ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು: ಲಕ್ಷಾಂತರ ರೂ. ಬೆಲೆಬಾಳುವ ಶ್ರೀಗಂಧ ಮರಗಳ ಕಳ್ಳತನ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂನ್ 29: ಲಕ್ಷಾಂತರ ರುಪಾಯಿ ಬೆಲೆಬಾಳುವ ಶ್ರೀಗಂಧದ ಮರಗಳನ್ನು ಚಿಕ್ಕಮಗಳೂರು ಜಿಲ್ಲೆಯ ದೊರನಾಳು ಗ್ರಾಮದ ಸಮೀಪದ ವಿಶುಕುಮಾರ್ ಎಂಬುವವರ ತೋಟದಲ್ಲಿ ಭಾನುವಾರ ರಾತ್ರಿ ಕಳ್ಳತನ‌ ಮಾಡಲಾಗಿದೆ.

Recommended Video

Congress Cycle Rally against Fuel hike : ಸೈಕಲ್ ಏರಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು|Oneindia Kannada

15 ವರ್ಷದ ಆರು ಮರಗಳನ್ನು ಕಡಿದಿರುವ ಕಳ್ಳರು, ಎರಡು ಮರಗಳನ್ನು ತಗೆದುಕೊಂಡು ಹೋಗಿದ್ದಾರೆ.‌ ಇನ್ನುಳಿದ ಎರಡು ಮರಗಳನ್ನು ಸಾಗಿಸುವ ವೇಳೆ ನಾಯಿಗಳು ಬಂದ ಕಾರಣ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.‌ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಕಾಫಿ ನಾಡಿನಲ್ಲಿ ಕಬ್ಬೆಕ್ಕುಗಳ ಸರಣಿ ಸಾವು ತಂದ ಆತಂಕಕಾಫಿ ನಾಡಿನಲ್ಲಿ ಕಬ್ಬೆಕ್ಕುಗಳ ಸರಣಿ ಸಾವು ತಂದ ಆತಂಕ

Sandalwood Tree Worth Lakhs Of Rupees Stolen From Doranalu Village

ಸುಮಾರು ನಾಲ್ಕೂವರೆ ಎಕರೆ ಜಮೀನಿನಲ್ಲಿ 300 ಶ್ರೀಗಂಧ, ಸಾವಿರಾರು ತೇಗದ ಮರಗಳನ್ನು ಹಾಕಲಾಗಿದೆ. ಕಳೆದ ವರ್ಷವೂ ಸಹ ಎರಡು ಮರಗಳನ್ನು ಕಳ್ಳತನ ಮಾಡಲಾಗಿತ್ತು. ಈ ವೇಳೆ ಸಿಸಿಟಿವಿ ಅಳವಡಿಸಿ ನಾಯಿಗಳನ್ನು ಸಹ ಸಾಕಿ ತೋಟದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಆದರೆ ನಿನ್ನೆ ಮತ್ತೆ ಕಳ್ಳತನವಾಗಿರುವುದು ಮಾಲೀಕರಲ್ಲಿ ಆತಂಕ ಉಂಟುಮಾಡಿದೆ.

English summary
Lakhs of rupees worth of sandalwood Tree were stolen on Sunday night in the garden of Visukumar, near Doranalu village in Chikkamagaluru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X