ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೊಲೀಸರ ಮೇಲಿನ ಸೇಡಿಗೆ ಶಂಕರಾಚಾರ್ಯರ ಪುತ್ಥಳಿ ಬಳಕೆ ಮಾಡಿದ ಕಿಡಿಗೇಡಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 14: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿನ ಶಂಕರಾಚಾರ್ಯರ ಪುತ್ಥಳಿಗೆ ಎಸ್.ಡಿ.ಪಿ.ಐ ಬಾವುಟ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಪೊಲೀಸರ ಮೇಲಿನ ಸೇಡಿಗೆ ಶಂಕರಾಚಾರ್ಯರ ಪುತ್ಥಳಿಯನ್ನು ಕಿಡಿಗೇಡಿ ಬಳಕೆ ಮಾಡಿದ್ದಾನೆ.

ಕಳ್ಳತನ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದ ಆರೋಪಿಯಿಂದ ಈ ಕೃತ್ಯ ನಡಿದಿದೆ. ಪೊಲೀಸರ‌ ಮೇಲಿನ ದ್ವೇಷಕ್ಕೆ ಕೋಮು ಗಲಭೆಯನ್ನು ಸೃಷ್ಟಿಸುವ ಉಪಾಯ ಹೆಣೆದಿದ್ದ ಎನ್ನಲಾಗಿದೆ.

ಶೃಂಗೇರಿ: ಶಂಕರಾಚಾರ್ಯರರ ಪುತ್ಥಳಿ ಮೇಲೆ ಎಸ್.ಡಿ.ಪಿ.ಐ ಸಂಘಟನೆ ಬಾವುಟ, ಪ್ರತಿಭಟನೆಶೃಂಗೇರಿ: ಶಂಕರಾಚಾರ್ಯರರ ಪುತ್ಥಳಿ ಮೇಲೆ ಎಸ್.ಡಿ.ಪಿ.ಐ ಸಂಘಟನೆ ಬಾವುಟ, ಪ್ರತಿಭಟನೆ

ಸಿಸಿಟಿವಿ ದೃಶ್ಯದಿಂದ ಶಂಕರಾಚಾರ್ಯರ ಪುತ್ಥಳಿ ಮೇಲೆ ಬೇರೊಂದು ಧರ್ಮದ ಬಾವುಟ ಪ್ರಕರಣ ಬಯಲಾಗಿದೆ. ಶೃಂಗೇರಿ ಮೂಲದ ಎಮೀಲ್ ಎಂಬ ಕಿಡಿಗೇಡಿಯಿಂದ ಕೃತ್ಯ ನಡೆದಿದೆ. ಶೃಂಗೇರಿಯ ಚಿನ್ನದ ಅಂಗಡಿ ಕಳ್ಳತನ ಪ್ರಕರಣದಲ್ಲಿ ಮಿಲಿಂದಾ ಅಲಿಯಾಸ್ ಮಿಲ್ಲಿ ವಿಚಾರಣೆ ಎದುರಿಸಿದ್ದನು.

SDPI Flag On Shankaracharya Statue In Sringeri: Accused Done This To Take Revenge On Police

ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯ ಗಲಭೆ ಘಟನೆ ಹಸಿಯಾಗಿರುವ ಹೊತ್ತಿನಲ್ಲೇ ಮಲೆನಾಡಿನಲ್ಲಿ ಅಶಾಂತಿ ಮೂಡಿಸುವ ಹುನ್ನಾರ ಮಾಡಿದ್ದ ಎನ್ನಲಾಗಿದೆ.

ಶಂಕರಾಚಾರ್ಯರ ಪುತ್ಥಳಿಗೆ ಎಸ್.ಡಿ.ಪಿ.ಐ ಸಂಘಟನೆ ಬಾವುಟ ಹಾಕಿ ಅಶಾಂತಿ ಮೂಡಿಸುವ ಯತ್ನ ನಡೆಸಿದ್ದು, ಆರೋಪಿಯ ಹಿನ್ನೆಲೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸಿಸಿಟಿವಿಯಲ್ಲಿ ಬಾವುಟ ಹಾಕುವ ದೃಶ್ಯ ಸೆರೆಯಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

SDPI Flag On Shankaracharya Statue In Sringeri: Accused Done This To Take Revenge On Police

ಶೃಂಗೇರಿಯ ಶಂಕರಾಚಾರ್ಯರ ಪುತ್ಥಳಿಗೆ ಎಸ್.ಡಿ.ಪಿ.ಐ ಸಂಘಟನೆ ಬಾವುಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಅವರು ಹೇಳಿಕೆ ನೀಡಿದ್ದು, ಕುಡಿದ ನಶೆಯಲ್ಲಿ ಆರೋಪಿ ಈ ರೀತಿ ಕೃತ್ಯ ಮಾಡಿದ್ದಾನೆ ಎಂದರು.

ಆರೋಪಿ ಮಿಲಿಂದಾ ಅಲಿಯಾಸ್ ಮಿಲ್ಲಿ ಈ ಕೃತ್ಯ ಎಸಗಿದ್ದು, ಈತ ಯಾವುದೇ ಸಂಘಟನೆ, ಪಕ್ಷಕ್ಕೆ ಸೇರಿದವನಲ್ಲ ಇದು ಪೋರ್ವ ನಿಯೋಜಿತ ಘಟನೆ ಅಲ್ಲ. ತನಿಖೆಯಲ್ಲಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ತಿಳಿಸಿದರು.

English summary
The statue of Shankaracharya in Sringeri town in Chikkamagaluru district has got a new twist on the Muslim flag case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X