ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಕ್ರಮ ಕಸಾಯಿಖಾನೆ ಮೇಲೆ ನಗರಸಭೆ ದಾಳಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು,ಜೂ 15: ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮ ಕಸಾಯಿಖಾನೆ ತೆರವು ಮುಂದೂವರೆದಿದ್ದು, ಮಂಗಳವಾರ ನಗರಸಭೆ ಅಧ್ಯಕ್ಷ ಹಾಗೂ ಪೌರಾಯುಕ್ತರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಟಿಪ್ಪುನಗರ ಬಡಾವಣೆಯಲ್ಲಿ ಅಕ್ರಮ ಕಸಾಯಿಖಾನೆ ಮೇಲೆ ದಾಳಿ ನಡೆಸಿ ಗೋಮಾಂಸವನ್ನು ವಶಕ್ಕೆ ಪಡೆದು ಶೆಡ್ ಗಳಿಗೆ ನೋಟಿಸ್ ಅಂಟಿಸಿ ಎಚ್ಚರಿಕೆ ನೀಡಿದರು.

ನಗರದ ಟಿಪ್ಪುನಗರದಲ್ಲಿ ಅಕ್ರಮ ಕಸಾಯಿಖಾನೆ ನಡೆಸಲಾಗುತ್ತಿದೆ ಎಂಬ ದೂರಿನ ಮೇರೆಗೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಪೌರಾಯುಕ್ತ ಬಿ.ಸಿ.ಬಸವರಾಜ್, ನಗರಸಭೆ ಸಿಬ್ಬಂದಿ ಹಾಗೂ ನಗರ ಪೊಲೀಸ್ ಠಾಣೆ ಪೊಲೀಸರೊಂದಿಗೆ ಕಸಾಯಿಖಾನೆ ಅಕ್ರಮ ಮೂರು ಶೆಡ್ ಗಳ ಮೇಲೆ ಬಿಸಿಬಿಯೊಂದಿಗೆ ದಾಳಿ ನಡೆಸಿದರು. ಈ ವೇಳೆ ಶೆಡ್ ವೊಂದರಲ್ಲಿ ಅಂದಾಜು 300 ಕೆ.ಜಿ. ಗೋಮಾಂಸ ಪತ್ತೆಯಾಗಿದ್ದು, ನಗರಠಾಣೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣದ ದಾಖಲಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಕಾಫಿನಾಡಲ್ಲಿ ಮನಮೋಹಕ ಜಿಪ್ಸಿ ರ‍್ಯಾಲಿ, ಜನ ಫುಲ್ ಖುಷ್ಕಾಫಿನಾಡಲ್ಲಿ ಮನಮೋಹಕ ಜಿಪ್ಸಿ ರ‍್ಯಾಲಿ, ಜನ ಫುಲ್ ಖುಷ್

 ದಾಳಿ ನಡೆಸಿ ಕಸಾಯಿಖಾನೆ ನಡೆಸದಂತೆ ಎಚ್ಚರಿಕೆ

ದಾಳಿ ನಡೆಸಿ ಕಸಾಯಿಖಾನೆ ನಡೆಸದಂತೆ ಎಚ್ಚರಿಕೆ

ಅಕ್ರಮ ಕಸಾಯಿಖಾನೆ ಶೆಡ್ ಗಳನ್ನು ನೆಲಸಮಗೊಳಿಸಲು ನಗರಸಭೆ ಅಧ್ಯಕ್ಷರು ಮತ್ತು ಪೌರಾಯುಕ್ತರು ಜೆಸಿಬಿಯೊಂದಿಗೆ ತೆರಳಿದ್ದರು. ಶೆಡ್ ಹಾಗೂ ಕಟ್ಟಡ ಅಕ್ರಮವೋ ಸಕ್ರಮವೋ ಎಂಬ ಗೊಂದಲ ಉಂಟಾಗಿದ್ದರಿಂದ ಶೆಡ್ ಮತ್ತು ಕಟ್ಟಡ ನೆಲಸಮಗೊಳಿಸಲು ಹಿಂದೇಟು ಹಾಕಿದರು.

ಗೋಮಾಂಸ ಪತ್ತೆಯಾದ ಕಟ್ಟಡ ಈ ಹಿಂದೆ ವಾಸದ ಮನೆಯಾಗಿದ್ದು, ಮಾಲೀಕರು ಬೆಂಗಳೂರಿನಲ್ಲಿ ನೆಲೆಸಿದ್ದಾರಂಬ ಮಾಹಿತಿ ಮೇರೆಗೆ ನಗರಸಭೆ ಸಿಬ್ಬಂದಿಗಳು 1 ಶೆಡ್ ಮತ್ತು ಎರಡು ಕಟ್ಟಡಗಳಿಗೆ ನೋಟಿಸ್ ಅಂಟಿಸಿ ಹಿಂದುರಿಗಿದರು. ಕಸಾಯಿಖಾನೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು. ಇಲ್ಲದಿದ್ದಲ್ಲಿ ಕಟ್ಟಡ ನೆಲಸಮಗೊಳಿಸಲಾಗುವುದು ಎಂಬ ಎಚ್ಚರಿಕೆಯನ್ನು ನೋಟಿಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ. ಕೆಲ ದಿನಗಳ ಹಿಂದೆ ಸಂತೆಮಾಕೇರ್ಟ್ ಬಡಾವಣೆಯಲ್ಲಿ ಅಕ್ರಮ ಕಸಾಯಿಖಾನೆ ಶೆಡ್ ತೆರವು ಗೊಳಿಸಲಾಗಿತ್ತು. ಇಂದು ದಾಳಿ ನಡೆಸಿ ಕಸಾಯಿಖಾನೆ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.

ಚಿಕ್ಕಮಗಳೂರು: ಅಕ್ರಮ ಕಾಸಾಯಿಖಾನೆ ಮೇಲೆ ನಗರಸಭೆ ಅಧಿಕಾರಿ ಸಿಬ್ಬಂದಿ ದಾಳಿಚಿಕ್ಕಮಗಳೂರು: ಅಕ್ರಮ ಕಾಸಾಯಿಖಾನೆ ಮೇಲೆ ನಗರಸಭೆ ಅಧಿಕಾರಿ ಸಿಬ್ಬಂದಿ ದಾಳಿ

 ಅಕ್ರಮ ಕಸಾಯಿಖಾನೆ ಸ್ಥಗಿತಕ್ಕೆ ನೋಟಿಸ್

ಅಕ್ರಮ ಕಸಾಯಿಖಾನೆ ಸ್ಥಗಿತಕ್ಕೆ ನೋಟಿಸ್

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರಸಭೆ ಆಯುಕ್ತ ಬಸವರಾಜ್ ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ದೂರಿನನ್ವಯ ದಾಳಿ ನಡೆಸಲಾಗಿದೆ. 300 ಕೆ.ಜಿ. ಗೋಮಾಂಸ ಪತ್ತೆಯಾಗಿದ್ದು ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ದ್ದಾರೆ. ಕಟ್ಟಡ ಅಕ್ರಮವೋ ಸಕ್ರಮವೋ ಎಂಬ ಮಾಹಿತಿ ಪಡೆದು ಮುಂದಿನ ಕ್ರಮವಹಿಸಲಾಗುವುದು. ಸದ್ಯ ಅಕ್ರಮ ಕಸಾಯಿಖಾನೆ ಸ್ಥಗಿತಕ್ಕೆ ನೋಟಿಸ್ ನೀಡಲಾಗಿದೆ. ಮತ್ತೆ ಕಸಾಯಿಕಾನೆ ನಡೆಸಿದಲ್ಲಿ ಕಟ್ಟಡಗಳನ್ನೇ ತೆರವುಗೊಳಿಸಲಾಗುವುದು ಎಂದರು.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಈ ಹಿಂದೆ ಶ್ರೀರಾಮಸೇನೆ ಹಾಗೂ ಬಜರಂಗದಳ ಅಕ್ರಮ ಖಸಾಯಿಖಾನೆ ನಡೆಸುತ್ತಿರುವ ಮನವಿ ಸಲ್ಲಿಸಿದ್ದರು. ಈ ಹಿಂದೆ ನಾವು ಪ್ರತಿಭಟನೆ ನಡೆಸಿ ಅಕ್ರಮ ಖಸಾಯಿಖಾನೆಯನ್ನ ತೆರವು ಗೊಳಿಸುವಂತೆ ಪ್ರತಿಭಟನೆ ಮಾಡಿದ್ದೆವು. ಸದ್ಯ ದೂರಿನ ಮೇರೆಗೆ ಟಿಪ್ಪುನಗರದಲ್ಲಿ ಅಕ್ರಮ ಖಸಾಯಿಖಾನೆ ಗೆ ಪತ್ತೆಯಾಗಿದೆ. ಇಬ್ಬರನ್ನ ವಶಕ್ಕೆ.ಪಡೆದು ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ. ಮುಂದೆಯು ಅಕ್ರಮ ಗೋ ಮಾಂಸ ಮಾರಾಟ ಮಾಡುವುದು ಕಂಡು ಬಂದರೇ ಮನೆಯನ್ನು ತೆರವುಗೊಳಿಸುವುದಾಗಿ ನೋಟೀಸ್ ನೀಡಿ ಎಚ್ಚರಿಕೆ ನೀಡಲಾಗಿದೆ ಎಂದರು.

 ಶೆಡ್ ಮಾಲೀಕ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲು

ಶೆಡ್ ಮಾಲೀಕ ಸೇರಿದಂತೆ ಇತರರ ಮೇಲೆ ಪ್ರಕರಣ ದಾಖಲು

ಅಕ್ರಮ ಗೋಮಾಂಸ ಶೆಡ್ ಮೇಲೆ ನಗರಸಭೆ ಅಧ್ಯಕ್ಷರ ನೇತೃತ್ವದ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯಲ್ಲಿ ನಡೆದಿದೆ.

ಶುಕ್ರವಾರ ಬೆಳಿಗ್ಗೆ ಸಂತೆಮೈದಾನದ ಸಮೀಪದಲ್ಲಿರುವ ತಮಿಳು ಕಾಲೋನಿಯಲ್ಲಿ ಅಕ್ರಮ ವಾಗಿ ಕಾಸಾಯಿಖಾನೆ ನಡೆಸುತಿದ್ದು ಬೆಳಕಿಗೆ ಬಂದಿದ್ದು, ಜೆಸಿಬಿಯೊಂದಿಗೆ ತೆರಳಿದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಶೆಡ್ ಗಳನ್ನು ನಾಶಗೊಳಿಸಿದ್ದಾರೆ.

ಶೆಡ್ ಮಾಲೀಕ ಸೇರಿದಂತೆ ಇತರರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ನೇತೃತ್ವದಲ್ಲಿ ವಾರ್ಡ್ 22 ರಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿತ್ತು. ಸ್ವಚ್ಛತೆ ಕಾರ್ಯ ಮುಗಿಸಿ ಮನೆಗೆ ತೆರಳುವ ವೇಳೆ ಶೆಡ್‌ವೊಂದರಲ್ಲಿ 4 ರಿಂದ 5 ಜನ ಇಣುಕಿ ನೋಡುತ್ತಿದ್ದರು. ಇದರಿಂದ ಅನು ಮಾನಗೊಂಡ ಅಧಿಕಾರಿಗಳ ತಂಡ ಪೊಲೀಸರಿಗೆ ಮಾಹಿತಿ ನೀಡಿ ಶೆಡ್ ಸಮೀಪ ತೆರಳಿದಾಗ ಕೌಂಪೌಂಡ್ ಎಗರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಶೆಡ್ ಒಳಗೆ ಪರಿಶೀಲನೆ ನಡೆಸಿದಾಗ 3 ಹಸುಗಳನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ಅಕ್ರಮವಾಗಿ ನಿರ್ಮಿಸಿರುವ ಶೆಡ್ ನಲ್ಲಿ ಕಾಸಾಯಿಖಾನೆ ನಡೆಸುತ್ತಿರುವುದು ಕಂಡು ಬಂದಿದ್ದು, ಪೊಲೀಸ್ ಸಿಬ್ಬಂದಿಗಳ ಸಮ್ಮುಖದಲ್ಲಿ ಶೆಡ್ ತೆರವುಗೊಳಿಸಿ ಸೈಟ್ ಮಾಲೀಕ ಹಾಗೂ ಇತರರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 ಶೆಡ್ ಪ್ರವೇಶಿಸಿ ನೋಡಿದಾಗ ಅಕ್ರಮವಾಗಿ ಗೋಹತ್ಯೆ ಪತ್ತೆ

ಶೆಡ್ ಪ್ರವೇಶಿಸಿ ನೋಡಿದಾಗ ಅಕ್ರಮವಾಗಿ ಗೋಹತ್ಯೆ ಪತ್ತೆ

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ನಗರದಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಇಂದು ದಾಳಿ ನಡೆಸಿ 2 ಶೆಡ್ ಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಗಿದೆ. ಇಂದಿನಿಂದಲೇ ಗೋಹತ್ಯೆಯನ್ನು ನಿಲ್ಲಿಸದಿದ್ದರೇ ಮುಂದಿನ ದಿನಗಳಲ್ಲಿ ದಾಳಿ ನಡೆಸಿ ಕಸಾಯಿಖಾನೆ ನಡೆಸುತ್ತಿರುವ ಶೆಡ್ ಗಳನ್ನು ತೆರವುಗೊಳಿಸಲಾಗುವುದು ಎಂದರು.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರಸಭೆ ಆಯುಕ್ತ ಬಸವರಾಜ್, "ವಾರ್ಡ್ ನಂಬರ್ 22ರಲ್ಲಿ ಸ್ವಚ್ಛತೆ ಕಾರ್ಯ ನಡೆಸಲು ನಗರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡ ತಮಿಳು ಕಾಲೊನಿಗೆ ತೆರಳಲಾಗಿತ್ತು. ಸ್ವಚ್ಛತೆ ಕಾರ್ಯ ಮುಗಿಸಿ ತೆರಳುವ ವೇಳೆ ಶೆಡ್ ವೊಂದರಲ್ಲಿ 4 ರಿಂದ 5 ಜನರು ಅನುಮಾನಸ್ಪದವಾಗಿ ನಡೆದು ಕೊಳ್ಳುತ್ತಿರುವುದು ಕಂಡು ಬಂದಿದ್ದು, ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಶೆಡ್ ಮೇಲೆ ದಾಳಿ ನಡೆಸಲಾಯಿತು. ಅಧಿಕಾರಿಗಳ ತಂಡ ಶೆಡ್ ಬಳಿ ತೆರಳುತ್ತಿದ್ದಂತೆ ಅಲ್ಲಿದ್ದವರು ಓಡಿ ಹೋಗಿದ್ದು, ಶೆಡ್ ಪ್ರವೇಶಿಸಿ ನೋಡಿದಾಗ ಅಕ್ರಮವಾಗಿ ಗೋಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಅಕ್ರಮ ಶೆಡ್ ತೆರವುಗೊಳಿಸಲಾಗಿದೆ. ಜಾಗದ ಮಾಲೀಕ ಸೇರಿದಂತೆ ಇತರರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ," ಎಂದರು.

(ಒನ್ಇಂಡಿಯಾ ಸುದ್ದಿ)

English summary
Chikkamagaluru city administration has continued its operation of evacuating illegal slaughterhouse. On Tuesday officials raided one such building at Tipunagar layout, seizing several KGs of cow meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X