• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಂಭಾಪುರಿ ಶ್ರೀಗಳಿಗೆ ಕೊರೊನಾ ಸೋಂಕು ದೃಢ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಸೆಪ್ಟೆಂಬರ್ 1: ಜಿಲ್ಲೆಯ ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಗೆ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದೆ.

   KS Eshwarappa ಅವರಿಗೆ ಕೊರೊನ , ಆಸ್ಪತ್ರೆಗೆ ದಾಖಲು | Oneindia Kannada

   ಶಿವಾಚಾರ್ಯ ಸ್ವಾಮೀಜಿಗೆ ನಿನ್ನೆ ಸೋಮವಾರ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಪಟ್ಟಣದ ಆರೋಗ್ಯ ಕೇಂದ್ರದ ವೈದ್ಯರು ಮಂಗಳವಾರ ಮಾದರಿ ಪರೀಕ್ಷೆ ಮಾಡಿದ್ದು, ಸ್ವಾಮೀಜಿಗೆ ಕೊರೊನಾ ಸೋಂಕು ಇರುವುದು ಖಾತರಿಯಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಸ್ವಾಮೀಜಿಯನ್ನು ಬೆಂಗಳೂರಿಗೆ ರವಾನಿಸಲಾಗಿದೆ.

   ಚಿಕ್ಕಮಗಳೂರು, ಚಿತ್ರದುರ್ಗದಲ್ಲಿ ಇಂದು ಕೊರೊನಾ ಪ್ರಕರಣಗಳೆಷ್ಟು?

   ಸೋಂಕು ದೃಢಪಟ್ಟ ಹಿನ್ನೆಲೆ‌ಯಲ್ಲಿ ಮಠದ ಆವರಣವನ್ನು ಇಂದು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ. ಮಠದ ಸುತ್ತ 100 ಮೀಟರ್ ಪ್ರದೇಶವನ್ನು ಕಂಟೇನ್ಮಂಟ್ ಝೋನ್ ಮಾಡಿ ಓಡಾಟಕ್ಕೆ ನಿಷೇಧ ಹೇರಲಾಗಿದೆ.

   ಚಿಕ್ಕಮಗಳೂರು ಜಿಲ್ಲೆಯಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪ್ರಕರಣಗಳು ಕಂಡುಬಂದಿವೆ. ಇಂದು 210 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ತರೀಕೆರೆ 71, ಚಿಕ್ಕಮಗಳೂರು 60, ಕಡೂರು 35, ಮೂಡಿಗೆರೆ 16, ಎನ್ಆರ್ ಪುರ 16, ಕೊಪ್ಪ 11, ಶೃಂಗೇರಿಯಲ್ಲಿ 1 ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4261ಕ್ಕೆ ಏರಿಕೆಯಾಗಿದ್ದು, 2859 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇದುವರೆಗೂ ಸೋಂಕಿನಿಂದ 74 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

   English summary
   Rambhapuri Math Veerasomeshwara Shivacharya Swamiji confirms coronavirus today. He has shifted to bengaluru hospital
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X