು ಬಾರಿ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ ಆದರೆ ಗೆಲುವು ಸಾಧ್ಯವಾಗಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂಇಎಸ್‌ ಟಿಕೆಟ್‌ನಿಂದ ಬೆಳಗಾವಿಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು.

ಬಿಜೆಪಿ ಯಿಂದ ಟಿಕೆಟ್ ಕೇಳಿದ್ದ ಪ್ರಮೋದ್ ಮುತಾಲಿಕ್

ಬಿಜೆಪಿ ಯಿಂದ ಟಿಕೆಟ್ ಕೇಳಿದ್ದ ಪ್ರಮೋದ್ ಮುತಾಲಿಕ್

ಪ್ರಮೋದ್ ಮುತಾಲಿಕ್ ಅವರು ಹಲವು ಬಾರಿ ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿ ಆಗಿದ್ದರು. ಆದರೆ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಮುತಾಲಿಕ್ ಅವರು ಬಿಜೆಪಿ ಮತ್ತು ಸಂಘ ಪರಿವಾರದ ವಿರೋಧಿಯಾಗಿ ಏಕಾಂಗಿಯಾಗಿ ಶ್ರೀರಾಮ ಸೇನೆ ಕಟ್ಟಿ ಬೆಳೆಸಿದ್ದಾರೆ.

English summary
Sri Ram Sene organization president Pramod Muthalik said he never contest to election in future. He said i failed in politics so i quite politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X