ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು: ಅಕ್ರಮ ಕಾಸಾಯಿಖಾನೆ ಮೇಲೆ ನಗರಸಭೆ ಅಧಿಕಾರಿ ಸಿಬ್ಬಂದಿ ದಾಳಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂ11: ಅಕ್ರಮ ಗೋಮಾಂಸ ಶೆಡ್ ಮೇಲೆ ನಗರಸಭೆ ಅಧ್ಯಕ್ಷರ ನೇತೃತ್ವದ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯಲ್ಲಿ ನಡೆದಿದೆ.

ಶುಕ್ರವಾರ ಬೆಳಿಗ್ಗೆ ಸಂತೆಮೈದಾನದ ಸಮೀಪದಲ್ಲಿರುವ ತಮಿಳು ಕಾಲೋನಿಯಲ್ಲಿ ಅಕ್ರಮ ವಾಗಿ ಕಾಸಾಯಿಖಾನೆ ನಡೆಸುತಿದ್ದು ಬೆಳಕಿಗೆ ಬಂದಿದ್ದು, ಜೆಸಿಬಿಯೊಂದಿಗೆ ತೆರಳಿದ ಅಧಿಕಾರಿ ಮತ್ತು ಸಿಬ್ಬಂದಿ ತಂಡ ಶೆಡ್‌ಗಳನ್ನು ನಾಶಗೊಳಿಸಿದ್ದಾರೆ.

ಮುಳ್ಳಯ್ಯನಗಿರಿಲ್ಲಿ ಜೀಪ್ ಟಾಪ್ ಮೇಲೆ ಕೂತು ಹೋಗುತ್ತಿದ್ದವರ ಮೇಲೆ ಪೊಲೀಸ್ ಕೇಸ್ಮುಳ್ಳಯ್ಯನಗಿರಿಲ್ಲಿ ಜೀಪ್ ಟಾಪ್ ಮೇಲೆ ಕೂತು ಹೋಗುತ್ತಿದ್ದವರ ಮೇಲೆ ಪೊಲೀಸ್ ಕೇಸ್

ಶೆಡ್ ಮಾಲೀಕ ಸೇರಿದಂತೆ ಇತರರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಅವರ ನೇತೃತ್ವದಲ್ಲಿ ವಾರ್ಡ್ 22 ರಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿತ್ತು. ಸ್ವಚ್ಛತೆ ಕಾರ್ಯ ಮುಗಿಸಿ ಮನೆಗೆ ತೆರಳುವ ವೇಳೆ ಶೆಡ್‌ವೊಂದರಲ್ಲಿ 4 ರಿಂದ 5 ಜನ ಇಣುಕಿ ನೋಡುತ್ತಿದ್ದರು. ಇದರಿಂದ ಅನು ಮಾನಗೊಂಡ ಅಧಿಕಾರಿಗಳ ತಂಡ ಪೊಲೀಸರಿಗೆ ಮಾಹಿತಿ ನೀಡಿ ಶೆಡ್ ಸಮೀಪ ತೆರಳಿದಾಗ ಕೌಂಪೌಂಡ್ ಎಗರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಶೆಡ್ ಒಳಗೆ ಪರಿಶೀಲನೆ ನಡೆಸಿದಾಗ 3 ಹಸುಗಳನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

 Chikkamagaluru: Municipal corporation officials raid illegal slaughter house

ಅಕ್ರಮವಾಗಿ ನಿರ್ಮಿಸಿರುವ ಶೆಡ್‌ನಲ್ಲಿ ಕಾಸಾಯಿಖಾನೆ ನಡೆಸುತ್ತಿರುವುದು ಕಂಡು ಬಂದಿದ್ದು, ಪೊಲೀಸ್ ಸಿಬ್ಬಂದಿಗಳ ಸಮ್ಮುಖದಲ್ಲಿ ಶೆಡ್ ತೆರವುಗೊಳಿಸಿ ಸೈಟ್ ಮಾಲೀಕ ಹಾಗೂ ಇತರರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಇದೇ ಜಾಗದಲ್ಲಿ ಪೊಲೀಸರು ದಾಳಿ ನಡೆಸಿ ಗೋಹತ್ಯೆ ಮಾಡಿದ ಆರೋಪದಡಿಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ದಾಳಿ ವೇಳೆ ನಗರಸಭೆ ಪೌರಾಯುಕ್ತ ಬಸವರಾಜ್, ಆರೋಗ್ಯ ನಿರೀಕ್ಷಕರಾದ ಶಶಿಧರ್, ಈಶ್ವರ, ರಂಗಪ್ಪ ಇದ್ದರು.

 Chikkamagaluru: Municipal corporation officials raid illegal slaughter house

2 ಶೆಡ್ ಜೆಸಿಬಿ ಬಳಸಿ ತೆರವು

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ನಗರದಲ್ಲಿ ಅಕ್ರಮ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಇಂದು ದಾಳಿ ನಡೆಸಿ 2 ಶೆಡ್ ಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಗಿದೆ. ಇಂದಿನಿಂದಲೇ ಗೋಹತ್ಯೆ ಯನ್ನು ನಿಲ್ಲಿಸದಿದ್ದರೇ ಮುಂದಿನ ದಿನಗಳಲ್ಲಿ ದಾಳಿ ನಡೆಸಿ ಕಾಸಾಯಿಖಾನೆ ನಡೆಸುತ್ತಿರುವ ಶೆಡ್‌ಗಳನ್ನು ತೆರವುಗೊಳಿಸಲಾಗುವುದು ಎಂದರು.

 Chikkamagaluru: Municipal corporation officials raid illegal slaughter house

ಜಾಗದ ಮಾಲೀಕ, ಇತರರ ಮೇಲೆ ಪ್ರಕರಣ ದಾಖಲು

Recommended Video

ರಿಷಬ್ ಪಂತ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ರಿಕಿ ಪಾಂಟಿಂಗ್!! | Oneindia Kannada

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರಸಭೆ ಆಯುಕ್ತ ಬಸವರಾಜ್, "ವಾರ್ಡ್‌ ನಂಬರ್ 22ರಲ್ಲಿ ಸ್ವಚ್ಛತೆ ಕಾರ್ಯ ನಡೆಸಲು ನಗರಸಭೆ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡ ತಮಿಳು ಕಾಲೋನಿಗೆ ತೆರಳಲಾಗಿತ್ತು. ಸ್ವಚ್ಛತೆ ಕಾರ್ಯ ಮುಗಿಸಿ ತೆರಳುವ ವೇಳೆ ಶೆಡ್‌ವೊಂದರಲ್ಲಿ 4 ರಿಂದ 5 ಜನರು ಅನುಮಾನಸ್ಪದವಾಗಿ ನಡೆದು ಕೊಳ್ಳುತ್ತಿರುವುದು ಕಂಡು ಬಂದಿದ್ದು, ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಶೆಡ್ ಮೇಲೆ ದಾಳಿ ನಡೆಸಲಾಯಿತು. ಅಧಿಕಾರಿಗಳ ತಂಡ ಶೆಡ್ ಬಳಿ ತೆರಳುತ್ತಿದ್ದಂತೆ ಅಲ್ಲಿದ್ದವರು ಓಡಿ ಹೋಗಿದ್ದು, ಶೆಡ್ ಪ್ರವೇಶಿಸಿ ನೋಡಿದಾಗ ಅಕ್ರಮವಾಗಿ ಗೋಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ. ಅಕ್ರಮ ಶೆಡ್ ತೆರವುಗೊಳಿಸಲಾಗಿದೆ. ಜಾಗದ ಮಾಲೀಕ ಸೇರಿದಂತೆ ಇತರರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ," ಎಂದರು.

English summary
Chikkamagaluru Municipal corporation officials raid illegal slaughter house in Tamil colony. demolish the illigal sheds.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X