ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನು ಸ್ವಲ್ಪ ಒರಟ, ಹಳ್ಳಿ ಭಾಷೆಯಲ್ಲಿ ಮಾತನಾಡುವೆ; ಸಿದ್ದರಾಮಯ್ಯ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 07: "ನಾನು ಸ್ವಲ್ಪ ಒರಟ, ಹಳ್ಳಿ ಭಾಷೆಯಲ್ಲಿ ಮಾತನಾಡುತ್ತೇನೆ. ಬಿಜೆಪಿ, ಜೆಡಿಎಸ್ ಎಲ್ಲರೂ ನನ್ನ ಮೇಲೆ ಬೀಳುತ್ತಾರೆ. ನಾನೊಬ್ಬನೇ ಸಿಕ್ಕಿರುವುದು ಎಲ್ಲರಿಗೂ ಟೀಕೆ ಮಾಡಲು" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಗುರುವಾರ ಚಿಕ್ಕಮಗಳೂರಿನ ಕಡೂರಿನಲ್ಲಿ ಸಿದ್ದರಾಮಯ್ಯ ಮಾತನಾಡಿದರು. "ಬಿಜೆಪಿಯವರು ಗೋಮಾಂಸ ನಿಷೇಧ ಕಾಯ್ದೆಯನ್ನು ತಂದಿದ್ದಾರೆ. ನಾನು ದನದ ಮಾಂಸ, ಎಮ್ಮೆ ಮಾಂಸ ತಿಂದಿಲ್ಲ. ತಿನ್ನಬೇಕು ಅನ್ನಿಸಿದರೆ ತಿನ್ನುತ್ತೇನೆ. ನೀನು ಯಾರು? ಕೇಳುವುದಕ್ಕೆ ನನ್ನಿಷ್ಟ ಎಂದೆ" ಎಂದರು.

ತಾಕತ್ತಿದ್ದರೆ ಗೋಮಾಂಸ ರಫ್ತು ನಿಷೇಧಿಸಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲುತಾಕತ್ತಿದ್ದರೆ ಗೋಮಾಂಸ ರಫ್ತು ನಿಷೇಧಿಸಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲು

"ನನ್ನ ವಿರುದ್ದ ಏನು ವ್ಯಾಖ್ಯಾನಗಳು, ಚರ್ಚೆಗಳು ನಡೆದವು. ಓಟು ಹಾಕಲು ಹೋದಾಗ ನಮ್ಮ ಪಾರ್ಟಿಯವನು ಊಟಕ್ಕೆ ಕರೆದುಕೊಂಡು ಹೋದರು. ಅವತ್ತು ಕೋಳಿ ಮಾಡಿದ್ದರು. ಅವತ್ತೇ ಹನುಮ ಜಯಂತಿ. ನಮ್ಮ ಹುಡುಗ ಮಾಂಸ ತಿನ್ನಲ್ಲ ಹನುಮ ಜಯಂತಿ ಅಂದ" ಎಂದು ಸಿದ್ದರಾಮಯ್ಯ ವಿವರಿಸಿದರು.

ಸಿದ್ದರಾಮಯ್ಯ ಮಾತನಾಡದಿದ್ದರೆ ಕಳೆದು ಹೋಗ್ತಾರೆ; ಕಟೀಲ್ ಸಿದ್ದರಾಮಯ್ಯ ಮಾತನಾಡದಿದ್ದರೆ ಕಳೆದು ಹೋಗ್ತಾರೆ; ಕಟೀಲ್

Opposition Leader Siddaramaiah Speech At Kadur

"ಹನುಮ ಹುಟ್ಟಿದ್ದು ಯಾರಿಗೆ ಗೊತ್ತು, ನಮಗ್ಯಾರಿಗೂ ಗೊತ್ತಿಲ್ಲ. ಮಾಂಸ ತಿಂದರೆ ಏನು, ಹನುಮ ಜಯಂತಿ ಡೇಟ್ ಗೊತ್ತಿಲ್ಲ ಅಂದ್ರೆ ತಪ್ಪಾ?. ಹನುಮ ಯಾವತ್ತು ಹುಟ್ಟಿದ್ದ ನಿಮಗೆ ಗೊತ್ತಾ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.

ನನ್ನ ವಿರೋಧವಿಲ್ಲ: ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮ್ಯ ಅವರು, "ಕುರುಬರನ್ನು ಎಸ್ಟಿಗೆ ಸೇರಿಸಲು ನನ್ನ ವಿರೋಧವಿಲ್ಲ. ಈ ಬಗ್ಗೆ ಯಾವುದೇ ಗೊಂದಲವಿಲ್ಲ" ಎಂದು ಸ್ಟಷ್ಟನೆ ನೀಡಿದರು.

"ಇನ್ನೂ ಕುಲಶಾಸ್ತ್ರದ ವರದಿ ಬಂದಿಲ್ಲ. ಈಗ ಅವರು ಮಾಡುತ್ತಿರುವ ಪಾದಯಾತ್ರೆ, ಹೋರಾಟದ ಅಗತ್ಯವಿಲ್ಲ. ಅಗತ್ಯ ಬಿದ್ದಾಗ ಬೀದಿಗಿಳಿದು ಹೋರಾಡೋಣ ಈಗ ಅಗತ್ಯವಿಲ್ಲ" ಎಂದು ಸಿದ್ದರಾಮಯ್ಯ ಹೇಳಿದರು.

English summary
Opposition leader and former chief minister Siddaramaiah speech at Kadur, Chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X