ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು: ಸ್ಮಶಾನದ ರಸ್ತೆ ಬಂದ್: ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್‌, 17: ಚಿಕ್ಕಮಗಳೂರು ಜಿಲ್ಲೆಯ ಹಿರೇಕಾನವಂಗಲದಲ್ಲಿ ಸ್ಮಶಾನಕ್ಕೆ ಹೋಗುವ ದಾರಿಯಲ್ಲಿ ಅಡ್ಡಿ ಉಂಟಾಗಿದೆ. ಆದ್ದರಿಂದ ಅಲ್ಲಿನ ಸ್ಥಳೀಯರು ಶವವಿದ್ದ ಟ್ರಾಕ್ಟರ್ ಅನ್ನು ರಸ್ತೆಯಲ್ಲಿ ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ದಲಿತ ಕುಟುಂಬಕ್ಕೆ ಸೇರಿದ ಕರಿಯಪ್ಪ ಎಂಬುವವರು ಮೃತಪಟ್ಟಿದ್ದರು. ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ದಾರಿ ಇಲ್ಲದಂತಾಗಿತ್ತು. ಆದ ಕಾರಣ ಯಾವುದೇ ದಾರಿ ಇಲ್ಲದೇ ಮೃತನ ಕುಟುಂಬಸ್ಥರು, ಗ್ರಾಮಸ್ಥರು ಕೆಸರಿನಲ್ಲಿಯೇ ಶವ ಹೊತ್ತು ಸಾಗಿದ್ದು, ಈ ದೃಶ್ಯ ಅಲ್ಲಿದ್ದವರನ್ನು ಮನಕಲಕುವಂತೆ ಮಾಡಿದೆ.

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಹಿರೇಕಾನವಂಗಲ ಗ್ರಾಮದಲ್ಲಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಶವವನ್ನು ತೆಗೆದುಕೊಂಡು ಹೋಗಲು ದಾರಿಯೂ ಇಲ್ಲದೇ ಅಲ್ಲಿನ ಜನರು ಪರದಾಡಿದ್ದಾರೆ. ಸ್ಮಶನಕ್ಕೆ ಹೋಗುವ ದಾರಿಯಲ್ಲಿ ಖಾಸಗಿ ವ್ಯಕ್ತಿಗಳು ಉಳುಮೆ ಮಾಡಿದ್ದು, ಬೇರೆ ದಾರಿಯಿಲ್ಲದೆ ಪರದಾಡುವಂತಾಗಿತ್ತು. ಮನನೊಂದ ಗ್ರಾಮಸ್ಥರು ರಸ್ತೆಯಲ್ಲೇ ಶವವಿದ್ದ ಟ್ರಾಕ್ಟರ್ ಅಡ್ಡ ನಿಲ್ಲಿಸಿ ಪ್ರತಿಭಟನೆ ನಡೆಸಿದರು. ಇದನ್ನು ಬಗೆಹರಿಸಿ ಎಂದು ತಹಶೀಲ್ದಾರ್‌ಗೆ ಕಳೆದ ಒಂದು ವರ್ಷದಿಂದಲೂ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೂ ಕೂಡ ಏನೂ ಪ್ರಯೋಜನ ಆಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾದಾನ ವ್ಯಕ್ತಪಡಿಸಿದರು.

ತಕ್ಷಣ ಅಜ್ಜಂಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾನಿರತರ ಮನವೊಲಿಸುವಲ್ಲಿ ಯಶಸ್ವಿಯಾದರು. ನಂತರ ಟ್ರಾಫಿಕ್ ಕ್ಲಿಯರ್ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕಳೆದ 10 ವರ್ಷಗಳಿಂದ ಸ್ಮಶಾನದ ದಾರಿಗಾಗಿ ಗ್ರಾಮಸ್ಥರು ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ ಎಂದು ಹಿರೇಕಾನವಂಗಲ ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ.

 ಖಾಸಗಿ ವ್ಯಕ್ತಿಗಳ ಪಾಲಾಯ್ತ ಸ್ಮಶಾನ ದಾರಿ?

ಖಾಸಗಿ ವ್ಯಕ್ತಿಗಳ ಪಾಲಾಯ್ತ ಸ್ಮಶಾನ ದಾರಿ?

ಗ್ರಾಮದ ಸರ್ವೇ ನಂಬರ್‌ 10ರಲ್ಲಿ ಬರುವ 10.36 ಎಕರೆ ತುರುಮಂದೆ, ಸರ್ವೇ ನಂಬರ್‌ 27ರಲ್ಲಿ ಬರುವ 19.27 ಎಕರೆ ಜಾಡನ ಕಟ್ಟೆ, ಸರ್ವೇ ನಂಬರ್‌ 62ರಲ್ಲಿ 3.27 ಎಕರೆ ಸ್ಮಶಾನವಿದೆ. ಈ ಎಲ್ಲಾ ಸರ್ಕಾರಿ ಜಮೀನುಗಳಿಗೆ ಇದೇ ದಾರಿಯಲ್ಲೇ ಹೋಗಬೇಕಾಗಿದೆ. ಪ್ರಮುಖವಾಗಿ ಬೇಕಾಗಿರುವ ದಾರಿಯೇ ಇಲ್ಲದಂತಾಗಿದೆ. ಇಬ್ಬರು ಖಾಸಗಿ ವ್ಯಕ್ತಿಗಳು ತಮ್ಮ ಒಳ ಜಗಳದಿಂದ ಸಾರ್ವಜನಿಕರಿಗೆ ದಾರಿ ಇಲ್ಲದಂತೆ ಮಾಡಿದ್ದಾರೆ. ಇವಬ್ಬರ ಜಗಳದಿಂದ ಊರಿನ ಜನರಿಗೆ ಸ್ಮಶಾನದ ದಾರಿ ಇಲ್ಲದಂತೆ ಆಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದರು. ಗ್ರಾಮದಲ್ಲಿ ಸುಮಾರು 250 ಮನೆಗಳಿದ್ದು, ಲಿಂಗಾಯತ, ಸವಿತಾ ಸಮಾಜ, ವೈಷ್ಣವ ಸಮಾಜ, ಕುಂಬಾರ, ಹಾಗೂ ದಲಿತ ಸಮುದಾಯಗಳಿವೆ. ಇವರಿಗೆಲ್ಲ ಇರುವುದು ಇದೊಂದೇ ಸ್ಮಶಾನ. ಇದರಲ್ಲಿಯೂ 1 ಎಕರೆ ಒತ್ತುವರಿಯಾಗಿದೆ ಎಂದು ಜನರ ಆರೋಪ ಆಗಿದೆ.

ಯಾರಾದರೂ ಸಾವನ್ನಪ್ಪಿದರೆ ಸ್ಮಶಾನದ ದಾರಿಗಾಗಿ ಮೃತರ ಕುಟುಂಬಸ್ಥರು ಹೋರಾಟ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ತುರುಮಂದೆ, ಜಡಕನಕಟ್ಟೆ, ಸ್ಮಶಾನ ಸೇರಿದಂತೆ ಒಟ್ಟು 250 ಎಕರೆಗೂ ಹೆಚ್ಚು ಕೃಷಿ ಭೂಮಿ ಇದೆ. ಈ ಎಲ್ಲಾ ಕಡೆಗೆ ಇದೇ ಮಾರ್ಗದಲ್ಲಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ನಕಾಶೆಯಲ್ಲಿರುವಂತೆ ದಾರಿಯನ್ನು ಕಲ್ಪಿಸಿಕೊಡಿ. ದಾರಿ ಬಿಡಿಸಿಕೊಟ್ಟು ಸ್ಮಶಾನದ ಅಭಿವೃದ್ಧಿ ಹಾಗೂ ಶಾಶ್ವತವಾಗಿ ಒಂದು ಉತ್ತಮ ರಸ್ತೆ ಮಾಡಿಕೊಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

 ಸ್ಮಶಾನ ದಾರಿಗಾಗಿ ಗ್ರಾಮಸ್ಥರಿಂದ ಪ್ರತಿಭಟನೆ

ಸ್ಮಶಾನ ದಾರಿಗಾಗಿ ಗ್ರಾಮಸ್ಥರಿಂದ ಪ್ರತಿಭಟನೆ

ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದ ಕಾರಣ ಗ್ರಾಮಸ್ಥರು ಪ್ರತಿಭಟನೆಗೆ ಇಳಿದಿದ್ದರು. ಬೀರೂರು- ಅಜ್ಜಂಪುರ ಮಾರ್ಗವಾಗಿ ದಾವಣಗೆರೆಗೆ ಹೋಗುವ ರಸ್ತೆಯಲ್ಲಿ 300ಕ್ಕೂ ಹೆಚ್ಚು ಜನ ಪ್ರತಿಭಟನೆ ನಡೆಸಿದ್ದರು. ಶವವಿದ್ದ ಟ್ರಾಕ್ಟರ್ ಅನ್ನು ರಸ್ತೆಗೆ ಅಡ್ಡ ನಿಲ್ಲಿಸಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ.

 ಇಬ್ಬರ ಜಗಳದಲ್ಲಿ ದಾರಿ ಕಾಣದ ಸ್ಮಶಾನ

ಇಬ್ಬರ ಜಗಳದಲ್ಲಿ ದಾರಿ ಕಾಣದ ಸ್ಮಶಾನ

ಹಿರೇಕಾನವಂಗಲ ಗ್ರಾಮದ ಸರ್ವೇ ನಂಬರ್ 27ರಲ್ಲಿ ಬರುವ 19.27 ಎಕರೆ ಜಾಡನ ಕಟ್ಟೆ ಕೆರೆಯು ಸುತ್ತಮುತ್ತ ಒತ್ತುವರಿಯಾಗಿದ್ದು, ಅಲ್ಲಿ ಅಡಿಕೆ ಸಸಿ ನೆಡಲಾಗಿದೆ. ಈಗಾಗಲೇ ಸರ್ವೇ ಕಾರ್ಯ ನಡೆಯುತ್ತಿದ್ದು, ಸ್ವಲ್ಪ ಮಟ್ಟಿಗೆ ತೆರವುಗೊಳಿಸಲಾಗಿದೆ. ತೆರವುಗೊಳಿಸಿರುವ ಜಾಗಕ್ಕೆ ಗ್ರಾಮ ಪಂಚಾಯತಿ ವತಿಯಿಂದ ಜೆಸಿಬಿ ಮೂಲಕ ಫೆನ್ಸಿಂಗ್ ಮಾಡಲಾಗಿದೆ. ಬಾಕಿ ಉಳಿದಿರುವ ತೆರವು ಕಾರ್ಯಾಚರಣೆಯನ್ನು ಶೀಘ್ರದಲ್ಲಿಯೇ ಮುಗಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯ ಆಗಿದೆ.

ಸ್ಮಶಾನಕ್ಕೆ ಹೋಗುವ ನಕಾಶೆ ದಾರಿಯು ಖಾಸಗಿ ವ್ಯಕ್ತಿಗಳ ಜಮೀನಿನಲ್ಲಿ ಇದ್ದು, ಜಾಗಕ್ಕಾಗಿ ಮಾವ ಅಳಿಯ ಇಬ್ಬರು ಪೈಪೋಟಿ ನಡೆಸುತ್ತಿದ್ದಾರೆ. ಅಲ್ಲಿ ಇವರು ಅಡಿಕೆ ಬೆಳೆದಿದ್ದು, ಸ್ಮಾಶನದ ದಾರಿಗೆ ಅಡ್ಡಿ ಆದಂತಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದರು.

 ಜಾಗ ಬಿಡಿಸಿಕೊಡುವುದಾಗಿ ಅಧಿಕಾರಿಗಳ ಭರವಸೆ

ಜಾಗ ಬಿಡಿಸಿಕೊಡುವುದಾಗಿ ಅಧಿಕಾರಿಗಳ ಭರವಸೆ

ಸ್ಮಶಾನದ ರಸ್ತೆಗಾಗಿ ಕಳೆದ 3 ತಿಂಗಳಿಂದ ನಿರಂತರವಾಗಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುತ್ತಲೇ ಇದ್ದೇವೆ. ಆದರೆ ಯಾರೂ ಕೂಡ ಇದುವರೆಗೂ ನಮ್ಮ ಸಮಸ್ಯೆಗಳಿಗೆ ಸ್ಪಂಧಿಸಿಲ್ಲ ಎಂದು ಗ್ರಾಮಸ್ಥರಾದ ಮಂಜುನಾಥ್ ಅಸಮಾಧಾನ ಹೊರಹಾಕಿದರು.

ಇನ್ನು ಗ್ರಾಮ ಪಂಚಾಯತಿ ಸದಸ್ಯ ಲಿಂಗರಾಜು ಮಾತಾನಾಡಿ ಹಿರೇಕಾನವಂಗಲ ಗ್ರಾಮದ ಸ್ಮಶಾನದ ರಸ್ತೆ ತೆರವು ಮಾಡುವಂತೆ ತಹಶೀಲ್ದಾರ್‌ಗೆ ಒಂದು ವರ್ಷದಿಂದ ಮನವಿ ಮಾಡುತ್ತಿದ್ದೇವೆ. ಇಡೀ ಊರಿಗೆ ಒಂದೇ ಸ್ಮಶಾನ ಇದೆ. ಸತ್ತಾಗ ಶವಗಳನ್ನು ಹೂಳುವುದಕ್ಕೂ ಜನರು ಹರಸಾಹಸ ಪಡಬೇಕಾಗಿದೆ. ಒತ್ತುವರಿ ತೆರವುಗೊಳಿಸಿದರೆ ಗ್ರಾಮ ಪಂಚಾಯತಿಯಿಂದ ರಸ್ತೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ನಂತರ ಅಜ್ಜಂಪುರ ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ ಮಾತಾನಾಡಿ ಸ್ಮಶಾನಕ್ಕೆ ಹೋಗುವ ನಕಾಶೆ ದಾರಿ ಒತ್ತುವರಿ ಆಗಿಲ್ಲ. ಮಾವ, ಅಳಿಯರಿಬ್ಬರ ಕೌಟುಂಬಿಕ ಕಲಹದ ಹಿನ್ನೆಲೆ ದಾರಿಗೆ ಸಮಸ್ಯೆ ಆಗಿದೆ. ಈಗಾಗಲೇ ಅವರ ಬಳಿ ಮಾತನಾಡಿದ್ದೇನೆ. ಸರ್ವೇ ಕಾರ್ಯ ನಡೆಸಿ ದಾರಿ ಬಿಡಿಸಿ ಕೊಡಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ.

English summary
Chikkamagaluru district Ajjampura taluk Hirekanavangala crematorium road close due to one family problem. Villagers protest with deadbody.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X