• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಿದ್ಧಾರ್ಥ್ ಸಾವಿನೊಂದಿಗೆ ಕಮರಿ ಹೋಗುತ್ತಿವೆಯೇ ಅವರ ಕನಸಿನ ಹೂಬಳ್ಳಿಗಳು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್ 5: ಕಾಫಿ ಕಿಂಗ್ ಸಿದ್ಧಾರ್ಥ್ ಹೆಗಡೆ ಆರ್ಥಿಕ ಸಂಕಷ್ಟದಿಂದ ಆತ್ಮಹತ್ಯೆಯ ದಾರಿ ಹಿಡಿದ ಬೆನ್ನಲ್ಲೆ ಅವರ ಕನಸಿನ ಕೂಸು ಕಾಫಿ ಡೇ ಸಂಕಷ್ಟಕ್ಕೆ ಸಿಲುಕಿದೆ. ಅದರ ಜೊತೆಗೆ ಅವರ ಮತ್ತಷ್ಟು ಕನಸುಗಳೂ ಒಂದೊಂದೇ ಕಮರುತ್ತಿವೆ.

ಕಳೆದ ಜುಲೈ 29ರಂದು ಆರ್ಥಿಕ ಸಂಕಷ್ಟ, ಸಾಲಭಾದೆಯಿಂದ ಕಾಫಿ ದೊರೆ ಸಿದ್ಧಾರ್ಥ್ ಹೆಗಡೆ ಶರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಅವರ ಸಾವಿನ ಬೆನ್ನಲ್ಲೇ ಅವರ ಒಂದೊಂದು ಕನಸುಗಳೂ ಆತ್ಮಹತ್ಯೆಯ ದಾರಿ ಹಿಡಿದಂತಿದೆ. ಇದೀಗ ಅವರ ಏಷ್ಯಾ ಪೆಸಿಫಿಕ್ ಇಂಡಿಯನ್ ಕಾರ್ ರ‍್ಯಾಲಿಗೂ ಬ್ರೇಕ್ ಬೀಳುವ ಸಾಧ್ಯತೆ ಇದೆ.

 ಬಾಗಿಲು ಎಳೆದುಕೊಂಡ ಡ್ಯಾಫ್ಕೊ

ಬಾಗಿಲು ಎಳೆದುಕೊಂಡ ಡ್ಯಾಫ್ಕೊ

ಒಂದು ವಾರದ ಹಿಂದೆ ಸಿದ್ಧಾರ್ಥ್ ಹೆಗಡೆಯ ಕನಸಿನ ಕಂಪನಿಯಾದ ಡ್ಯಾಪ್ಕೋ ಕಂಪನಿಗೆ ಬಾಗಿಲು ಬಿದ್ದಿದೆ. ಸಿದ್ದಾರ್ಥ್ ಹೆಗಡೆಯ ಕಾಫಿಯ ಕೋಟೆ ಸಂಕಷ್ಟಕ್ಕೆ ಸಿಲುಕಿದೆ. ಇದರ ಬೆನ್ನಲ್ಲೆ ಸಿದ್ಧಾರ್ಥ್ ಹೆಗಡೆಯ ಮತ್ತೊಂದು ಕನಸಾದ ಏಷ್ಯಾ ಫೆಸಿಫಿಕ್ ಇಂಡಿಯನ್ ಕಾರ್ ರ‍್ಯಾಲಿಗೂ ಬ್ರೇಕ್ ಬೀಳುವ ಸಾಧ್ಯತೆ ಇದೆ.

ತುಂಬಲಾರದ ನಷ್ಟ; ಸಿದ್ಧಾರ್ಥ ಒಡೆತನದ ಫರ್ನಿಚರ್ ಕಂಪನಿ ಬಂದ್ತುಂಬಲಾರದ ನಷ್ಟ; ಸಿದ್ಧಾರ್ಥ ಒಡೆತನದ ಫರ್ನಿಚರ್ ಕಂಪನಿ ಬಂದ್

 ಏಷ್ಯಾ ಫೆಸಿಫಿಕ್ ಇಂಡಿಯನ್ ಕಾರ್ rallyಗೂ ಬ್ರೇಕ್?

ಏಷ್ಯಾ ಫೆಸಿಫಿಕ್ ಇಂಡಿಯನ್ ಕಾರ್ rallyಗೂ ಬ್ರೇಕ್?

15 ವರ್ಷಗಳ ಹಿಂದೆ ಸಿದ್ಧಾರ್ಥ್ ಹೆಗಡೆ‌ ಚಿಕ್ಕಮಗಳೂರಿನ ಕಾಫಿ ಕಣಿವೆಗಳಲ್ಲಿ ಅದ್ಧೂರಿಯಾಗಿ ಕಾರ್ ರ‍್ಯಾಲಿಗಳನ್ನು ಆಯೋಜಿಸಿ ಮೆಚ್ಚುಗೆ ಗಳಿಸುವ ಜೊತೆಗೆ ಮಲೆನಾಡು ಚಿಕ್ಕಮಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದ್ದರು. ಪ್ರತಿ ವರ್ಷ ಈ ಕಾರ್ ರ‍್ಯಾಲಿಯನ್ನು ಆಯೋಜನೆ ಮಾಡಲಾಗುತ್ತಿದ್ದು ಕಾಫಿ ಕಣಿವೆಗಳಲ್ಲಿ ತರಹೇವಾರಿ ಕಾರ್ ಗಳ ಆರ್ಭಟವನ್ನು ನೋಡಿ ಮಲೆನಾಡಿಗರ ಮೈ ಜುಮ್ಮೆನ್ನುವಂತೆ ಮಾಡುತ್ತಿತ್ತು.

 ವಿದೇಶದಿಂದಲೂ ಬರುತ್ತಿದ್ದ ಜನ

ವಿದೇಶದಿಂದಲೂ ಬರುತ್ತಿದ್ದ ಜನ

ಈ ಕಾರ್ ರ್ಯಾಲಿಯನ್ನು ನೋಡಲು ವಿದೇಶಿಗರು ಸೇರಿದಂತೆ ಹೊರ ರಾಜ್ಯಗಳಿಂದಲೂ ರ‍್ಯಾಲಿ ಪ್ರೇಮಿಗಳು ಆಗಮಿಸುತ್ತಿದ್ದರು. ಆದರೆ ಈಗ ಈ ಕಾರ್ ರ್ಯಾಲಿ ನಡೆಯುವುದೇ ಅನುಮಾನವಾಗಿದ್ದು ಮಲೆನಾಡಿಗರಲ್ಲಿ ನಿರಾಸೆ ಉಂಟಾಗಿದೆ.

ಇನ್ನು ಈ ರ‍್ಯಾಲಿಗಾಗಿಯೇ ಸಿದ್ಧಾರ್ಥ್ ಹೆಗಡೆ ತಮ್ಮ ತೋಟಗಳ ವ್ಯಾಪ್ತಿಯಲ್ಲಿ ರೂಟ್ ಗಳನ್ನು ಸಹ ನಿರ್ಮಾಣ ಮಾಡಿದ್ದರು. ಪ್ರತಿ ವರ್ಷ ಸ್ವತಂ ತಾವೇ ರೂಟ್ ಗಳನ್ನು ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದರು. ಈ ಕಾರ್ ರ‍್ಯಾಲಿಯಲ್ಲಿ ಗೌರವ್ ಗಿಲ್ ಸೇರಿದಂತೆ ಅಂತರರಾಷ್ಟ್ರೀಯ ಚಾಂಪಿಯನ್ ಗಳು ಭಾಗಿಯಾಗುತ್ತಿದ್ದರು.

ಕಾಫಿ ಡೇ ಅಂಗ ಸಂಸ್ಥೆ ಸಿಕಾಲ್ ಮಾರಾಟ ಪ್ರಕ್ರಿಯೆ ಮತ್ತೆ ಚುರುಕುಕಾಫಿ ಡೇ ಅಂಗ ಸಂಸ್ಥೆ ಸಿಕಾಲ್ ಮಾರಾಟ ಪ್ರಕ್ರಿಯೆ ಮತ್ತೆ ಚುರುಕು

 ರೂಟ್ ನಿರ್ಮಾಣಕ್ಕೆ ಕಷ್ಟ

ರೂಟ್ ನಿರ್ಮಾಣಕ್ಕೆ ಕಷ್ಟ

ಈ ಬಾರಿ ಚಿಕ್ಕಮಗಳೂರು ಸ್ಪೋರ್ಟ್ ಕ್ಲಬ್ ಸಿದ್ಧಾರ್ಥ್ ಹೆಗಡೆ ಹೆಸರಿನಲ್ಲಿಯೇ ಕಾರ್ ರ‍್ಯಾಲಿ ಆಯೋಜಿಸಲು ಮುಂದಾಗಿತ್ತು. ಆದರೆ ರೂಟ್ ನಿರ್ಮಾಣ ಮಾಡಲು ಸಂಸ್ಥೆಗೆ ಕಷ್ಟವಾಗುತ್ತಿದ್ದು, ರ‍್ಯಾಲಿ ರೂಟ್ ನಿರ್ಮಾಣ ಮಾಡಲು ಆರು ತಿಂಗಳು ಸಮಯ ಬೇಕು. ಆದರೆ ಕಾಫಿ ಡೇ ಬುಡವೇ ಅಲುಗಾಡುತ್ತಿದ್ದು ಇದಕ್ಕಾಗಿ ಯಾರ ಬಳಿ ಮಾತನಾಡುವುದು ಎಂಬುದೇ ತಲೆನೋವಾಗಿ ಪರಿಣಮಿಸಿದೆ.

ಒಟ್ಟಾರೆ ಉದ್ಯಮಿ ಸಿದ್ಧಾರ್ಥ್ ಹೆಗಡೆ ಸಾವಿನ ನಂತರ ಅವರ ಒಂದೊಂದೇ ಕನಸುಗಳು ನುಚ್ಚುನೂರಾಗುತ್ತಿವೆ.‌ ಇದರ ಹಾದಿಗೆ ಕಾಫಿ ಡೇ ರ‍್ಯಾಲಿಯೂ ಸೇರಿ ಹೋಗುತ್ತದೆಯಾ ಎಂಬ ಆತಂಕ ಮಲೆನಾಡಿಗರು ಹಾಗೂ ರ‍್ಯಾಲಿ ಪ್ರೇಮಿಗಳಲ್ಲಿ ಮನೆಮಾಡಿದೆ.

ವಿ. ಜಿ. ಸಿದ್ದಾರ್ಥ ಮಾಲಿಕತ್ವದ ಗ್ಲೋಬಲ್ ವಿಲೇಜ್ 2700 ಕೋಟಿಗೆ ಮಾರಾಟವಿ. ಜಿ. ಸಿದ್ದಾರ್ಥ ಮಾಲಿಕತ್ವದ ಗ್ಲೋಬಲ್ ವಿಲೇಜ್ 2700 ಕೋಟಿಗೆ ಮಾರಾಟ

English summary
Coffee king Siddhartha Hegde committed suicide by jumping into the Sharavati River on July 29. His dreams are also dying one by one. Now Asia Pacific Indian car rally is likely to end this time,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X