ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಷೇಧವಿದ್ದರೂ ಚಾರ್ಮಾಡಿ ಘಾಟ್ ನಲ್ಲಿ ಪ್ರಿ ವೆಡ್ಡಿಂಗ್ ಶೂಟ್, ಆಕ್ರೋಶ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 26: ವಿಲ್ಲುಪುರಂ ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟ್ ನ ನಡು ರಸ್ತೆ ಹಾಗೂ ಅರಣ್ಯ ಪ್ರದೇಶದಲ್ಲಿ ಪ್ರಿ ವೆಡ್ಡಿಂಗ್ ವಿಡಿಯೋ ಶೂಟ್ ಮಾಡುತ್ತಿರುವುದು ಮಂಗಳವಾರ ಕಂಡು ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Recommended Video

ಇನ್ಮುಂದೆ ಈ ಏರಿಯಾ ವರೆಗೂ ಬರುತ್ತೆ ಮೆಟ್ರೋ | Oneindia Kannada

ಸದಾ ವಾಹನಗಳ ಓಡಾಟ ಇರುವ ಹಾಗೂ ಕಡಿದಾದ ತಿರುವಿನಿಂದ ಕೂಡಿರುವ ಚಾರ್ಮಾಡಿ ಘಾಟ್ ನ ಹೆದ್ದಾರಿ ಹಾಗೂ ಆಸುಪಾಸಿನ ಅರಣ್ಯ ಪ್ರದೇಶದಲ್ಲಿ ಹಾಸನ ಮೂಲದ ನವಜೋಡಿಯೊಂದು ಫೋಟೋ ಶೂಟ್ ನಲ್ಲಿ ತೊಡಗಿತ್ತು.

ಚಿಕ್ಕಮಗಳೂರು; ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸ್ಥಳೀಯರಿಗೆ ತರಬೇತಿಚಿಕ್ಕಮಗಳೂರು; ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸ್ಥಳೀಯರಿಗೆ ತರಬೇತಿ

ನಾನಾ ಭಂಗಿಗಳಲ್ಲಿ ರಸ್ತೆ ಮಧ್ಯೆ ಪ್ರಿ ವೆಡ್ಡಿಂಗ್ ಚಿತ್ರೀಕರಣ ಮಾಡುತ್ತಿದ್ದರಿಂದ ರಸ್ತೆಯಲ್ಲಿ ಬರುವ ವಾಹನ ಸವಾರರು ತಿರುವಿನಲ್ಲಿ ಅಚಾನಕ್ಕಾಗಿ ರಸ್ತೆಯ ಮಧ್ಯದಲ್ಲಿ ಎದುರಾಗುವ ಜನರನ್ನು ನೋಡಿ ಗಾಬರಿಗೊಂಡು ವಾಹನ ನಿಲ್ಲಿಸುತ್ತಿದ್ದ ದೃಶ್ಯ ಕಂಡುಬಂತು.

Pre Wedding Shoot In Charmadi Ghat, Even If Prohibited

ಪೊಲೀಸ್ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಚಾರ್ಮಾಡಿ ಘಾಟ್ ನಲ್ಲಿ ಫೋಟೋ ತೆಗೆಯದಂತೆ ಸೂಚನಾ ಫಲಕ ಹಾಕಿದ್ದರೂ ಕೂಡಾ, ಕೆಲ ಪ್ರವಾಸಿಗರು ಫೋಟೋ, ವೀಡಿಯೋ ತೆಗೆಯುತ್ತಿರುವುದು ಹೆಚ್ಚುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡು ಅಂತಹವರಿಗೆ ದಂಡ ವಿಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

English summary
A pre-wedding video was shot on Tuesday in the middle of the Charmadi Ghat on the Mangaluru National Highway, Causing public outrage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X