ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಲ್ಕು ದಿನಗಳಿಂದ ಮಳೆ; ಚಿಕ್ಕಮಗಳೂರಿನಲ್ಲಿ ಅಸ್ತವ್ಯಸ್ತವಾದ ಬದುಕು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್‌ 08: ಮಲೆನಾಡಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಮಳೆ ನಿಲ್ಲದ ಕಾರಣ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಮೂರು ದಿನಗಳಿಂದಲೂ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಹೆಬ್ಬಾಳೆ ಸೇತುವೆ ಮೇಲೆ ಆರು ಅಡಿ ನೀರು ಹರಿಯುತ್ತಿದೆ. ಹೀಗಾಗಿ ಮೂರು ದಿನಗಳಿಂದಲೂ ಕಳಸ ಹೊರನಾಡು ಸಂಪರ್ಕ ಬಂದ್ ಆಗಿದೆ. ರಸ್ತೆ ಸಂಪರ್ಕವಿಲ್ಲದೆ ಜನರು ಪರದಾಡುವಂತಾಗಿದೆ. ಹೆಬ್ಬಾಳೆ ಸೇತುವೆ ಪಕ್ಕದಲ್ಲಿದ್ದ ಅಂಗಡಿಯೂ ಜಲಾವೃತವಾಗಿದೆ.

Chikkamagaluru: People Life Disrupted By Heavy Rain Since 4 Days

ಇನ್ನು ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಬಾಳೆಹೊನ್ನೂರಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಕೊಪ್ಪ ತಾಲೂಕಿನ ಗಾಳಿಗುಂಡಿ ಗ್ರಾಮದಲ್ಲಿ ಧರೆಕುಸಿತವಾಗಿದ್ದು, ಮನೆಯ ಒಂದು ಬದಿಗೆ ಮರ ಹಾಗೂ ಮಣ್ಣು ಅಪ್ಪಳಿಸಿದೆ. ಮನೆಯ ಒಂದು ಭಾಗ ಸಂಪೂರ್ಣ ಜಖಂ ಆಗಿದೆ. ಮನೆಯೊಳಗೆ ಕೆಸರು ನೀರು ನುಗ್ಗಿದೆ. ಚಾರ್ಮಾಡಿ ಘಾಟ್ ನಲ್ಲೂ ನಿನ್ನೆ ಗುಡ್ಡ ಕುಸಿತವಾಗಿದ್ದು, ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

English summary
Heavy rain have been reported for the past four days and the lives of people in Chikkamagaluru district is disrupted by rain,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X