India
  • search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರ್ಷಕೊಮ್ಮೆ ಭದ್ರಾ ಜಲಾಶಯಕ್ಕೆ ಭೇಟಿ ನೀಡುವ ವಿಶೇಷ ಅತಿಥಿಗಳು!

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂನ್ 26 : ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿಯ ಭದ್ರಾ ಜಲಾಶಯದಲ್ಲಿ ರಿವರ್ ಟರ್ನ್ ಹಕ್ಕಿಗಳ ಪ್ರಪಂಚ ಸೃಷ್ಠಿಯಾಗಿದೆ. ಭದ್ರಾ ಜಲಾಶಯದ ಹಿನ್ನೀರಿನಲ್ಲಿರುವ ಐಲ್ಯಾಂಡ್‌ಗಳು ರಿವರ್ ಟರ್ನ್ ಹಕ್ಕಿಗಳ ನೆಚ್ಚಿನ ಹಾಟ್ ಸ್ಪಾಟ್ ಆಗಿವೆ.

ಇರಾನ್, ಮಾಯನ್ಮಾರ್ ಸೇರಿದಂತೆ ಕೆಲ ದೇಶಗಳಿಂದ ಭಾರತಕ್ಕೆ ಬರುವ ಈ ರಿವರ್ ಟರ್ನ್ ಹಕ್ಕಿಗಳಿಗೆ ನೀರಿನ ಮಧ್ಯೆ ಇರುವ ದ್ವೀಪಗಳೇ ನೆಚ್ಚಿನ ತಾಣ. ತಮ್ಮ ಸಂತತಿಯನ್ನ ವೃದ್ಧಿ ಮಾಡಲು ಸಾಮಾನ್ಯವಾಗಿ ಡಿಸೆಂಬರ್-ಜನವರಿ ತಿಂಗಳಲ್ಲಿ ಈ ರೀತಿಯ ದ್ವೀಪಗಳನ್ನೇ ಆಯ್ಕೆ ಮಾಡಿಕೊಳ್ಳುತ್ತವೆ. ಈ ಪ್ರದೇಶಗಳಲ್ಲಿ ಮಾನವನ ಹಸ್ತಕ್ಷೇಪ ಇರುವುದಿಲ್ಲ. ತಮಗೆ ಹಾಗೂ ತನ್ನ ಮರಿಗಳಿಗೂ ಆಹಾರದ ಕೊರತೆಯೂ ಉದ್ಬವಿಸಲ್ಲ ಎನ್ನುವ ಲೆಕ್ಕಾಚಾರದಿಂದಲೇ ಇಲ್ಲಿ ಮೊಕ್ಕಾಂ ಹೂಡುತ್ತಿವೆ.

'ದೇವರ' ಲೋಕ ಈ 'ಮನೆ'; ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರಿಲ್ಲ'ದೇವರ' ಲೋಕ ಈ 'ಮನೆ'; ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರಿಲ್ಲ

ಕೊನೆಗೆ ಜೂನ್-ಜುಲೈ ಅಂತ್ಯದಲ್ಲಿ ಹೆಚ್ಚು ಮಳೆಯಾದ ಬಳಿಕ ದ್ವೀಪಗಳು ತುಂಬಿದೊಡನೆ ಮರಿಗಳ ಜೊತೆ ಈ ಪ್ರದೇಶಗಳಿಂದ ಈ ಹಕ್ಕಿಗಳು ವಾಪಸ್‌ ತೆರಳುತ್ತವೆ. ಈ ಹಕ್ಕಿಗಳ ಲೋಕವನ್ನು ಬೋಟಿಂಗ್ ಪಯಣದಲ್ಲಿ ಕಣ್ತುಂಬಿಸಿಕೊಳ್ಳೋದು ನಿಜಕ್ಕೂ ಕಣ್ಣಿಗೆ ಹಬ್ಬವೇ ಸರಿ.

 ಸಂಗಾತಿ ಆಯ್ಕೆಗೆ ಕಸರತ್ತು

ಸಂಗಾತಿ ಆಯ್ಕೆಗೆ ಕಸರತ್ತು

ಈ ರಿವರ್ ಟರ್ನ್ ಹಕ್ಕಿಗಳು ಸಂತತಿ ವೃದ್ಧಿಗೆ ಬರೋ ಹೆಣ್ಣು ಹಕ್ಕಿಗಳನ್ನ ಮೆಚ್ಚಿಸಲು ಗಂಡು ಹಕ್ಕಿಗಳು ಮೀನುಗಳನ್ನ ಶಿಕಾರಿ ಮಾಡಿ ತಂದುಕೊಡುತ್ತವೆ. ಸಾಮಾನ್ಯವಾಗಿ ಒಂದು ಹೆಣ್ಣು ಹಕ್ಕಿಗೆ ನಾಲ್ಕರಿಂದ ಐದು ಗಂಡು ಹಕ್ಕಿಗಳು ಆಕರ್ಷಿಸಲು ಪ್ರಯತ್ನಿಸುತ್ತವಂತೆ. ಇದರಲ್ಲಿ ಹೆಚ್ಚು ಮೀನುಗಳನ್ನು ತಂದುಕೊಡುವ ಹಕ್ಕಿಯ ಜೊತೆ ಹೆಣ್ಣು ಹಕ್ಕಿ ಜೊತೆಯಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಭಾರತದಲ್ಲಿದೆ ಹಿಮ್ಮುಖ ಜಲಪಾತ: ಎಲ್ಲಿ ಗೊತ್ತಾ?ಭಾರತದಲ್ಲಿದೆ ಹಿಮ್ಮುಖ ಜಲಪಾತ: ಎಲ್ಲಿ ಗೊತ್ತಾ?

 ಪಕ್ಷಿಗಳ ಜೊತೆ ವನ್ಯ ಜೀವಿಗಳ ದರ್ಶನ

ಪಕ್ಷಿಗಳ ಜೊತೆ ವನ್ಯ ಜೀವಿಗಳ ದರ್ಶನ

ಹಾಗಂತ ಲಕ್ಕವಳ್ಳಿಯ ಭದ್ರಾ ಹಿನ್ನೀರು ಕೇವಲ ಹಕ್ಕಿಗಳಿಗೆ ಮಾತ್ರ ಸೀಮಿತವಾಗಿಲ್ಲ, ಬದಲಾಗಿ ಇಲ್ಲಿರುವ ಪ್ರಾಣಿ ಪ್ರಪಂಚ ಪ್ರವಾಸಿಗರನ್ನು ಬೆರಗಾಗಿಸುತ್ತದೆ. ಭದ್ರಾ ಅಭಯಾರಣ್ಯದಲ್ಲಿರೋ ಸ್ವತಂತ್ರವಾಗಿ ಓಡಾಡಿಕೊಂಡಿರೋ ಪ್ರಾಣಿಗಳನ್ನ ಸಫಾರಿ ಮಾಡುತ್ತಾ ದರ್ಶನ ಮಾಡುವುದು ಮನಸ್ಸನ್ನ ಹಗುರವಾಗಿಸುತ್ತದೆ. ಸ್ವಚ್ಛಂದ ಪ್ರದೇಶದಲ್ಲಿ ನೆಮ್ಮದಿಯಿಂದ ಅತ್ತಿಂದಿತ್ತ ಚಲಿಸುತ್ತಾ ಓಡಾಡಿಕೊಂಡಿರುವ ಪ್ರಾಣಿಗಳನ್ನ ನೋಡಲು ಎರಡು ಕಣ್ಣು ಸಾಲದು. ಏಕೆಂದರೆ ಒಂದು ಕಡೆ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹೋಗುತ್ತಿದ್ದಂತೆ ಬೇರೆ ಪ್ರಾಣಿಗಳ ದರ್ಶನವಾಗುತ್ತದೆ. ಆನೆಗಳ ಗುಂಪು, ಹುಲಿ ಸಂಚಾರ, ಮಿಂಚಿನ ಹಾಗೆ ಓಡೋ ಜಿಂಕೆಗಳ ಪಯಣ, ಕಾಡೆಮ್ಮೆ ಚಲನೆ, ನವಿಲಿನ ನರ್ತನ.. ಹೀಗೆ ಭದ್ರಾ ಅಭಯಾರಣ್ಯದ ಪ್ರಾಣಿ ಪ್ರಪಂಚ ನಮ್ಮನ್ನ ಬೇರೊಂದು ಲೋಕಕ್ಕೆ ಕೊಂಡೊಯ್ಯುತ್ತದೆ.

 ಸಂತಾನೋತ್ಪತ್ತಿಗೆ ವಲಸೆ ಬರುವ ಹಕ್ಕಿಗಳು

ಸಂತಾನೋತ್ಪತ್ತಿಗೆ ವಲಸೆ ಬರುವ ಹಕ್ಕಿಗಳು

ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದ ಲಕ್ಕವಳ್ಳಿಯ ಭದ್ರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಭದ್ರ ಜಲಾಶಯದ ಹಿನ್ನೀರಿನ ನಡುಗಡ್ಡೆಗೆ ಪ್ರತೀ ವರ್ಷ ಸಾವಿರಾರು ಸಂಖ್ಯೆಯ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಆಗಮಿಸಿತ್ತವೆ. ಈ ಸ್ಥಳವನ್ನು ತಮ್ಮ ಹೆರಿಗೆ ಮನೆಯಂದೆ ಅವುಗಳು ಸಂಭ್ರಮಿತ್ತವೆ. ಸಾವಿರಾರು ಕಿಲೋ ಮೀಟರ್ ದೂರದ ಪ್ರದೇಶದಿಂದ ಬರುವ ರಿವರ್ ಟರ್ನ್, ನೀರು ಕಾಗೆ ಮತ್ತಿತರ ಪಕ್ಷಿಗಳು ಇಲ್ಲಿನ ಸ್ವಚ್ಛಂದ ಪರಿಸರದಲ್ಲಿ ಹಾರಾಡಿಕೊಂಡು ತಮ್ಮದೇ ಆದ ಲೋಕದಲ್ಲಿ ಮುಳುಗುತ್ತವೆ. ಸಂಗಾತಿಯೊಡನೆ ಹುಟ್ಟಲಿರುವ ತಮ್ಮ ಮರಿಗಳಿಗಾಗಿ ಬೆಚ್ಚನೆಯ ಗೂಡು ನಿರ್ಮಿಸಿಕೊಳ್ಳುತ್ತವೆ.

 ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಕ್ಕಿಗಳ ಬಳಗ

ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಕ್ಕಿಗಳ ಬಳಗ

ಜಲಾಶಯದಲ್ಲಿ ನೀರು ಕಡಿಮೆಯಾದಾಗ ತಲೆ ಎತ್ತುವ ನಡುಗಡ್ಡೆಗಳು ಈ ವಲಸೆ ಪಕ್ಷಿಗಳಿಗೆ ಸುರಕ್ಷಿತ ತಾಣವಾಗಿರುತ್ತವೆ. ಯಾರ ಕಾಟವಿಲ್ಲದ ಈ ಪ್ರದೇಶ ಪಕ್ಷಿಗಳ ಸಂತಾನೋತ್ಪತ್ತಿಗೆ ಹೇಳಿ ಮಾಡಿಸಿದ ಜಾಗವಾಗಿರುತ್ತದೆ. ಆರಂಭದಲ್ಲಿ ಕೆಲವೇ ಕೆಲವು ಸಂಖ್ಯೆಯಲ್ಲಿ ಬರುತ್ತಿದ್ದ ರಿವರ್ ಟರ್ನ್ ಪಕ್ಷಿಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಶುರುವಾಗಿದೆ. ಜಲಾಶಯದ ಹಿನ್ನೀರಿನ ಜೊತೆಗೆ ಸಮೃದ್ಧವಾದ ಮೀನುಗಳಿರುವ ಕಾರಣ ರಿವರ್ ಟರ್ನ್ ಪಕ್ಷಿಯ ಜೊತೆಗೆ ನೀರು ಕಾಗೆ ಮತ್ತಿತರ ಪಕ್ಷಿಗಳು ಇಲ್ಲಿಗೆ ಬರಲಾರಂಭಿಸಿವೆ.

ಒಟ್ಟಿನಲ್ಲಿ ಗಡಿ-ಭಾಷೆಯ ಹಂಗಿಲ್ಲದೇ ಸಂತಾನೋತ್ಪತ್ತಿಗಾಗಿ ಸಾವಿರಾರು ಕೀಲೋಮೀಟರ್ ನಿಂದ ಬರುವ ರಿವರ್ ಟರ್ನ್ ಹಕ್ಕಿಗಳು ನಮಗೊಂದು ಹಕ್ಕಿಗಳ ಲೋಕವನ್ನೇ ಸೃಷ್ಠಿಸುತ್ತವೆ. ಭದ್ರಾ ಹಿನ್ನೀರಿನ ದ್ವೀಪಗಳಲ್ಲಿ ಸಾವಿರಾರು ಹಕ್ಕಿಗಳ ಚಿಲಿಪಿಲಿ ಮನಸಿಗೆ ಮುದ, ಕಣ್ಣಿಗೆ ಹಿತವನ್ನ ನೀಡುತ್ತವೆ. ಒಟ್ಟಿನಲ್ಲಿ ಒಂದೆಡೆ ಹಕ್ಕಿಗಳ ಪ್ರಪಂಚ ಪಕ್ಷಿ ಪ್ರಿಯರನ್ನ ಸೆಳೆದರೆ, ಮತ್ತೊಂದೆಡೆ ದಟ್ಟ ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರೋ ಪ್ರಾಣಿಗಳು ಪ್ರಾಣಿ ಪ್ರಿಯರನ್ನ ಮೋಡಿ ಮಾಡುತ್ತವೆ.

English summary
Thousands of river tern birds visit Lakkavalli Bhadra reservoir of Tarikere taluk, Chiukkamagaluru. Birds stay there more than 7 months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X