ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾಮ ಲೆಕ್ಕಿಗನ ಜೊತೆ ಎನ್. ಆರ್. ಪುರ ತಹಶೀಲ್ದಾರ್ ವಿವಾಹ; ಏನಿದು ವಿವಾದ?

|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್ 21; ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಹಶೀಲ್ದಾರ್ ಸಿ. ಜಿ. ಗೀತಾ ತರೀಕೆರೆ ತಾಲೂಕು ಗ್ರಾಮ ಲೆಕ್ಕಿಗ ಡಿ. ಟಿ. ಶ್ರೀನಿಧಿ ಜೊತೆ ವಿವಾಹವಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಈ ಕುರಿತು ವಿವರಣೆ ಕೇಳಿ ಶಹಶೀಲ್ದಾರ್‌ಗೆ ನೋಟಿಸ್ ನೀಡಿದ್ದಾರೆ. ಏಳು ದಿನದಲ್ಲಿ ತಹಶೀಲ್ದಾರ್ ಈ ಕುರಿತು ವಿವರಣೆ ನೀಡಬೇಕಿದೆ.

ಗ್ರಾಮ ಲೆಕ್ಕಿಗ ಡಿ. ಟಿ. ಶ್ರೀನಿಧಿಗೆ ಈಗಾಗಲೇ ಟಿ. ಆರ್. ಲೀಲಾ ಜೊತೆ ವಿವಾಹವಾಗಿದೆ. ಅಲ್ಲದೇ ಅವಿವಾಹಿತೆ ಎಂದ ಸಹ ಸಿ. ಜಿ. ಗೀತಾ ಮಾಹಿತಿ ನೀಡಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಮದುವೆ/ವಿಚ್ಛೇದನ ಬಳಿಕ ಪಾಸ್‌ಪೋರ್ಟ್ ಬದಲಾವಣೆ ಹೇಗೆ?ಮದುವೆ/ವಿಚ್ಛೇದನ ಬಳಿಕ ಪಾಸ್‌ಪೋರ್ಟ್ ಬದಲಾವಣೆ ಹೇಗೆ?

19/7/2021ರಂದು ಸಿ. ಜಿ. ಗೀತಾ ಮತ್ತು ಡಿ. ಟಿ. ಶ್ರೀನಿಧಿ ವಿವಾಹ ಎನ್. ಆರ್. ಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯಾಗಿದೆ. 2006ರಲ್ಲಿ ಡಿ. ಆರ್. ಲೀಲಾ ದಾವಣಗೆರೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಡಿ. ಟಿ. ಶ್ರೀನಿಧಿ ವಿವಾಹವಾಗಿದ್ದಾರೆ.

 ಮಳೆಗಾಗಿ ಪ್ರಾರ್ಥಿಸಿ ಹರಪನಹಳ್ಳಿ ತಾಲೂಕಿನಲ್ಲಿ ಕಪ್ಪೆಗಳಿಗೆ ಅದ್ಧೂರಿ ಮದುವೆ ಮಳೆಗಾಗಿ ಪ್ರಾರ್ಥಿಸಿ ಹರಪನಹಳ್ಳಿ ತಾಲೂಕಿನಲ್ಲಿ ಕಪ್ಪೆಗಳಿಗೆ ಅದ್ಧೂರಿ ಮದುವೆ

 Chikkamagaluru: NR Pura Tahsildar ties knot with already married Village Accountant; DC Sent Notice

ಡಿ. ಆರ್. ಲೀಲಾ ಮತ್ತು ಡಿ. ಟಿ. ಶ್ರೀನಿಧಿ ದಂಪತಿಗೆ ಎರಡು ಮಕ್ಕಳಿದ್ದಾರೆ. ಡಿ. ಟಿ. ಶ್ರೀನಿಧಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಕಡೂರು ಪೊಲೀಸ್ ಠಾಣೆಯಲ್ಲಿ ಡಿ. ಆರ್. ಲೀಲಾ ಪ್ರಕರಣ ದಾಖಲಿಸಿದ್ದಾರೆ.

ಬೇಗ ಮದುವೆ ಮಾಡಿಸುವಂತೆ ಟವರ್ ಹತ್ತಿ ಕುಳಿತ ಯುವಕ! ಬೇಗ ಮದುವೆ ಮಾಡಿಸುವಂತೆ ಟವರ್ ಹತ್ತಿ ಕುಳಿತ ಯುವಕ!

ಡಿ. ಟಿ. ಶ್ರೀನಿಧಿ ಟಿ. ಆರ್. ಲೀಲಾ ವಿರುದ್ಧ ಹಿರಿಯ ಸಿವಿಲ್ ನ್ಯಾಯಾಲಯ ಕಡೂರು ಇಲ್ಲಿಗೆ 2021ರಲ್ಲಿ ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆ ಸಹ ಇನ್ನು ಪೂರ್ಣಗೊಂಡು ಆದೇಶ ಪ್ರಕಟವಾಗಿಲ್ಲ. ಸಿ. ಜಿ. ಗೀತಾ ಮತ್ತು ಡಿ. ಟಿ. ಶ್ರೀನಿಧಿ ವಿವಾಹದ ಕುರಿತು ಟಿ. ಆರ್. ಲೀಲಾ 6/9/2021ರಂದು ಸಲ್ಲಿಸಿರುವ ಅರ್ಜಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ನೋಟಿಸ್ ನೀಡಿದ್ದಾರೆ.

ನೋಟಿಸ್ ಏಕೆ?; 19/7/2021ರಂದು ಸಿ. ಜಿ. ಗೀತಾ ಮತ್ತು ಡಿ. ಟಿ. ಶ್ರೀನಿಧಿ ಎನ್. ಆರ್. ಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಈ ರೀತಿ ನಡವಳಿಕೆ ಸರ್ಕಾರಿ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ಇಲಾಖಾ ವಿಚಾರಣೆ ನಡೆಸಿ ನ್ಯಾಯ ದೊರಕಿಸಿಕೊಡಬೇಕೆಂದು ಟಿ. ಆರ್. ಲೀಲಾ ಮನವಿ ಮಾಡಿದ್ದು, ಈ ಅರ್ಜಿಯ ಆಧಾರದ ಮೇಲೆ ನೋಟಿಸ್‌ ಕೊಡಲಾಗಿದೆ.

ಟಿ. ಆರ್. ಲೀಲಾ ಪ್ರಸ್ತಾವಿತ ಮನವಿ ವಿಚಾರವು ಕರ್ನಾಟಕ ರಾಜ್ಯ ನಾಗರಿಕ ಸೇವಾ (ನಡತೆ) ನಿಯಮ 2021ರ ನಿಯಮ 30ರ ವ್ಯಾಪ್ತಿಗೆ ಬರುವ ಅಂಶವಾಗಿರುವುದರಿಂದ ಈ ಕೆಳಕಂಡ ಅಂಶಗಳಿಗೆ ವಿವರಣೆ ನೀಡುವುದು ಅವಶ್ಯವಿದೆ.

ಡಿ. ಟಿ. ಶ್ರೀನಿಧಿ ಇವರು ಲೀಲಾ ಇವರನ್ನು ಈಗಾಗಲೇ ಮದುವೆಯಾಗಿದ್ದಾಗ್ಯೂ ನೀವು ಡಿ. ಟಿ. ಶ್ರೀನಿಧಿ ಅವರನ್ನು ನರಸಿಂಹರಾಜಪುರ ಉಪನೋಂದಣಾಧಿಕಾರಿ ಕಚೇರಿಯಲ್ಲಿ 19/7/2021ರಂದು ವಿವಾಹವಾಗಿರುತ್ತೀರಿ ಎಂಬ ಅಂಶಕ್ಕೆ ನಿಮ್ಮ ಸಮರ್ಥನೆ ಏನು? ಎಂದು ನೋಟಿಸ್‌ನಲ್ಲಿ ವಿವರಣೆ ಕೇಳಲಾಗಿದೆ.

ಉಪನೋಂದಣಾಧಿಕಾರಿಗಳು ನರಸಿಂಹರಾಜಪುರ ಇವರ ಕಚೇರಿಯ ಫಾರ್ಮ್ -1ರಂತೆ ಕಾಲಂ 4 (ಜಿ)ರಲ್ಲಿ ನೀವು ಅವಿವಾಹಿತ ಎಂಬುದಾಗಿ ಮಾಹಿತಿ ನೀಡಿದ್ದು, ಇದಕ್ಕೆ ನಿಮ್ಮ ವಿವರಣೆ ಏನು? ಎಂದು ನೋಟಿಸ್‌ನಲ್ಲಿ ವಿವರಣೆ ಕೇಳಿದ್ದಾರೆ.

ನರಸಿಂಹರಾಜಪುರ ತಹಶೀಲ್ದಾರ್ ಸಿ. ಜಿ. ಗೀತಾಗೆ ನೀಡಿರುವ ನೋಟ್‌ನಲ್ಲಿ ನಿಮ್ಮ ಸಮರ್ಥನೆಯನ್ನು ಈ ನೋಟಿಸ್ ತಲುಪಿದ 7 ದಿನದೊಳಗೆ ಕಚೇರಿಗೆ ಸಲ್ಲಿಸಬೇಕು. ತಪ್ಪಿದಲ್ಲಿ ನಿಮ್ಮ ಸಮಜಾಯಿಷಿ ಏನೂ ಇಲ್ಲವೆಂದು ಭಾವಿಸಿ ನಿಯಮಾನುಸಾರ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

Recommended Video

ಸೋಲು ಕಣ್ಣ ಮುಂದೆ ಇದ್ರೂ RCB ಆಟಗಾರನ ಕಣ್ಣು ಈಕೆ ಮೇಲೆ | Oneindia Kannada

ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ. ಎನ್. ರಮೇಶ್ ಈ ಕುರಿತು ಮಾತನಾಡಿದ್ದು, "ಗ್ರಾಮ ಲೆಕ್ಕಿಗನ ಕುಟುಂಬ ದೂರು ನೀಡಿದ್ದಾರೆ. ತಹಶೀಲ್ದಾರ್‌ಗೆ ನೋಟಿಸ್ ನೀಡಲಾಗಿದೆ. ಅವರು ಸಮಾಜಾಯಿಷಿ ನೀಡಬೇಕು" ಎಂದು ಹೇಳಿದ್ದಾರೆ.

English summary
N. R. Pura tahasildar marriage with Tarikere village accountant T. D. Srinidhi. Chikmagalur deputy commissioner issued notice to tahasildar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X