ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಆಜ್ಞೆಯಂತೆ ನೆರೆ ಪರಿಸ್ಥಿತಿ ವೀಕ್ಷಣೆಗೆ ಚಿಕ್ಕಮಗಳೂರಿಗೆ ತೆರಳಿದ ಸಿ.ಟಿ.ರವಿ, ಮಾಧುಸ್ವಾಮಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

ಸಿಎಂ ಆಜ್ಞೆಯಂತೆ ನೆರೆ ಪರಿಸ್ಥಿತಿ ವೀಕ್ಷಣೆಗೆ ಚಿಕ್ಕಮಗಳೂರಿಗೆ ತೆರಳಿದ ಸಿ.ಟಿ.ರವಿ, ಮಾಧುಸ್ವಾಮಿ|Oneindia Kannada

ಚಿಕ್ಕಮಗಳೂರು, ಆಗಸ್ಟ್ 21: ಚಿಕ್ಕಮಗಳೂರಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಚಿವರಾದ ಸಿ.ಟಿ.ರವಿ, ಮಾಧುಸ್ವಾಮಿ ಇಂದು ಭೇಟಿ ನೀಡಿದರು.

ನಿನ್ನೆಯಷ್ಟೇ ಪ್ರಮಾಣ ವಚನ ಸ್ವೀಕರಿಸಿ ಸಚಿವ ಸಂಪುಟ ಸೇರಿದ್ದ ಮಾಧುಸ್ವಾಮಿ ಹಾಗೂ ಸಿ.ಟಿ.ರವಿ ಇಂದು ಚಿಕ್ಕಮಗಳೂರಿನ ಪ್ರವಾಹ ಪರಿಸ್ಥಿತಿಯ ಪರಿಶೀಲನೆಗೆ ಮುಂದಾದರು. ಮೂಡಿಗೆರೆ ತಾಲೂಕಿನ ಪ್ರವಾಹ, ನೆರೆ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿ, ಬಣಕಲ್, ಬಾಳೂರು ಹೊರಟ್ಟಿ, ಮಲೆಮನೆ, ದುರ್ಗದಹಳ್ಳಿ ಗ್ರಾಮಗಳ ವೀಕ್ಷಣೆ ಮಾಡಿದರು.

 ಸಂಪುಟ ಸಭೆಯಲ್ಲಿ ಸಚಿವರಿಗೆ ಟಾಸ್ಕ್‌ ಕೊಟ್ಟ ಯಡಿಯೂರಪ್ಪ ಸಂಪುಟ ಸಭೆಯಲ್ಲಿ ಸಚಿವರಿಗೆ ಟಾಸ್ಕ್‌ ಕೊಟ್ಟ ಯಡಿಯೂರಪ್ಪ

ಮಲೆನಾಡಿನ ಪರಿಸ್ಥಿತಿ ಕಂಡು ಸಚಿವ ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದರು. ಮನೆ-ಜಮೀನುಗಳನ್ನು ಕಳೆದುಕೊಂಡವರಿಗೆ ಇಬ್ಬರು ಸಚಿವರೂ ಸಾಂತ್ವನ ಹೇಳಿದರು. ಈ ಇಬ್ಬರು ನೂತನ ಸಚಿವರೊಂದಿಗೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಸಾಥ್ ನೀಡಿದರು.

New Ministers CT Ravi And Madhuswamy Visited Chikkamagalur

ನಿನ್ನೆಯಷ್ಟೇ ನೂತನ ಸಚಿವರ ಪ್ರಮಾಣ ವಚನ ಸಮಾರಂಭದ ಬಳಿಕ ಯಡಿಯೂರಪ್ಪ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದರು. ಸಚಿವರ ಜೊತೆ ಮಾತುಕತೆ ನಡೆಸಿದ ಅವರು, ಎಲ್ಲಾ ಹೊಸ ಸಚಿವರಿಗೆ ಕರ್ನಾಟಕದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಜನರ ಅಹವಾಲು ಸ್ವೀಕಾರ ಮಾಡಬೇಕು ಎಂದು ಕೆಲಸ ವಹಿಸಿದ್ದರು. ನೆರೆ ಸಂತ್ರಸ್ತರ ಪುನರ್ವಸತಿಯೇ ಸರ್ಕಾರದ ಮೊದಲ ಆದ್ಯತೆ ಎಂದು ಘೋಷಣೆ ಮಾಡಿದರು. ಹೀಗಾಗಿ ಈ ಇಬ್ಬರೂ ಸಚಿವರು ಚಿಕ್ಕಮಗಳೂರಿಗೆ ಇಂದು ಭೇಟಿ ನೀಡಿದ್ದರು.

English summary
New Ministers CT Ravi and Madhuswamy visited the flood-prone areas of Chikkamagalur today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X