ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುವೆಯಾದ 3 ತಿಂಗಳಿನಲ್ಲಿ ಗೃಹಿಣಿ ಸಾವು; ನೀರಿನ ಸಂಪ್‌ನಲ್ಲಿ ಶವ ಪತ್ತೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂನ್ 30; ಅಂಗೈಗೆ ಹಾಕಿದ್ದ ಗೋರಂಟಿ ಮಾಸಿರಲಿಲ್ಲ. ನವದಂಪತಿಗಳನ್ನು ಮನೆಗೆ ಕರೆದು ನೆಂಟರು ಸತ್ಕಾರವನ್ನೂ ಮಾಡಿರಲಿಲ್ಲ. ಮಗಳ ಮದುವೆಗಾಗಿ ಅಪ್ಪ ಇದ್ದೊಂದು ಮನೆ ಮಾರಿದ್ದನ್ನೂ ಮರೆತಿರಲಿಲ್ಲ.

ಮೂರೇ ಮೂರು ತಿಂಗಳ ಹಿಂದೆ ಹಸೆಮಣೆ ಏರಿದ್ದವಳು ಇಂದು ಶವವಾಗಿದ್ದಾಳೆ. ಕಟ್ಟಿಕೊಂಡ ಗಂಡನ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದೇ ಆಕೆಗೆ ಜೀವಕ್ಕೆ ಮುಳುವಾಗಿದೆ. ಮನೆ ಮುಂದಿನ ನೀರಿನ ತೊಟ್ಟಿಯೇ ಜೀವಕ್ಕೆ ಉರುಳಾಗಿದೆ. ಮಗಳಿಗೆ ಯಾವುದಕ್ಕೂ ಕೊರತೆಯಾಗಬಾರದೆಂದು ಮನೆ ಮಾರಿ ಮದುವೆ ಮಾಡಿಕೊಟ್ಟಿದ್ದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು.

ಮಂಗಳೂರು; ವಾಹನ ತಪಾಸಣೆ ವೇಳೆ ಯುವಕ ಸಾವು, ಚೆಕ್ ಪೋಸ್ಟ್ ಧ್ವಂಸ ಮಂಗಳೂರು; ವಾಹನ ತಪಾಸಣೆ ವೇಳೆ ಯುವಕ ಸಾವು, ಚೆಕ್ ಪೋಸ್ಟ್ ಧ್ವಂಸ

ಹಾಸನ ಜಿಲ್ಲೆ ಬೇಲೂರಿನ ಸೀಮ್ರಾನಾ ಬಾನು ಮೂರು ತಿಂಗಳ ಹಿಂದಷ್ಟೆ ಚಿಕ್ಕಮಗಳೂರಿನ ಫೈರೋಜ್ ಎಂಬುವವನ ಜೊತೆ ವಿವಾಹವಾಗಿದ್ದರು. 3 ತಿಂಗಳು ಕಳೆಯುವಷ್ಟರಲ್ಲಿ ಹೆಣವಾಗಿದ್ದಾಳೆ. ಗಂಡನ ಮನೆಯ ನೀರಿನ ಸಂಪ್‍ನಲ್ಲಿ ಸಿಮ್ರಾನ್ ಮೃತದೇಹ ಸಿಕ್ಕಿದೆ.

ಬೆಳಗ್ಗೆಯಿಂದ ಸಿಮ್ರಾನ್ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಗಂಡನ ಮನೆಯವರು ಮನೆಯಲ್ಲಿ ಇಲ್ಲ, ಬುರ್ಖಾನೂ ಇಲ್ಲ ಎಂದು ಹೇಳಿದ್ದಾರೆ. ಎಲ್ಲಾ ಕಡೆ ವಿಚಾರಿಸಿ ಅನುಮಾನಗೊಂಡು ಸಿಮ್ರಾನ್ ಗಂಡನ ಮನೆ ಬಳಿ ಹುಡುಕುತ್ತಿದ್ದಾಗ ಸಂಪ್ ಒಳಗೆ ಮೃತದೇಹ ಇರುವುದು ಪತ್ತೆಯಾಗಿದೆ.

 ಕೊರೊನಾ 2ನೇ ಅಲೆ: ದೇಶದಲ್ಲಿ 776 ವೈದ್ಯರ ಸಾವು ಕೊರೊನಾ 2ನೇ ಅಲೆ: ದೇಶದಲ್ಲಿ 776 ವೈದ್ಯರ ಸಾವು

Newly Married Woman Found Dead In Husband House

ಆಕೆಯ ಶವವನ್ನು ನೋಡಿದ ಪೋಷಕರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮನೆಯ ಬಳಿಯೇ ಆಕೆಯ ಶವ ಸಿಗುತ್ತಿದ್ದಂತೆ ಸಿಮ್ರಾನ್ ಪತಿ ಫೈರೋಜ್ ಹಾಗೂ ಅವರ ಮನೆಯವರು ಪೇಚಿಗೆ ಸಿಲುಕಿದ್ದಾರೆ. ಸಂಪ್ ಒಳಗೆ ಗೃಹಿಣಿಯ ಮೃತದೇಹ ಸಿಕ್ಕುತ್ತಿದ್ದಂತೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಫೈರೋಜ್ ಹಾಗೂ ಆತನ ತಾಯಿ, ತಂದೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಅಸಲಿ ಬುದ್ಧಿ ತೋರಿಸಿದ್ದ ಫೈರೋಜ್. ಕೊಟ್ಟಿರೋ ದುಡ್ಡು, ಚಿನ್ನ ಸಾಕಾಗಿಲ್ಲ ಇನ್ನೂ ಬೇಕು ಅಂತ ಪೀಡಿಸುತ್ತಿದ್ದನಂತೆ. ಅಲ್ಲದೇ ಬೇರೆ ಹುಡುಗಿಯರ ಜೊತೆ ಸಂಬಂಧ ಕೂಡ ಇಟ್ಟುಕೊಂಡಿದ್ದ.

ಚಿಕ್ಕಮಗಳೂರು; ಕೋವಿಡ್ ಕೇರ್‌ ಸೆಂಟರ್‌ನಲ್ಲಿ ಅಧಿಕಾರಿಗಳ ಡ್ಯಾನ್ಸ್ ಚಿಕ್ಕಮಗಳೂರು; ಕೋವಿಡ್ ಕೇರ್‌ ಸೆಂಟರ್‌ನಲ್ಲಿ ಅಧಿಕಾರಿಗಳ ಡ್ಯಾನ್ಸ್

ಇದನ್ನ ಪ್ರಶ್ನೆ ಮಾಡಿದ್ದ ಪತ್ನಿ ಜೊತೆ ಗಲಾಟೆ ಮಾಡಿದ್ದ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ. ಇತ್ತೀಚಿಗೆ ಮನೆಗೆ ಬರೋದು ತಡವಾಗುತ್ತಿದ್ದಿದ್ದನ್ನು ಪ್ರಶ್ನೆ ಮಾಡಿದ್ದ ಪತ್ನಿ ಸಿಮ್ರಾನ್‌ಳನ್ನ ಪತಿ ಫೈರೋಜ್, ಅತ್ತೆ, ಮಾವ, ನಾದಿನಿ ಎಲ್ಲಾ ಸೇರಿ ಕೊಲೆ ಮಾಡಿದ್ದಾರೆ ಅಂತಾ ಮೃತ ಸಿಮ್ರಾನ್ ಸಂಬಂಧಿಕರು ಆರೋಪಿಸಿದ್ದಾರೆ.

Recommended Video

ಬಯೋಬಬಲ್ ಉಲ್ಲಂಘಿಸಿದ ಶ್ರೀಲಂಕಾ ಆಟಗಾರರಿಗೆ ಒಂದು ವರ್ಷಗಳ ನಿಷೇಧ | Oneindia Kannada

ಒಟ್ಟಾರೆ, ಇದ್ದ ಮನೆಯನ್ನು ಮಾರಿ ಮಗಳ ಮದುವೆ ಮಾಡಿದ್ದ ಪೋಷಕರು ಈಗ ಕಣ್ಣೀರು ಹಾಕುತ್ತಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡು 22ನೇ ವರ್ಷಕ್ಕೆ ಸಿಮ್ರಾನ್ ಕಾಲಿಟ್ಟಿದ್ದಳು. ನಗು ನಗುತ್ತಾ ಗಂಡನ ಮನೆಯಲ್ಲಿ ಇರಬೇಕಾದ ಗೃಹಿಣಿ ಸಾವನ್ನಪ್ಪಿದ್ದಾಳೆ.

English summary
22 year old Hassan based Simran body found in water tank in Chikkamagaluru. Simran married Firoz three months back.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X