ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡಿಗೆ ಇಳಿದುಬಂದಿದೆ ಈ ಹೂವಿನ ಸ್ವರ್ಗ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

Recommended Video

Namadhari flowers in Chikkamagaluru have created a new world | Oneindia Kannada

ಹೂವು ಚೆಲುವೆಲ್ಲಾ ನಂದೆಂದಿತು... ಅನ್ನುವ ಹಾಡಿನ ಸಾಲಿದೆಯಲ್ಲಾ, ಅದು ನಿಜ ಅನ್ನಿಸುವುದು ಚಿಕ್ಕಮಗಳೂರಿನ ಈ ಹೂ ರಾಶಿಯನ್ನು ನೋಡಿದಾಗ. ಕಾಫಿಯ ಘಮದಲ್ಲೇ ಕಳೆದು ಹೋಗಿದ್ದ ಮಲೆನಾಡಿಗರನ್ನು ಈ ನಾಮಧಾರಿ ಸಾಲ್ವಿಯಾ ಹೂಗಳ ಅಂದ ಮರಳು ಮಾಡುತ್ತಿದೆ.

ಬಣ್ಣಬಣ್ಣದ ಈ ಹೂ ರಾಶಿಯ ಸೌಂದರ್ಯ ನೋಡಲು ಎರಡು ಕಣ್ಣುಗಳೂ ಸಾಲದು. ನೋಡಲಷ್ಟೆ ಅಲ್ಲ, ರೈತನ ಕಿಸೆಗೂ ಲಕ್ಷಾಂತರ ಆದಾಯ ತಂದುಕೊಡುತ್ತಿರುವ ಈ ಹೂಗಳು ಚಿಕ್ಕಮಗಳೂರಿನಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿವೆ. ಹೂಗಳ ಈ ಅಂದ ಚೆಂದ ಜನರ ನೋಟ ಅದರತ್ತ ಹೊರಳುವಂತೆ ಮಾಡುತ್ತವೆ.

 10-12 ವರ್ಷಗಳಿಂದ ಹೂ ಬೆಳೆಯುತ್ತಿರುವ ರೈತರು

10-12 ವರ್ಷಗಳಿಂದ ಹೂ ಬೆಳೆಯುತ್ತಿರುವ ರೈತರು

ರೇಟಿನ ವ್ಯತ್ಯಾಸವಿಲ್ಲ, ಮಳೆ ಭಯವೂ ಇಲ್ಲ. ನೀರು ಬೇಕೇ ಬೇಕು ಅಂತಿಲ್ಲ. ಮಾರುಕಟ್ಟೆಯ ಕಷ್ಟವಿಲ್ಲ, ದಲ್ಲಾಳಿಗಳ ಕಾಟವಂತೂ ಮೊದಲೇ ಇಲ್ಲ. ರೈತರ ಬದುಕು ಹಸನಾಗುವುದರಲ್ಲೂ ಅನುಮಾನವಿಲ್ಲ. ಅನಾವೃಷ್ಠಿಯಿಂದ ಹಾಕಿದ್ದ ಬೆಳೆಯೆಲ್ಲಾ ಮಣ್ಣು ಪಾಲಾಗುತ್ತಿತ್ತು. ಹಾಗಾಗಿ, ಚಿಕ್ಕಮಗಳೂರು-ಹಾಸನ ಜಿಲ್ಲೆಯ ಗಡಿ ಗ್ರಾಮಗಳ ಜನ ಕಳೆದ 10-12 ವರ್ಷಗಳಿಂದ ನಾಮಧಾರಿ ಹೂ ಬೆಳೆಯುತ್ತಿದ್ದಾರೆ. ಸುಡು ಬಿಸಿಲ ಮಧ್ಯೆಯ ಕೆಂಪು-ನೀಲಿ ಬಣ್ಣದ ಹೂಗಳ ಸ್ವರ್ಗ ಕಂಡ ದಾರಿಹೋಕರು ಗಾಡಿ ನಿಲ್ಲಿಸಿ ಸೆಲ್ಫಿ ಕ್ಲಿಕ್ಕಿಸದೇ ಮುಂದೆ ಹೋಗುವುದಿಲ್ಲ.

ಬೆಟ್ಟದ ತುಂಬೆಲ್ಲಾ ನೀಲಕುರಿಂಜಿಯ ಮೋಹಕ ಜಾಲಬೆಟ್ಟದ ತುಂಬೆಲ್ಲಾ ನೀಲಕುರಿಂಜಿಯ ಮೋಹಕ ಜಾಲ

 ಕೆ.ಜಿಗೆ 5 ಸಾವಿರ ದರ

ಕೆ.ಜಿಗೆ 5 ಸಾವಿರ ದರ

ದರ-ಮಳೆ-ಮಾರುಕಟ್ಟೆ-ದಲ್ಲಾಳಿ ಯಾರ ಕಾಟವೂ ಇಲ್ಲದೇ ನಂಬಿದವರ ಕೈ ಹಿಡಿದು ನಡೆಸುತ್ತಿರುವ ಈ ನಾಮಧಾರಿ ಹೂವು ನೋಡುವವರ ಕಣ್ಣಿಗೆ ಖುಷಿ ಕೊಡುತ್ತಿವೆ. ಈ ಹೂವು ಬೆಳೆಯಲು ಹೆಚ್ಚಿನ ನೀರು ಬೇಡ. ಮಳೆ ಹೆಚ್ಚಾದರೆ ಈ ಬೆಳೆಯೂ ಮಣ್ಣು ಪಾಲಾಗುತ್ತದೆ. ಮಳೆ ಪ್ರಮಾಣ ಕಡಿಮೆ ಇರುವ ಪ್ರದೇಶಕ್ಕೆ ಈ ಹೂವಿನ ಬೆಳೆ ಹೇಳಿ ಮಾಡಿಸಿದಂತಿದೆ. ಕೆ.ಜಿಗೆ 5-6 ಸಾವಿರ ಇದರ ದರವಿದ್ದು, ಎಕರೆಗೆ 40-50 ಕೆ.ಜಿ. ಬೆಳೆಯಬಹುದು. ಕಂಪನಿಯವರೇ ಬೀಜ ಕೊಟ್ಟು, ತಿಂಗಳಿಗೆ ಎರಡು ಬಾರಿ ಭೇಟಿ ನೀಡಿ ಸಲಹೆ ನೀಡುತ್ತಾರೆ.

 ವರ್ಷಕ್ಕೆರಡು ಬಾರಿ 4 ಲಕ್ಷ ಲಾಭ

ವರ್ಷಕ್ಕೆರಡು ಬಾರಿ 4 ಲಕ್ಷ ಲಾಭ

ಈ ಹೂವನ್ನು ಮಾರಲು ದಲ್ಲಾಳಿಗಳು ಬೇಡವೇ ಬೇಡ. ಹೂವನ್ನು ಕಂಪನಿಯವರೇ ಖರೀದಿಸುತ್ತಾರೆ. ರೇಟು ಫಿಕ್ಸು. ಕಂಪನಿಯವರು ಜಾಗ ಹಾಗೂ ಭೂಮಿ ನೋಡಿ ಬೆಳೆಯೋದಕ್ಕೆ ಅವರೇ ಸಹಕರಿಸುತ್ತಾರೆ. ಎಕರೆಗೆ 60-80 ಸಾವಿರ ಖರ್ಚು ಮಾಡಿದರೆ, ವರ್ಷಕ್ಕೆರಡು ಬಾರಿ 3-4 ಲಕ್ಷ ದುಡಿಯಬಹುದು. ಹತ್ತಾರು ವರ್ಷಗಳಿಂದ ಈ ಹೂವನ್ನು ಬೆಳೆದುಕೊಂಡೇ ಹತ್ತಾರು ಗ್ರಾಮದ ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ.

ಮಲ್ಲಿಗೆ ಕೃಷಿ ಮಾಡಿ ಶಿಕ್ಷಕರಿಗೆ ಸಂಬಳ ನೀಡುವ ವಿದ್ಯಾರ್ಥಿಗಳುಮಲ್ಲಿಗೆ ಕೃಷಿ ಮಾಡಿ ಶಿಕ್ಷಕರಿಗೆ ಸಂಬಳ ನೀಡುವ ವಿದ್ಯಾರ್ಥಿಗಳು

 ಪ್ರವಾಸಿಗರಿಗೆ ಸುಂದರ ನೋಟ

ಪ್ರವಾಸಿಗರಿಗೆ ಸುಂದರ ನೋಟ

ಒಟ್ಟಾರೆ, ಈ ಹೂವು ರೈತರಿಗೆ ಬದುಕನ್ನೂ ಕೊಡ್ತಿದೆ. ಪ್ರವಾಸಿಗರಿಗೆ ಸುಂದರ ನೋಟವನ್ನೂ ನೀಡುತ್ತಿದೆ. ಹತ್ತಾರು ವರ್ಷಗಳಿಂದ ಒಂದೇ ರೂಪಾಯಿಗೂ ಮೋಸವಾಗದ ರೈತರು ಈ ಹೂವನ್ನು ನಾ ಮುಂದು ತಾ ಮುಂದು ಎಂದು ಬೆಳೆಯುತ್ತಿದ್ದಾರೆ.

English summary
These namadhari flowers in Chikkamagaluru have created a new world, People are attracting towards this beauty
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X