ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರಿಗೆ ಭೂ ವಿಜ್ಞಾನಿಗಳ ಭೇಟಿ, ಶೀಘ್ರವೇ ಸರ್ಕಾರಕ್ಕೆ ಸಮಗ್ರ ವರದಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 22: ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಚಿಕ್ಕಮಗಳೂರಿನಲ್ಲಿ ಹೆಚ್ಚಿನ ಮಟ್ಟದಲ್ಲಿ ಭೂಕುಸಿತವಾಗಿದ್ದು, ಇಂದು ಅದರ ಪರಿಶೀಲನೆಗೆ ಭೂವಿಜ್ಞಾನಿಗಳು ಭೇಟಿ ನೀಡಿದ್ದರು.

ಭಾರತೀಯ ಸರ್ವೇಕ್ಷಣಾ ಇಲಾಖೆಯ ವಿಜ್ಞಾನಿಗಳ ತಂಡ, ಭಾರೀ ಪ್ರಮಾಣದಲ್ಲಿ ಭೂ ಕುಸಿತವಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು.

 ಸಿಎಂ ಆಜ್ಞೆಯಂತೆ ನೆರೆ ಪರಿಸ್ಥಿತಿ ವೀಕ್ಷಣೆಗೆ ಚಿಕ್ಕಮಗಳೂರಿಗೆ ತೆರಳಿದ ಸಿ.ಟಿ.ರವಿ, ಮಾಧುಸ್ವಾಮಿ ಸಿಎಂ ಆಜ್ಞೆಯಂತೆ ನೆರೆ ಪರಿಸ್ಥಿತಿ ವೀಕ್ಷಣೆಗೆ ಚಿಕ್ಕಮಗಳೂರಿಗೆ ತೆರಳಿದ ಸಿ.ಟಿ.ರವಿ, ಮಾಧುಸ್ವಾಮಿ

ವಿಜ್ಞಾನಿಗಳಾದ ಕಪಿಲ್ ಸಿಂಗ್, ಕಮಲ್ ಕುಮಾರ್, ದಯಾನಂದ್ ನೇತೃತ್ವದ ತಂಡ ಹೆಚ್ಚಿನ ಭೂಕುಸಿತಕ್ಕೆ ಸಾಕ್ಷಿಯಾಗಿದ್ದ ಚಾರ್ಮಾಡಿ ಘಾಟ್, ಅಲೇಖಾನ್, ಮಲೆಮನೆ, ದುರ್ಗದಹಳ್ಳಿ ಸೇರಿದಂತೆ ಇತರೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

Scientists visit Landslide Areas In Chikkamagaluru

ಭೂಕುಸಿತದ ಹಿಂದಿನ ಕಾರಣ, ಮಳೆಯ ತೀವ್ರತೆ, ಭೂಕಂಪನದ ಸಾಧ್ಯತೆ ಕುರಿತು ಈ ವೇಳೆ ಪರೀಕ್ಷಿಸಲಾಯಿತು. ಮುಂದಾಗಬಹುದಾದ ಅನಾಹುತದ ಸಾಧ್ಯತೆಯನ್ನೂ ಪರಿಶೀಲಿಸಲಾಗಿದೆ. ಈ ಅಧ್ಯಯನದ ಕುರಿತು ತಂಡ ಕೆಲವೇ ದಿನಗಳಲ್ಲಿ ಸರ್ಕಾರಕ್ಕೆ ಸಮಗ್ರ ವರದಿ‌ ನೀಡಲಿದೆ.

English summary
Due to the heavy rain in Chikkamagaluru, has been hit by a large number of landslides, which were visited by geologists today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X