ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಷತ್ ಘಟನೆ ಬಳಿಕ ನೊಂದು ಹೋಗಿದ್ದ ಎಸ್. ಎಲ್. ಧರ್ಮೇಗೌಡ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್ 29; " ವಿಧಾನ ಪರಿಷತ್‌ನಲ್ಲಿ ಕೆಲವು ದಿನಗಳ ಹಿಂದೆ ನಡೆದ ಘಟನೆ ಬಳಿಕ ಅಣ್ಣ ಮನನೊಂದಿದ್ದರು" ಎಂದು ಉಪ ಸಭಾಪತಿ ಎಸ್. ಎಲ್. ಧರ್ಮೇಗೌಡ ಸಹೋದರ ಎಸ್. ಎಲ್. ಭೋಜೇಗೌಡ ಹೇಳಿದ್ದಾರೆ.

Recommended Video

ಸಜ್ಜನ ರಾಜಕಾರಣಿ , ಈ ಸಾವು ನ್ಯಾಯವೇ? | DKS | Oneindia Kannada

ಸೋಮವಾರ ರಾತ್ರಿ ಎಸ್. ಎಲ್. ಧರ್ಮೇಗೌಡ (65) ಅವರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ಪಾರ್ಥಿವ ಶರೀರವನ್ನು ಕಡೂರಿನ ಸಖರಾಯಪಟ್ಟಣಕ್ಕೆ ತರಲಾಗುತ್ತಿದೆ.

ಪಂಚಾಯಿತಿಯಿಂದ ಪರಿಷತ್ ತನಕ; ಎಸ್. ಎಲ್. ಧರ್ಮೇಗೌಡ ಪರಿಚಯ ಪಂಚಾಯಿತಿಯಿಂದ ಪರಿಷತ್ ತನಕ; ಎಸ್. ಎಲ್. ಧರ್ಮೇಗೌಡ ಪರಿಚಯ

ಎಸ್. ಎಲ್. ಧರ್ಮೇಗೌಡ ಸಹೋದರ, ವಿಧಾನ ಪರಿಷತ್ ಸದಸ್ಯ ಎಸ್. ಎಲ್‌. ಭೋಜೇಗೌಡ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದು, "ವಿಧಾನ ಪರಿಷತ್ ಘಟನೆಯಿಂದ ಅಣ್ಣ ಮನ ನೊಂದಿದ್ದರು. ಬೇಸರವಾಗಿದ್ದರೆ ರಾಜೀನಾಮೆ ಕೊಡು. ಬೇಕಿದ್ದರೆ ನಾನೂ ರಾಜೀನಾಮೆ ಕೊಡುವುದಾಗಿ ಹೇಳಿದ್ದೆ" ಎಂದರು.

ಸಖರಾಯಪಟ್ಟಣಕ್ಕೆ ಧರ್ಮೇಗೌಡ ಪಾರ್ಥಿವ ಶರೀರ ಆಗಮನ: ಅಂತಿಮ ದರ್ಶನ ಪಡೆದ ಸಿಎಂಸಖರಾಯಪಟ್ಟಣಕ್ಕೆ ಧರ್ಮೇಗೌಡ ಪಾರ್ಥಿವ ಶರೀರ ಆಗಮನ: ಅಂತಿಮ ದರ್ಶನ ಪಡೆದ ಸಿಎಂ

SL Boje Gowda Statement On Brother SL Dharme Gowda Death

"ಇವತ್ತು ರಾಜೀನಾಮೆ ಕೊಡಲು ಹೋಗೋಣ ಎಂದು ಹೇಳಿದ್ದೆ. ಅಷ್ಟರೊಳಗೆ ಅಣ್ಣ ನನಗೆ ಬಹಳ ಮೋಸ ಮಾಡಿಬಿಟ್ಟರು. ಅಷ್ಟು ಭೀಕರವಾಗಿ ಸಾಯಲು ಅವರಿಗೆ ಧೈರ್ಯವಾದರೂ ಹೇಗೆ ಬಂತು?" ಎಂದು ಭೋಜೇಗೌಡರು ಕಣ್ಣೀರು ಹಾಕಿದರು.

ಎಸ್. ಎಲ್. ಧರ್ಮೇಗೌಡ ಆತ್ಮಹತ್ಯೆ; ಕಂಬನಿ ಮಿಡಿದ ಜಿಟಿಡಿ ಎಸ್. ಎಲ್. ಧರ್ಮೇಗೌಡ ಆತ್ಮಹತ್ಯೆ; ಕಂಬನಿ ಮಿಡಿದ ಜಿಟಿಡಿ

English summary
Deputy chairman of Karnataka legislative council S. L. Dharme Gowda upset after the incident in legislative council said S. L. Boje Gowda brother of Dharme Gowda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X