ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೃಂಗೇರಿ: ಬುಕ್ ಮಾಡಿದ್ದು ಮೊಬೈಲ್, ಬಾಕ್ಸ್ ನಲ್ಲಿದ್ದಿದ್ದು ಆಲೂ, ಕಲ್ಲು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂನ್ 7: ಆನ್ ಲೈನ್ ಶಾಪಿಂಗ್ ಸೇವೆಯಲ್ಲಿ ಮೊಬೈಲ್ ಬುಕ್ ಮಾಡಿದರೆ ಅದರ ಬದಲು ಆಲೂಗಡ್ಡೆ, ಕಲ್ಲು, ವಿಮ್ ಸೋಪು ಕಳುಹಿಸಿ, ಗ್ರಾಹಕನಿಗೆ ಪಂಗನಾಮ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ.

ಆನ್ ಲೈನ್ ಬುಕಿಂಗ್ ನಲ್ಲಿ ಗ್ರಾಹಕ ರೆಡ್ಮಿ ಮೊಬೈಲ್ ಅನ್ನು ಖರೀದಿಸಿದ್ದನು. ಆದರೆ ಮೊಬೈಲ್ ಫೋನ್ ಬದಲು ಆಲೂಗಡ್ಡೆ, ಸೋಪು, ಕಲ್ಲು ಕಳುಹಿಸಿ ಶೃಂಗೇರಿಯ ಗ್ರಾಹಕ ಹೈದರಾಲಿಗೆ ಟೋಪಿ ಹಾಕಲಾಗಿದೆ.

ಡೆಲಿವರಿ ಬಾಯ್ ತಂದು ಕೊಟ್ಟ ನಂತರ ಗ್ರಾಹಕ ಹೈದರಾಲಿ ಬಾಕ್ಸ್ ಓಪನ್ ಮಾಡಿ ನೋಡಿದಾಗ ಆಲೂಗಡ್ಡೆ, ಸೋಪು ಪತ್ತೆಯಾಗಿವೆ. ಮೊಬೈಲ್ ಫೋನ್ ಇರಬೇಕಾಗಿದ್ದ ಬಾಕ್ಸ್ ನಲ್ಲಿ ಇವು ಇದ್ದದ್ದನ್ನು ನೋಡಿ ಹೈದರಾಲಿ ಮತ್ತು ಸ್ನೇಹಿತರು ದಂಗಾಗಿದ್ದಾರೆ.

Online Cheating In Chikkamagaluru

ಆನ್ ಲೈನ್ ಶಾಪಿಂಗ್ ನಲ್ಲಾದ ಮೋಸದ ಬಗ್ಗೆ ಸ್ಥಳೀಯ ಶೃಂಗೇರಿ ಪೊಲೀಸ್ ಠಾಣೆಗೆ ಗ್ರಾಹಕ ಹೈದರಾಲಿ ದೂರು ನೀಡಿದ್ದಾರೆ.

English summary
The customer had purchased Redmi Mobile on online booking. But instead of a mobile phone, send the potatoes, soap and stone to Sringeri's customer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X