ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುಳ್ಳಯ್ಯನಗಿರಿಲ್ಲಿ ಜೀಪ್ ಟಾಪ್ ಮೇಲೆ ಕೂತು ಹೋಗುತ್ತಿದ್ದವರ ಮೇಲೆ ಪೊಲೀಸ್ ಕೇಸ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂ 1: ಕಾಫಿನಾಡಿನ ಪ್ರವಾಸಿ ತಾಣಗಳಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಚಿಕ್ಕಮಗಳೂರಿಗೆ ಆಗಮಿಸಿ ಕಾಫಿನಾಡಿನ ಸೌಂದರ್ಯ ಸವಿದು ಮಸ್ತ್ ಎಂಜಾಯ್ ಮಾಡಿ ವಾಪಸ್ಸಾಗುತ್ತಾರೆ. ಆದರೆ ಕೆಲ ಪ್ರವಾಸಿಗರು ಮಾತ್ರ ಪುಂಡತನ ಮೆರೆದು ಕೆಲ ಸಲ ಸುದ್ದಿಯಾಗುತ್ತಾರೆ.

ಬಂಡೀಪುರ: ಪ್ರವಾಸಿಗರಿಗೆ ಪೋಟೊ ಹುಚ್ಚು, ಕಾಡುಪ್ರಾಣಿಗಳಿಗೆ ಪೆಚ್ಚುಬಂಡೀಪುರ: ಪ್ರವಾಸಿಗರಿಗೆ ಪೋಟೊ ಹುಚ್ಚು, ಕಾಡುಪ್ರಾಣಿಗಳಿಗೆ ಪೆಚ್ಚು

ಅದೇ ರೀತಿ ಪ್ರವಾಸಕ್ಕೆ ಬಂದ ಯುವಕ ಯುವತಿಯರು ಮುಳ್ಳಯ್ಯನಗಿರಿ ಅತ್ಯಂತ ಅಪಾಯಕಾರಿ ರಸ್ತೆಯಲ್ಲಿ ಜೀಪ್ ಟಾಪ್‍ನಲ್ಲಿ ಕುಳಿತು ಪ್ರಯಾಣ ಬೆಳೆಸಿ ಪೊಲೀಸರಿಂದ ಕೇಸ್ ಹಾಕಿಸಿಕೊಂಡಿದ್ದಾರೆ. ಮುಳ್ಳಯ್ಯನಗಿರಿ ಪ್ರದೇಶಕ್ಕೆ ಸಾಗುವ ದಾರಿಯಲ್ಲಿ ಅತ್ಯಂತ ಕಡಿದಾದ ತಿರುವುಗಳಿದ್ದು, ಮೋಜು ಮಸ್ತಿಯಲ್ಲಿ ತೊಡಗಿದ್ದ ಯುವಕ ಯುವತಿಯರು ಜೀಪ್‌ನ ಮೇಲ್ಬಾಗದಲ್ಲಿ ಕುಳಿತು ಸಂಚಾರ ನಡೆಸಿದ್ದಾರೆ. ಈ ಯುವಕ ಯುವತಿಯರು ಮತ್ತಿನ ನಶೆಯಲ್ಲಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಆಕ್ಟ್ ನಲ್ಲಿ ಪ್ರಕರಣ ದಾಖಲಾಗಿಸಿ ಪೊಲೀಸರು ಪ್ರವಾಸಿಗರಿಗೆ ಎಚ್ಚರಿಕೆ ನೀಡಿ ಕಳಿಸಿದ್ದಾರೆ.

Police Case Against Tourists at Mullayanagiri Who travel on Top of the Car

ಮೋಜು ಮಸ್ತಿಯಲ್ಲಿ ತೊಡಗಿದ್ದ ಯುವಕ ಯುವತಿಯರು

ಬೆಂಗಳೂರಿನಿಂದ ಆಗಮಿಸಿದ್ದ ಕೆಲ ಪ್ರವಾಸಿಗರು ಮುಳ್ಳಯ್ಯನ ಗಿರಿ ರಸ್ತೆಯಲ್ಲಿ ಮೋಜುಮಸ್ತಿಯಲ್ಲಿ ತೊಡಗಿದ್ದರು. ಅದೇ ರಸ್ತೆಯಲ್ಲಿ ಪೊಲೀಸರ ವಾಹನ ಬೀಟ್ ತಿರುಗುವಾಗ ಜೀಪಿನ ಟಾಪ್ ಮೇಲೆ ಕುಳಿತು ಪ್ರಯಾಣ ಮಾಡುತ್ತಿದ್ದವರು ಕಣ್ಣಿಗೆ ಬಿದ್ದಿದ್ದಾರೆ. ತಕ್ಷಣವೇ ಕಾರ್ಯ ಕಾರ್ಯಪ್ರವೃತ್ತರಾದ ಪೊಲೀಸರು ಜೀಪನ್ನು ನಿಲ್ಲಿಸಿ ಯುವಕ ಯುವತಿಯರ ಮೇಲೆ ಕೇಸ್ ದಾಖಲು ಮಾಡಿದ್ದಾರೆ. ಯುವಕ-ಯುವತಿಯರು ಅಮಲು ಪದಾರ್ಥ ಸೇವಿಸಿ ಮುಳ್ಳಯ್ಯಗಿರಿಗೆ ಹೋಗುತ್ತಿದ್ದರು ಎಂದು ಹೇಳಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯ ಅಡಿಯಲ್ಲಿ ಕೇಸ್ ಹಾಕಲಾಗಿದ್ದು ಜಿಲ್ಲೆಯ ಮುಳ್ಳಯ್ಯಗಿರಿ ದೇವಿರಮ್ಮನ ಬೆಟ್ಟ ಕಳಸದ ಸುತ್ತಮುತ್ತಲ ಪ್ರದೇಶಗಳಿಗೆ ತೆರಳುವ ಪ್ರವಾಸಿಗರು ಇಂಥ ಕೃತಿಗಳಲ್ಲಿ ತೊಡಗಿರುವುದು ಸಾಮಾನ್ಯವಾಗಿದೆ. ಪ್ರವಾಸಿಗರ ಜೊತೆ ವಾಹನ ಸವಾರರ ಮೇಲೂ ಪ್ರಕರಣ ದಾಖಲಿಸಿ ಬೇಕೆನ್ನುವುದು ಸ್ಥಳೀಯರ ಒತ್ತಾಯವಾಗಿದೆ. ಕೆಎ 34 ಎಮ್ 6646 ಬೊಲೆರೋ ವಾಹನವನ್ನು ಸೀಜ್ ಮಾಡಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರವಾಸಿಗರಾದ ಸೈಯದ್, ಅಕ್ಷಯ್, ರವಿ, ಸತೀಶ್, ಡೆಲ್ಹ ವಿರುದ್ಧ ಪ್ರಕರಣ ದಾಖಲಾಗಿದೆ.

Police Case Against Tourists at Mullayanagiri Who travel on Top of the Car

ಮಾದಕವಸ್ತು ಸೇವನೆ ಮಾಡಿರುವುದು ದೃಢ

ಈ ಸಂಬಂಧ ಪ್ರತಿಕ್ರಿಯೆ ನೀಡಿರೋ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಕೈಮರದಿಂದ ಗಿರಿಶ್ರೇಣಿಗೆ ಸಾಗುವ ಮಾರ್ಗದಲ್ಲಿ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಜೀಪ್ ನ ಮೇಲ್ಬಾಗದಲ್ಲಿ ಕುಳಿತು ಅತೀವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲಯಿಸುತ್ತಿರುವುದು ಕಂಡು ಬಂದಿದ್ದು ವಾಹನ ಚಾಲಕನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೀಪಿನಲ್ಲಿದ್ದ 4 ಜನರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಜೀಪಿನಲ್ಲಿದ್ದವರು ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಎನ್‍ಡಿಪಿ ಎಸ್ ಕಾಯ್ದೆಯಡಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

Recommended Video

ಭಾರತದಲ್ಲಿರೋ ತನ್ನ ಅಭಿಮಾನಿಗಳಿಗೆ ವಿಶೇಷ ಸಂದೇಶದ ಮೂಲಕ ವಿದಾಯ ಹೇಳಿದ Rashid Khan | #Cricket |Oneindia Kannada

(ಒನ್ಇಂಡಿಯಾ ಸುದ್ದಿ)

English summary
Police recently has filed case against few tourists for reckless driving at popular tourist place Mullayanagiri of Chikkamagaluru district. These youth were found to be sitting on top of the jeep while travelling, it is alleged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X