ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಿಳುನಾಡಿನಲ್ಲಿ ಎನ್‌ಡಿಎ ಅಧಿಕಾರಕ್ಕೆ ಬರಲಿದೆ; ಸಿ. ಟಿ. ರವಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮಾರ್ಚ್ 15; " ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಚುನಾವಣಾ ಉಸ್ತುವಾರಿ ಸಿ. ಟಿ. ರವಿ ಹೇಳಿದರು.

ಸೋಮವಾರ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ಅಣ್ಣಾಮಲೈ ತಮಿಳುನಾಡು ರಾಜ್ಯಕ್ಕೆ ಒಳ್ಳೆಯ ನಾಯಕತ್ವ ನೀಡುತ್ತಾರೆ. ಅವರಿಗೆ ಅಪಾರವಾದ ಜನ ಬೆಂಬಲ ವ್ಯಕ್ತವಾಗಿದೆ. ಅವರು ಗೆಲ್ಲುತ್ತಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

 ತಮಿಳುನಾಡು ಚುನಾವಣೆ; ಗೆಲುವಿನ ನಿರೀಕ್ಷೆಯಲ್ಲಿ ಡಿಎಂಕೆಯಿಂದ ಭರವಸೆಯ ಮಹಾಪೂರ ತಮಿಳುನಾಡು ಚುನಾವಣೆ; ಗೆಲುವಿನ ನಿರೀಕ್ಷೆಯಲ್ಲಿ ಡಿಎಂಕೆಯಿಂದ ಭರವಸೆಯ ಮಹಾಪೂರ

"234 ವಿಧಾನಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದ್ದು, ಬಿಜೆಪಿ 10ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ" ಎಂದು ಸಿ. ಟಿ. ರವಿ ವಿಶ್ವಾಸ ವ್ಯಕ್ತಪಡಿಸಿದರು.

ತಮಿಳುನಾಡು ಚುನಾವಣಾ ಪೂರ್ವ ಸಮೀಕ್ಷೆ; ಬಿಜೆಪಿಗೆ ನಿರಾಸೆ! ತಮಿಳುನಾಡು ಚುನಾವಣಾ ಪೂರ್ವ ಸಮೀಕ್ಷೆ; ಬಿಜೆಪಿಗೆ ನಿರಾಸೆ!

NDA Alliance Will Come To Power In Tamil Nadu Says CT Ravi

ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಪಕ್ಷ ಸೇರಿದ್ದಾರೆ. ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾದ ಅವರಿಗೆ ಕರೂರು ಜಿಲ್ಲೆಯ ಅರವಾಕುರುಚಿ ಕ್ಷೇತ್ರದಿಂದ ಕಣಕ್ಕಿಳಿಯಲು ಟಿಕೆಟ್ ನೀಡಲಾಗಿದೆ.

 ತಮಿಳುನಾಡು ಚುನಾವಣೆ; ತಮ್ಮ ಸ್ಪರ್ಧಾ ಕಣ ಘೋಷಿಸಿದ ಕಮಲ ಹಾಸನ್ ತಮಿಳುನಾಡು ಚುನಾವಣೆ; ತಮ್ಮ ಸ್ಪರ್ಧಾ ಕಣ ಘೋಷಿಸಿದ ಕಮಲ ಹಾಸನ್

ಬಿಜೆಪಿ ಪಕ್ಷ ಎಐಎಡಿಎಂಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಎಐಎಡಿಎಂಕೆ 134 ಸ್ಥಾನ ಗೆದ್ದಿತ್ತು. 80ರಲ್ಲಿ ಡಿಎಂಕೆ, 8ರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಬಿಜೆಪಿ ಒಂದು ಸ್ಥಾನ ಸಹ ಗೆದ್ದಿರಲಿಲ್ಲ.

Recommended Video

ರಮೇಶ್ ಜಾರಕಿಹೊಳಿ ಸಿಡಿ ಕೇಸ್‍ಗೆ ಹೊಸ ಟ್ವಿಸ್ಟ್-ಚಿಕ್ಕಮಗಳೂರು ವ್ಯಕ್ತಿಯ ಧ್ವನಿ ವಾಯ್ಸ್ ಟೆಸ್ಟ್..! | Oneindia Kannada

ತಮಿಳುನಾಡು ವಿಧಾನಸಭೆಯ ಒಟ್ಟು ಸದಸ್ಯ ಬಲ 234. ಮಾರ್ಚ್ 12ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಿದೆ. ಮಾರ್ಚ್ 19ರ ತನಕ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಏಪ್ರಿಲ್ 6ರಂದು ಮತದಾನ ನಡೆಯಲಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.

English summary
NDA alliance will come to power in Tamil Nadu assembly election 2021, BJP will win more than 10 seats said BJP national general secretary C. T. Ravi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X