ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು; ಕಣ್ಮನ ಸೆಳೆಯುತ್ತಿರುವ ನೀಲಿ ಕುರುವಂಜಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್ 16; ಹೂ ಚೆಲುವೆಲ್ಲಾ ನಂದೆಂದಿತು ಅನ್ನೋ ಮಾತು ಅಕ್ಷರಶಃ ಸತ್ಯ. ಜಗತ್ತಿನ ಸೌಂದರ್ಯವನ್ನೆಲ್ಲಾ ತನ್ನಲ್ಲೆ ಹುದುಗಿಸಿಕೊಂಡಿರೋ ಪ್ರಕೃತಿಯ ಸಿರಿತನದೆದುರ ಉಳಿದದ್ದೆಲ್ಲಾ ನಶ್ವರವೇ ಸರಿ.

ಕಾಫಿನಾಡಲ್ಲಿ ಅರಳಿ ನಿಂತಿರೋ ಅಪರೂಪದ ಹೂವೊಂದು ಇಲ್ಲಿನ ಪ್ರಕೃತಿ ಸೌಂದರ್ಯದ ಶ್ರೀಮಂತಿಕೆಯನ್ನು ಇಮ್ಮಡಿಗೊಳಿಸಿದೆ. 12 ವರ್ಷಗಳಿಗೊಮ್ಮೆ ಅರಳುವ ಈ ಹೂವು ಕಾಫಿನಾಡಿನ ಸೌಂದರ್ಯದ ದಿಕ್ಕನ್ನೇ ಬದಲಿಸಲಿದೆ.

ಚಿತ್ರದುರ್ಗ: ಹೂ, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರ ಹಣ ಜಮೆಚಿತ್ರದುರ್ಗ: ಹೂ, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರ ಹಣ ಜಮೆ

ಕಣ್ಣು ಹಾಯಿಸಿದಲೆಲ್ಲಾ ಕಾಣೋ ಅಪರೂಪದ ನೀಲಿ ಕುರುವಂಜಿ ನೋಡುಗರ ಕಣ್ಮನ ಸೆಳೆಯೋದರ ಜೊತೆಗೆ ಪ್ರವಾಸಿಗರ ಕೈ ಬೀಸಿ ಕರೆಯುತ್ತಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರೋ ಕಾಫಿನಾಡಿನ ಗಿರಿ-ಪರ್ವತ ಶ್ರೇಣಿಗಳ ಸಾಲು ನೀಲಿ ರೂಪ ಪಡೆದುಕೊಳ್ತಿವೆ. ಬೆಟ್ಟ-ಗುಡ್ಡಗಳೆಲ್ಲಾ ನೀಲಿಯಾಗಿ ಕಂಗೊಳಿಸೋ ಕಾಲ ಸನ್ನಿಹಿತವಾಗಿದೆ.

12 ವರ್ಷಕ್ಕೊಮ್ಮೆ ಅರಳುವ ಕುರುಂಜಿಯ ಚಮತ್ಕಾರಕ್ಕೆ ಕೊಡಗಿನ ಕೋಟೆ ಬೆಟ್ಟ ನೀಲಿಮಯ!12 ವರ್ಷಕ್ಕೊಮ್ಮೆ ಅರಳುವ ಕುರುಂಜಿಯ ಚಮತ್ಕಾರಕ್ಕೆ ಕೊಡಗಿನ ಕೋಟೆ ಬೆಟ್ಟ ನೀಲಿಮಯ!

Neelakurinji Flowers Bloom In Chikkamagaluru Hills

ರಸ್ತೆಯ ಇಕ್ಕೆಲಗಳಲ್ಲಿ ಅರಳಿ ನಿಂತಿರೋ ಈ ಕುರುವಂಜಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಪಶ್ಚಿಮಘಟ್ಟ ಅರಣ್ಯ ವ್ಯಾಪ್ತಿಯ ಸಾಲಿನಲ್ಲಿ ಮಾತ್ರ ಅರಳೋ ಈ ಹೂವು ಕಾಫಿನಾಡಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಅರಳಿ ನಿಂತಿದೆ. ಮುಳ್ಳಯ್ಯನಗಿರಿಗೆ ಹೋಗುವ ಮಾರ್ಗದ ಸೀತಾಳಯ್ಯನಗಿರಿ ಭಾಗದಲ್ಲಿ ಹುಲುಸಾಗಿ ಅರಳಿ ನಿಂತಿದೆ ಹೂ.

ಮಂಡ್ಯ; ಮನೆ ತಾರಸಿಯಲ್ಲಿ ಸೃಷ್ಟಿಯಾದ ಪುಷ್ಪಲೋಕ! ಮಂಡ್ಯ; ಮನೆ ತಾರಸಿಯಲ್ಲಿ ಸೃಷ್ಟಿಯಾದ ಪುಷ್ಪಲೋಕ!

ಪ್ರವಾಸಿಗರು ಸೀತಾಳಯ್ಯನಗಿರಿಗೆ ಹೋಗುತ್ತಿದ್ದಂತೆ ಪ್ರವಾಸಿಗರನ್ನು ಸ್ವಾಗತಿಸೋದು ಈ ನೀಲಿ ಕುರುವಂಜಿ ಹೂ. ಪಶ್ವಿಮಘಟ್ಟ ಸಂರಕ್ಷಿತ ಪ್ರದೇಶವಾಗಿರೋದ್ರಿಂದ ಈ ಹೂವು ಇನ್ನೂ ಜೀವಂತವಾಗಿದ್ದು, ಪ್ರತಿ 12 ವರ್ಷಕೊಮ್ಮೆ ಕಾಫಿನಾಡನ್ನು ಭೂ ಲೋಕದ ಸ್ವರ್ಗವಾಗಿಸುತ್ತದೆ ಈ ನೀಲಿ ಹೂವು.

ಈ ಹೂವಿಗೆ ಧಾರ್ಮಿಕವಾಗಿಯೂ ಇತಿಹಾಸವಿದೆ. ಸುಬ್ರಹ್ಮಣ್ಯ ವೆಳ್ಳಿನ ಮದುವೆಯಾಗುವಾಗ ಈ ಹೂವಿನ ಮಾಲೆ ಹಾಕಿದ್ರಿಂದ ಈ ಗುರ್ಗಿಯನ್ನು ಪ್ರೇಮದ ಸಂಕೇತವಾಗಿ ಪ್ರೇಮದ ಹೂ ಅಂತಲು ಕರೆಯುತ್ತಾರೆ ಕೇರಳ, ತಮಿಳುನಾಡಿಗರು.

Neelakurinji Flowers Bloom In Chikkamagaluru Hills

ಆದ್ದರಿಂದ ಈ ಹೂವು ಅರಳಿದ ಕೂಡಲೇ ಮೊದಲು ಸುಬ್ರಹ್ಮಣ್ಯನಿಗೆ ಅರ್ಪಿಸುತ್ತಾರೆ. ಮಳೆ, ಗಾಳಿ, ನೀರು, ಬೆಳಕು ಹಾಗೂ ಪ್ರಕೃತಿಯ ಸಮತೋಲನವಾಗಿದ್ದಾಗ ಮಾತ್ರ ಈ ಹೂ ಅರಳಲಿದೆ. ಗುರ್ಗಿ ಹೂವಿನಲ್ಲಿ ನಾನಾ ವಿಧಗಳಿದ್ದು, 5, 7, 12, 14 ವರ್ಷಗಳಿಗೆ ಅರಳೋ ಪ್ರಭೇದ ಹೂವುಗಳೂ ಇವೆ.

ಈ ಹೂವುಗಳು ಅರಳಿ ನಿಂತಾಗ ಇದರ ಕಾಂಡದಲ್ಲಿ ಔಷಧಿಯ ಗುಣಗಳು ಇರುವುದರಿಂದ ನಾನಾ ಖಾಯಿಲೆಗೂ ಬಳಸುತ್ತಾರೆ. ಸದ್ಯಕ್ಕೆ ಕಾಫಿನಾಡಿನ ಗಿರಿಶಿಖರಗಳಲ್ಲಿ ಅರಳಿ ನಿಂತಿರೋ, ಮತ್ತಷ್ಟು ಅರಳೋ ಸನಿಹದಲ್ಲಿದ್ದು ಬೆಟ್ಟಗುಡ್ಡಗಳ ಸೌಂದರ್ಯವನ್ನೆ ಬದಲಿಸಿ, ನೋಡುಗನ ಕಣ್ಮನದಲ್ಲಿ ಅಚ್ಚಳಿಯದೆ ಉಳಿದಿದೆ.

ಒಟ್ಟಾರೆ, ಪ್ರಕೃತಿಯ ಒಡಲಾಳದಲ್ಲಿ ಇನ್ನಷ್ಟು ಸೌಂದರ್ಯದ ರಾಶಿ ಮನೆ ಮಾಡಿದೆಯೋ ಬಲ್ಲವರು ಯಾರೂ ಇಲ್ಲ. ಕಾಫಿನಾಡಲ್ಲಿ ಒಂದೊಂದು ಕಾಲದಲ್ಲೂ ಒಂದೊಂದು ರೀತಿಯ ಸೌಂದರ್ಯ ಮನೆ ಮಾಡಿರುತ್ತೆ.

ಈವರೆಗೆ ಹಸಿರಿನಿಂದ ಕಂಗೊಳಿಸೋ ಬೆಟ್ಟಗುಡ್ಡಗಳನ್ನು ನೋಡಿದ್ದ ನಾವು-ನೀವು ಇನ್ಮುಂದೆ ನೀಲಿ ಬೆಟ್ಟಗಳನ್ನು ನೋಡಬೇಕು ಅಂದರೆ ಕಾಫಿನಾಡಿಗೆ ಬರಲೇಬೇಕು. ತಿಂಗಳ ಕಾಲ ಅರಳಿ ನಿಲ್ಲೋ ಈ ಹೂವಿನಿಂದ ಇಲ್ಲಿನ ಸೌಂದರ್ಯಕ್ಕೆ ಸರಿಸಾಟಿ ಮತ್ತೊಂದಿಲ್ಲ ಅನ್ನೋದಂತು ಸತ್ಯ.

ಕೊಡಗು ಜಿಲ್ಲೆಯಲ್ಲಿಯೂ ಇದೆ; ನೀಲಿ ಕುರುಂಜಿ ಹೂ ಚಿಕ್ಕಮಗಳೂರು ಮಾತ್ರವಲ್ಲ ಕೊಡಗು ಜಿಲ್ಲೆಯ ಬೆಟ್ಟದ ಮೇಲೆಯೂ ತನ್ನ ಚಿತ್ತಾರ ಮೂಡಿಸುತ್ತದೆ. ಮಡಿಕೇರಿ ಬಳಿಯಿರುವ ಮಾಂದಾಲಪಟ್ಟಿಗೆ ತೆರಳಿದವರಿಗೆ ಕೋಟೆ ಬೆಟ್ಟದ ಚೆಲುವು ಕಣ್ಣಿಗೆ ಕಟ್ಟಿರುತ್ತದೆ. ಮಾಂದಾಲಪಟ್ಟಿಯಿಂದ ನಿಂತು ನೋಡಿದರೆ ಬೆಟ್ಟಶ್ರೇಣಿಗಳು ಕಾಣಿಸುತ್ತವೆ. ಅದರಲ್ಲಿ ಎತ್ತರದ ಬೆಟ್ಟವೇ ಕೋಟೆ ಬೆಟ್ಟವಾಗಿದ್ದು, ಬೆಟ್ಟವನ್ನು ಕುರುಂಜಿಗಿಡಗಳು ಆವರಿಸಿದ್ದು ಅವು ಸುಮಾರು ಹನ್ನೆರಡು ವರ್ಷಗಳ ಬಳಿಕ ಆಗಸ್ಟ್‌ ತಿಂಗಳಿನಲ್ಲಿ ಈ ಬೆಟ್ಟದಲ್ಲಿ ಹೂ ಬಿಟ್ಟಿರುವುದು ಇಡೀ ಬೆಟ್ಟ ನೀಲಿಯಾಗಿ ಕಂಗೊಳಿಸುತ್ತಿತ್ತು.

ಕುರುಂಜಿ ಗಿಡಗಳು ಕೊಡಗಿನಾದ್ಯಂತ ಬೆಳೆಯುತ್ತವೆ. ಇದರಲ್ಲಿ ಪ್ರತ್ಯೇಕ ತಳಿಗಳಿವೆ. ಬೆಟ್ಟಗಳಲ್ಲಿ ಬೆಳೆಯುವ ಗಿಡಗಳು ದಷ್ಠಪುಷ್ಠವಾಗಿರುತ್ತವೆ. ತೋಟಗಳಲ್ಲಿಯೂ ಅದರಲ್ಲೂ ಮಳೆ ಹೆಚ್ಚು ಬೀಳುವ ಪ್ರದೇಶಗಳಲ್ಲಿನ ಕಾಫಿ ಏಲಕ್ಕಿ ತೋಟಗಳಲ್ಲಿಯೂ ಇವು ಹುಲುಸಾಗಿ ಬೆಳೆಯುತ್ತವೆ. ಏಲಕ್ಕಿ ತೋಟಕ್ಕೆ ಇವು ಸಹಕಾರಿಯಾಗಿದ್ದು, ಮಣ್ಣಿನ ಫಲವತ್ತತೆ ಹೆಚ್ಚಿಸುವಲ್ಲಿಯೂ ಪಾತ್ರ ವಹಿಸುತ್ತವೆ ಎನ್ನುತ್ತಾರೆ ರೈತರು.

Recommended Video

ಸರ್‌.ಎಂ ವಿಶ್ವೇಶ್ವರಯ್ಯ ಜನ್ಮದಿನ ಹಿನ್ನೆಲೆ ಸಮಾಧಿಗೆ ಪೂಜೆ ಸಲ್ಲಿಕೆ

English summary
Rare flower Neelakurinji bloom in Chikkamagaluru district hills. It is also called the flower of love.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X