ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಕಾರ್ಫ್, ಕೇಸರಿ ಶಾಲು ವಿವಾದ; ಕೊಪ್ಪ ಕಾಲೇಜು ಆವರಣದಲ್ಲಿ ಗಲಾಟೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 11; ಕೇಸರಿ ಶಾಲು- ಸ್ಕಾರ್ಫ್ ವಿವಾದ ಪೋಷಕರ ಸಭೆಯಲ್ಲಿ ಸೋಮವಾರ ಶಾಂತಿಯುತ ಪರಿಹಾರ ಕಂಡಿತ್ತು. ಆದರೆ ಇದೀಗ ಕೊಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ವಿವಾದ ವಿಕೋಪಕ್ಕೆ ತಿರುಗಿದೆ, ಗಲಾಟೆ ನಡೆದಿದೆ.

ಕೇಸರಿ ಶಾಲು-ಸ್ಕಾರ್ಫ್ ವಿಚಾರವಾಗಿ ಮಂಗಳವಾರ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆದು ವಿದ್ಯಾರ್ಥಿಗಳ ಗುಂಪು ಕಾಲೇಜು ಆವರಣದಲ್ಲಿಯೇ ಕೈ ಕೈ ಮಿಲಾಯಿಸಿಕೊಂಡು ಬಡಿದಾಡಿದದ್ದಾರೆ. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಮಾಯಣ ಎಕ್ಸ್‌ಪ್ರೆಸ್‌ ಸಿಬ್ಬಂದಿಯ ಕೇಸರಿ ಉಡುಪು ಬದಲಾವಣೆ ರಾಮಾಯಣ ಎಕ್ಸ್‌ಪ್ರೆಸ್‌ ಸಿಬ್ಬಂದಿಯ ಕೇಸರಿ ಉಡುಪು ಬದಲಾವಣೆ

ಕೊಪ್ಪ ಡಿಗ್ರಿ ಕಾಲೇಜಿನಲ್ಲಿ ಸ್ಕಾರ್ಫ್-ಕೇಸರಿ ಶಾಲು ವಿವಾದ ಶುರುವಾದ ಬೆನ್ನಲ್ಲೇ, ಕೊಪ್ಪದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿಯೂ ವಿವಾದ ಏರ್ಪಟ್ಟಿತ್ತು. ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಸ್ಕಾರ್ಫ್ ಧರಿಸುವುದನ್ನು ವಿರೋಧಿಸಿ ಕೆಲ ವಿದ್ಯಾರ್ಥಿಗಳು ಕಳೆದ ನಾಲ್ಕು ದಿನಗಳಿಂದ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತಿದ್ದರು.

ಉಡುಪಿ ಪೊಲೀಸ್ ಕೇಸರಿ ವಸ್ತ್ರದ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ವಿಚಾರ; ತ್ರಿಶೂಲ ಕೊಡೋದು ಒಳ್ಳೆಯದೆಂದ ರಘುಪತಿ ಭಟ್ಉಡುಪಿ ಪೊಲೀಸ್ ಕೇಸರಿ ವಸ್ತ್ರದ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ವಿಚಾರ; ತ್ರಿಶೂಲ ಕೊಡೋದು ಒಳ್ಳೆಯದೆಂದ ರಘುಪತಿ ಭಟ್

Saffron Scarfs And Shawls Issue Clash In Koppa College

ಮಂಗಳವಾರ ಇದೇ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಇಷ್ಟು ದಿನ ಪ್ರತಿಭಟನೆಯಲ್ಲಿ ವ್ಯಕ್ತವಾಗುತ್ತಿದ್ದ ವಿರೋಧ ಇದೀಗ ವಿದ್ಯಾರ್ಥಿಗಳು ಪರಸ್ಪರ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ಘಟನೆಗೆ ಸಂಬಂಧಿಸಿದಂತೆ ಕೊಪ್ಪ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರ್. ಆರ್. ನಗರ ಉಪ ಚುನಾವಣೆ; ವಿವಾದ ಎಬ್ಬಿಸಿದ ಕೇಸರಿ ಮಾಸ್ಕ್! ಆರ್. ಆರ್. ನಗರ ಉಪ ಚುನಾವಣೆ; ವಿವಾದ ಎಬ್ಬಿಸಿದ ಕೇಸರಿ ಮಾಸ್ಕ್!

ಶಾಂತಿ ಸಭೆ ನಡೆದಿತ್ತು; ಕೊಪ್ಪ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಕಾರ್ಫ್ ಮತ್ತು ಕೇಸರಿ ಶಲ್ಯ ವಿವಾದಕ್ಕೆ ಸಂಬಂಧಿಸಿದಂತೆ ಪೋಷಕರ ಸಭೆ ನಡೆಸಿ ವಿವಾದಕ್ಕೆ ಶಾಂತಿಯುತ ತೆರೆ ಬಿದ್ದಿತ್ತು. ಸಭೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗಳಿಗೆ ಸ್ಕಾಫ್ ಧರಿಸುವಂತಿಲ್ಲ ಹಾಗೂ ತಲೆಯ ಮೇಲೆ ವೇಲ್ ಹಾಕಿಕೊಳ್ಳಲು ಅಷ್ಟೇ ಅವಕಾಶ ಹೊರತು ಪಿನ್‍ಗಳಿಂದ ಸುತ್ತಿ ಕಟ್ಟುವಂತಿಲ್ಲ ಎಂದು ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗಿತ್ತು.

ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಪಾಲಕರ ಸಭೆಯಲ್ಲಿ ಪ್ರಾಂಶುಪಾಲ ಅನಂತ್. ಎಸ್ ಮಾತನಾಡಿ, "2018ರಲ್ಲಿ ಇದೇ ವಿವಾದ ಉಂಟಾಗಿತ್ತು. ಆಗ ತಲೆಯ ಮೇಲೆ ವೇಲ್ ಹಾಕಿಕೊಳ್ಳಲು ಮಾತ್ರ ಅವಕಾಶ ಎಂದು ಅಂದಿನ ಸಭೆಯಲ್ಲೂ ನಿರ್ಧಾರವಾಗಿತ್ತು. ಈ ಸಲವೂ ಸಹ ನಿಮ್ಮೆಲ್ಲರ ಅಭಿಪ್ರಾಯವನ್ನು ಪಡೆದು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ತಿಳಿಸಿದ್ದರು.

ವಿದ್ಯಾರ್ಥಿಗಳು ಕಾಲೇಜಿನ ಶಿಸ್ತು ಕ್ರಮ ಉಲ್ಲಂಘಿಸದಂತೆ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಲಾಗುವುದು. ಯಾರದರೂ ವಿದ್ಯಾರ್ಥಿಗಳು ಇಂದಿನ ತೀರ್ಮಾನಗಳಿಗೆ ವಿರುದ್ಧವಾಗಿ ನಡೆದುಕೊಂಡರೇ ಪಾಲಕರನ್ನು ಕರೆಸಿ ವರ್ಗಾವಣೆ ಪತ್ರವನ್ನು ನೀಡಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದರು.

Recommended Video

Rahul ಕ್ಯಾಪ್ಟೆನ್ಸಿ ಬಗ್ಗೆ, Rishabh Pant ಶಾಟ್ ಆಯ್ಕೆ ಬಗ್ಗೆ Virat Kohli ಮಾತು | Oneindia Kannada

ಸಭೆ ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ. ಡಿ. ರಾಜೇಗೌಡ ಮಾತನಾಡಿ, "ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಶಿಸ್ತಿನಿಂದ ವರ್ತಿಸಬೇಕು. ಕಾಲೇಜಿನಲ್ಲಿ ಭಾವನೆಗಳನ್ನು ಕೆರಳಿಸುವಂತ ಕೆಲಸ ಆಗಬಾರದು. ಕಾಲೇಜಿನಲ್ಲಿ ಸಮವಸ್ತ್ರದ ಕುರಿತು ಈ ಹಿಂದೆ ಪಾಲಕರ ಸಭೆಯಲ್ಲಿ ನಿರ್ಧಾರವಾದಂತೆ ಮುಂದುವರೆಯಬೇಕು. ವಿದ್ಯಾರ್ಥಿಗಳು ಕಲಿಕೆಗಷ್ಟೆ ಆದ್ಯತೆಯನ್ನು ನೀಡಬೇಕು" ಎಂದು ಹೇಳಿದ್ದರು.

English summary
Saffron scarfs and shawls issue. Clash in Chikkamagaluru district Koppa pre university college.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X