ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎನ್. ಮಹೇಶ್‌ಗೆ ಎಲ್ಲಿಯೂ ನೆಲೆ ಇಲ್ಲ, ಅದಕ್ಕೆ ಬಿಜೆಪಿಗೆ ಸೇರ್ಪಡೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 24: "ಕೊಳ್ಳೇಗಾಲ ಶಾಸಕ ಎನ್.ಮಹೇಶ್‌ಗೆ ಎಲ್ಲಿಯೂ ನೆಲೆ ಇಲ್ಲದಂತಾಗಿದೆ. ನೆಲೆಯನ್ನು ಹುಡುಕಿಕೊಂಡು ಬಿಜೆಪಿಗೆ ಬಂದಿದ್ದಾರೆ," ಎಂದು ಮೂಡಿಗೆರೆ ಶಾಸಕ ಎಂ. ಪಿ. ಕುಮಾರಸ್ವಾಮಿ ವಂಗ್ಯವಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, "ನಾನು ಸಚಿವರುಗಳಿಗಿಂತ ಹೆಚ್ಚು ಸಂತೋಷವಾಗಿದ್ದು, ಜನರಿಗಾಗಿ ಉತ್ತಮ ಕೆಲಸ ಮಾಡುತ್ತೇನೆ. ಪಕ್ಷಕ್ಕಾಗಿ ದುಡಿದವರನ್ನು ಸಚಿವರನ್ನಾಗಿ ಮಾಡಲಿ. ನಾನು ಏನಾದರೂ ಹೇಳಿಕೆ ಕೊಟ್ಟರೆ ಪಕ್ಷಕ್ಕೆ ಎಚ್ಚರಿಕೆ ಕೊಟ್ಟಂತಾಗುತ್ತದೆ. ಹಾಗಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಹಿಂದೂ ಧರ್ಮದ ಬಗ್ಗೆ ಹೀನಾಮಾನವಾಗಿ ಬೈದಿದ್ದರು," ಎಂದು ಹೇಳಿದರು.

"ಹಿಂದೂ ಧರ್ಮವನ್ನು ಮನು ಧರ್ಮ ಎಂದು ಜಾತಿ- ಧರ್ಮ ಎತ್ತಿಕಟ್ಟಿ ಅವರು ಶಾಸಕರಾಗಿದ್ದಾರೆ. ಒಂದು ಜನಾಂಗ, ಮತ್ತೊಂದು ಜನಾಂಗಗಳ ನಡುವೆ ಬಿರುಕುಂಟು ಮಾಡಿ ಶಾಸಕರಾಗಿದ್ದಾರೆ. ಅಂತಹವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ," ಎಂದು ಅಸಮಾಧಾನ ವ್ಯಕ್ತಪಡಿಸಿದರು.

Mudigere MLA MP Kumaraswamy Outraged Against Kollegala MLA N Mahesh

"ಹಿಂದೂ ಧರ್ಮವನ್ನು, ವೈದಿಕ ಧರ್ಮವನ್ನು ಬೈದಿದ್ದಕ್ಕೆ ಬಹುಮಾನವಾಗಿ ಮಂತ್ರಿ ಮಾಡುತ್ತಾರೆ ಎಂದೇನಿಲ್ಲ, ಹಿಂದೂ ಧರ್ಮವನ್ನು ಮನುಧರ್ಮ ಎಂದವರನ್ನು ಮಂತ್ರಿ ಮಾಡಲು ವಿರೋಧವಿದೆ," ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ
"ಎಲ್ಲಿಯೂ ನೆಲೆ ಇಲ್ಲದ ಕಾಂಗ್ರೆಸ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ. ಎಲುಬಿಲ್ಲದ ನಾಲಗೆ ಏನು ಬೇಕಾದರೂ ಹೇಳಬಹುದು," ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಆರ್‍ಎಸ್‍ಎಸ್, ತಾಲಿಬಾನ್ ಎರಡು ಒಂದೇ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಹೇಳಿಕೆಗೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, "ಕಾಶ್ಮೀರದ ಸಮಸ್ಯೆಯನ್ನು ಜೀವಂತವಾಗಿಟ್ಟಿದ್ದು ಕಾಂಗ್ರೆಸ್, ಅವರ ಮನಸ್ಥಿತಿಯೇ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವಂತದ್ದು. ಹಾಗಾಗಿ ಅವರು ಕಾಶ್ಮೀರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೇ ವರ್ಷಗಳ ಕಾಲ ಸಮಸ್ಯೆಯನ್ನು ಜೀವಂತವಾಗಿರುವಂತೆ ನೋಡಿಕೊಂಡಿದ್ದು," ಎಂದು ಹೇಳಿದರು.

"ಆದರೆ ಈಗ ಪರಿಸ್ಥಿತಿ ಬದಲಾಗಿದೆ ಭಯೋತ್ಪಾದಕರನ್ನು ಹುಟ್ಟಡಗಿಸಿ ಕಾಶ್ಮೀರ ಸಮಸ್ಯೆ ಪರಿಹರಿಸಲಾಗಿದೆ. ದೇಶಭಕ್ತರು ಯಾರು? ದೇಶದ್ರೋಹಿಗಳು ಯಾರು? ಎಂಬುದು ಜನರಿಗೆ ತಿಳಿದಿದೆ. ಸಂದರ್ಭ ಬಂದಾಗ ಜನರೇ ಇದಕ್ಕೆ ಉತ್ತರ ನೀಡುತ್ತಾರೆ," ಎಂದು ತಿಳಿಸಿದರು.

Mudigere MLA MP Kumaraswamy Outraged Against Kollegala MLA N Mahesh

"ಅಫ್ಘಾನಿಸ್ತಾನದಲ್ಲಿ ಒಂದು ರೀತಿಯ ಕ್ಷೋಭೆ ನಿರ್ಮಾಣ ಉಂಟಾಗಿದೆ. ಜಗತ್ತು ನಿರೀಕ್ಷೆ ಮಾಡದ ರೀತಿಯಲ್ಲಿ ಭಯೋತ್ಪಾದಕರು ಹೇಗೆ ಮಾಡುತ್ತಾರೆ ಎಂದು ಜಗತ್ತಿಗೆ ತೋರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ದೇಶವು ಸಹ ಎಚ್ಚೆತ್ತುಕೊಳ್ಳಬೇಕಾಗಿದೆ. ದೇಶದಲ್ಲಿನ ಭಯೋತ್ಪಾದಕ ಮನಸ್ಸುಗಳಿಗೆ ಬೆಂಬಲಿಸುವ ಮನಸ್ಸುಗಳನ್ನು ಗಮನಿಸಬೇಕು. ಅಂತಹವರಿಗೆ ಶಿಕ್ಷೆ ನೀಡಬೇಕು ಆಗ ಮಾತ್ರ ಭಯೋತ್ಪಾದಕತೆಯನ್ನು ಹೋಗಲಾಡಿಸಲು ಸಾಧ್ಯ," ಎಂದರು.

"ಅಫ್ಘಾನಿಸ್ತಾನದಲ್ಲಿರುವ ಎಲ್ಲಾ ಭಾರತೀಯರನ್ನು ತವರಿಗೆ ಕರೆಸಿಕೊಳ್ಳಲು ಕೇಂದ್ರ ಸರ್ಕಾರ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದೆ. ಅವರ ರಕ್ಷಣೆಗೆ ಭಾರತ ಸರ್ಕಾರ ಬದ್ಧವಾಗಿದೆ ಹಾಗೂ ಅಫ್ಘಾನಿಸ್ತಾನದ ನಾಗರೀಕರ ಜೊತೆಗೆ ಭಾರತ ಸರ್ಕಾರ ಇರುತ್ತದೆ ಎಂದು ತಿಳಿಸಿದರು.
ಅಡಿಕೆ ನಿಷೇಧದ ಕುರಿತು ರೈತರ ಪರವಾಗಿ ಉತ್ತಮ ವಕೀಲರನ್ನು ನೇಮಿಸಿ ಭಾರತ ಸರ್ಕಾರ ಕೆಲಸ ಮಾಡುತ್ತಿದೆ," ಎಂದು ಇದೇ ವೇಳೆ ಹೇಳಿದರು.

ಜಯಂತಿ ಆಚರಿಸಲು ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ
"ಬ್ರಹ್ಮಶ್ರೀ ನಾರಾಯಣಗುರು ಜನ್ಮ ಜಯಂತಿ ಆಚರಣೆ ಮಾಡಲು ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆಯಾಗಿದೆ," ಎಂದು ಜಿಲ್ಲಾ ಬ್ರಹ್ಮಶ್ರೀ ನಾರಾಯಣಗುರು ಸಂಘ ಒಕ್ಕೂಟದ ಅಧ್ಯಕ್ಷ ಎಚ್.ಎಂ. ಸತೀಶ್ ಆರೋಪಿಸಿದರು.

"ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರದ ವತಿಯಿಂದ ನಾರಾಯಣಗುರು ಜಯಂತಿ ಆಚರಣೆಗೆ ಅವಕಾಶ ಕಲ್ಪಿಸಿದ್ದರು. ಆಚರಣೆಗಾಗಿ 25 ಸಾವಿರ ಸಹಾಯಧನ ನೀಡಲು ಕ್ರಮ ಕೈಗೊಂಡಿದ್ದರು," ಎಂದು ಹೇಳಿದರು.

"ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಕೇವಲ ಮತಕ್ಕಾಗಿ ಸಮುದಾಯದ ಯುವಕರನ್ನು ಬಳಸಿಕೊಳ್ಳುತ್ತಿದೆ. ಅಧಿಕಾರಕ್ಕೆ ಬಂದ ನಂತರ ಸಮುದಾಯವನ್ನು ಕಡೆಗಣಿಸುತ್ತಿದೆ. ನಾರಾಯಣಗುರು ಹೆಸರಿನಲ್ಲಿ ಸಮುದಾಯದ ಅಭಿವೃದ್ಧಿಗೆ ನಿಗಮ ಸ್ಥಾಪಿಸಬೇಕು ಎಂದು ಸಮುದಾಯದ ಎಲ್ಲರ ಪರವಾಗಿ ಒತ್ತಾಯಿಸುತ್ತಿದ್ದೇನೆ," ಎಂದರು.

Recommended Video

ಸಂಸದ ಪ್ರತಾಪ್ ಸಿಂಹ ವಿಶೇಷ ಸಂದರ್ಶನ | Oneindia Kannada

"ಕೊರೊನಾ ಸಂದರ್ಭದಲ್ಲಿ ಎಲ್ಲಾ ಕಾನೂನು, ನಿಯಮ ಮೀರಿ ಜನ ಸೇರಿಸಿ ಸಾರ್ವಜನಿಕ ಸ್ಥಳದಲ್ಲಿ ಸಭೆ ನಡೆಸಿ, ಗುಂಡು ಹಾರಿಸಿ ಸಂಭ್ರಮಾಚರಣೆ ಮಾಡಲು ಬಿಜೆಪಿ ಮುಖಂಡರಿಗೆ ಇಲ್ಲದ ನಿರ್ಬಂಧ, ಮಹನೀಯರ ಜಯಂತಿ ಆಚರಣೆಗೆ ಮಾತ್ರ ಇದೆ. ಗುಂಡು ಹಾರಿಸಿದ ಪ್ರಕರಣವನ್ನು ಗೃಹ ಸಚಿವರು ಸಮರ್ಥಿಸಿಕೊಂಡಿರುವುದು ಸರಿಯಲ್ಲ," ಎಂದು ದೂರಿದರು.

"ಹಿಂದೂ ಪವಿತ್ರ ಹಬ್ಬ ಗೌರಿ ಗಣೇಶ ಹಬ್ಬದ ಆಚರಣೆಗೆ ಸರ್ಕಾರ ಅವಕಾಶ ನೀಡಬೇಕು. ಎಲ್ಲಾ ಮಹನೀಯರ ಜಯಂತಿ ಆಚರಣೆಗೆ ಮುಖ್ಯಮಂತ್ರಿ ಬೊಮ್ಮಾಯಿ ಒತ್ತು ನೀಡುವ ಮೂಲಕ ಹಿಂದುಳಿದ ವರ್ಗದ ಏಳಿಗೆಗೆ ಮುಂದಾಗಬೇಕು," ಎಂದರು.

English summary
Mudigere MLA MP Kumaraswamy has upset about N Mahesh joined BJP party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X