ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿ 160ಕ್ಕೂ ಹೆಚ್ಚು ಜನ ಪೋಸ್ಕೋ ವಿಚಾರಣಾಧೀನ ಖೈದಿಗಳು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜೂ29: ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಕಾರಾಗೃಹದಲ್ಲಿರೋ 269 ಕೈದಿಗಳಲ್ಲಿ 160ಕ್ಕೂ ಹೆಚ್ಚು ಕೈದಿಗಳು ಪೋಸ್ಕೋ ಪ್ರಕರಣದ ವಿಚಾರಣಾಧೀನ ಕೈದಿಗಳಾಗಿದ್ದಾರೆ. ನಗರದ ರಾಮನಹಳ್ಳಿಯಲ್ಲಿ 15 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ ಜಿಲ್ಲಾ ಕಾರಾಗೃಹವಿದೆ. ಇಲ್ಲಿ ಪ್ರಸ್ತುತ ಕೊಲೆ, ದರೋಡೆ ಸೇರಿದಂತೆ ಎಲ್ಲಾ ರೀತಿಯ ಪ್ರಕರಣಗಳಲ್ಲೂ ಸೇರಿ ಒಟ್ಟು 269 ಕೈದಿಗಳು ಇದ್ದಾರೆ. ಅವರಲ್ಲಿ 160ಕ್ಕೂ ಹೆಚ್ಚು ಜನ ಕೈದಿಗಳು ಪೋಸ್ಕೊ ಪ್ರಕರಣದಲ್ಲಿ ಬಂಧಿತರಾಗಿರೋ ವಿಚಾರಣಾಧೀನ ಕೈದಿಗಳಾಗಿರೋದು ಆತಂಕದ ಸಂಗತಿಯಾಗಿದೆ.

ಆಧುನಿಕ ತಂತ್ರಜ್ಞಾನ ಊಹೆಗೂ ನಿಲುಕದಂತೆ ಬೆಳೆಯುತ್ತಿದ್ದ ಆಧುನಿಕ ನರಮನುಷ್ಯ ಚಂದ್ರ ಮೇಲೂ ಕಾಲಿಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾನೆ. ಆದರೆ, ಜನ ಮಾತ್ರ ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಜೈಲು ಪಾಲಾಗುತ್ತಿರುವುದು ನಾಗರಿಕ ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡಿಸಿದ್ದು ಮನುಕುಲವೇ ತಲೆತಗ್ಗಿಸುವಂತಾಗಿದೆ.

ಚಿಕ್ಕಮಗಳೂರು; ಕರ್ನಾಟಕದ ಮೊದಲ ಸರ್ಕಾರಿ ಗೋ ಶಾಲೆ ಉದ್ಘಾಟನೆಚಿಕ್ಕಮಗಳೂರು; ಕರ್ನಾಟಕದ ಮೊದಲ ಸರ್ಕಾರಿ ಗೋ ಶಾಲೆ ಉದ್ಘಾಟನೆ

ಹೆಚ್ಚು ಮಲೆನಾಡಿನ ಆರೋಪಿತರು

ಹೆಚ್ಚು ಮಲೆನಾಡಿನ ಆರೋಪಿತರು

ಈ 160ಕ್ಕೂ ಹೆಚ್ಚು ಪೋಸ್ಕೋ ವಿಚಾರಣಾಧೀನ ಕೈದಿಗಳಲ್ಲಿ ಜಿಲ್ಲೆಯ ಮಲೆನಾಡು ಭಾಗದ ಆರೋಪಿತರೇ ಹೆಚ್ಚಿದ್ದಾರೆ. ಶೃಂಗೇರಿಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಸುಮಾರು ಮೂರು ತಿಂಗಳು ಅತ್ಯಾಚಾರಗೈದ ಆರೋಪದಡಿ ಸುಮಾರು 50 ಜನ ವಿಚಾರಣಾಧೀನ ಕೈದಿಗಳಾಗಿದ್ದಾರೆ. ಇನ್ನುಳಿದಂತೆ ಬೇರೆ-ಬೇರೆ ಭಾಗದ ಪೋಕ್ಸೋ ಕೇಸಲ್ಲಿ ಬಂಧಿತರಾಗಿ ವಿಚಾರಣೆ ಎದುರಿಸುತ್ತಿರೋ 100ಕ್ಕೂ ಅಧಿಕ ಆರೋಪಿತರಿದ್ದಾರೆ.

ಕೈದಿಗಳಿಗೆ ಉದ್ಯೋಗದ ತರಬೇತಿ

ಕೈದಿಗಳಿಗೆ ಉದ್ಯೋಗದ ತರಬೇತಿ

ಅಂದು ಯೋಚನೆ ಮಾಡದೆ ಮಣ್ಣು ತಿನ್ನುವ ಕೆಲಸ ಮಾಡಿದವರು ಇಂದು ಜೈಲಲ್ಲಿ ಪಶ್ಚಾತ್ತಾಪ ಪಡುತ್ತಿದ್ದಾರೆ. ಅರಣ್ಯ ಹಾಗೂ ಅರಣ್ಯದಂತಹಾ ಕಾಫಿತೋಟಗಳೇ ಹೆಚ್ಚಾಗಿರೋ ಮಲೆನಾಡು ಭಾಗದಲ್ಲೇ ಪೋಕ್ಸೋ ಆರೋಪಿತರು ಹೆಚ್ಚಾಗಿದ್ದಾರೆ. ಇವರಲ್ಲಿ ಬೇರೆ-ಬೇರೆ ಊರುಗಳಿಂದ ದುಡಿಮೆ ಅರಸಿ ಬಂದ ಆರೋಪಿಗಳೂ ಇದ್ದಾರೆ.

ಜೈಲಿನಲ್ಲಿ ಪಶ್ಚಾತ್ತಾಪ ಪಡುತ್ತಿರುವವರಿಗೆ ಜೈಲು ಕೂಡ ಕೈದಿಗಳ ಮನಪರಿವರ್ತನೆಗೆ ಮುಂದಾಗಿದೆ. ಕೈದಿಗಳಿಗೆ ಉದ್ಯೋಗದ ತರಬೇತಿ ನೀಡುತ್ತಿದೆ. ಟೈಲರಿಂಗ್, ಬಾರ್‍ಬೆಂಡಿಂಗ್, ಪ್ಲಾಸ್ಟಿಕ್ ಫ್ಲವರ್ ಮೇಕಿಂಗ್, ಪೇಪರ್ ಕಟ್ಟಿಂಗ್, ಕಂಪ್ಯೂಟರ್ ಡಾಟಾ ಆಪರೇಟರ್ ಹೀಗೆ ಹತ್ತು ಹಲವು ಟ್ರೈನಿಂಗ್ ನೀಡುವುದರ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಪಾತ್ರ ಏನು, ಹೇಗಿರಬೇಕೆಂದು ಮೆಡಿಟೇಷನ್ ಮೂಲಕ ಮನಪರಿವರ್ತನೆ ಮಾಡುತ್ತಿದ್ದಾರೆ.

ಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಮೋಜು ಮಸ್ತಿ, ಸಾರ್ವಜನಿಕರಿಂದ ಆಕ್ರೋಶಚಾರ್ಮಾಡಿ ಘಾಟಿಯಲ್ಲಿ ಪ್ರವಾಸಿಗರ ಮೋಜು ಮಸ್ತಿ, ಸಾರ್ವಜನಿಕರಿಂದ ಆಕ್ರೋಶ

ಧ್ಯಾನದ ಮೂಲಕ ತಪ್ಪಿನ ಅರಿವು

ಧ್ಯಾನದ ಮೂಲಕ ತಪ್ಪಿನ ಅರಿವು

ಅಪರಾಧವನ್ನ ದ್ವೇಷಿಸು. ಅಪರಾಧಿಯನ್ನಲ್ಲ ಎಂಬ ಮಹಾತ್ಮ ಗಾಂಧೀಜಿಯ ಮಾತಿನಂತೆ ತಪ್ಪಿತಸ್ಥರಿಗೂ ಮನಪರಿವರ್ತನೆಯಾಗುತ್ತಿದೆ. ಧ್ಯಾನದ ಮೂಲಕ ಅದರ ಅರಿವಾಗುವ ಕೆಲಸವನ್ನೂ ಜೈಲು ಮಾಡುತ್ತಿದೆ. ಬೇರೆ ಯಾವುದೇ ಅಪರಾಧವನ್ನಾದರೂ ಕ್ಷಮಿಸಬಹುದು. ಈ ಅಪರಾಧವನಲ್ಲ. ಇದು ಕ್ಷಮೆಗೆ ಅನರ್ಹವಾದ ಅಪರಾಧ. ಹಾಗಾಂತ, ಅವರನ್ನ ಕ್ಷಮಿಸೇ ಇರಲಾಗದು. ಕೆಲ ಲೈಂಗಿಕ ದೌರ್ಜನ್ಯ ಪ್ರಕರಣದ ಹಿಂದೆ-ಮುಂದೆ ಹತ್ತಾರು ಕಾರಣಗಳಿರುತ್ತೆ. ಪಶ್ಚಾತ್ತಾಪಕ್ಕಿಂತ ಮತ್ತೊಂದು ಶಿಕ್ಷೆ ಇಲ್ಲ ಅಂತಾರೆ. ಆದರೆ ಪಶ್ಚಾತ್ತಾಪ ನಡೆದ ತಪ್ಪನ್ನ ಸರಿಪಡಿಸಲ್ಲ. ಆ ತಪ್ಪು ಮತ್ತೆ ಆಗಬಾರದು. ಆಗದಂತೆ ನೋಡಿಕೊಳ್ಳಬೇಕು. ಅದಕ್ಕೆ ಎಲ್ಲರ ಮನಸ್ಥಿತಿಯೂ ಬದಲಾಗಬೇಕಾದ ಅನಿವಾರ್ಯತೆ ಬಹಳಷ್ಟಿದೆ.

Recommended Video

ಹೊಸ ದಾಖಲೆ ಬರೆದ ದೀಪಕ್ ಹೂಡಾ | *Cricket | OneIndia Kannada
ಸಮಾಜ ನೋಡುವ ರೀತಿ ಬದಲಾಗಬೇಕು

ಸಮಾಜ ನೋಡುವ ರೀತಿ ಬದಲಾಗಬೇಕು

ಮಹಾತ್ಮ ಗಾಂಧಿಜೀಯೇ ಹೇಳಿದ್ದಾರೆ. ಅಪರಾಧವನ್ನ ದ್ವೇಷಿಸು. ಅಪರಾಧಿಯನ್ನಲ್ಲ ಎಂದು. ಆದರೆ, ಬೇರ್ಯಾವುದೇ ಅಪರಾಧವನ್ನಾದರೂ ಕ್ಷಮಿಸಬಹುದು. ಈ ಅಪರಾಧವನಲ್ಲ. ಇದು ಕ್ಷಮೆಗೆ ಅನರ್ಹವಾದ ಅಪರಾಧ. ಹಾಗಾಂತ, ಅವರನ್ನ ಕ್ಷಮಿಸಲೇ ಬಾರದು ಅನ್ನೋದು ಸರಿಯಲ್ಲ. ಕೆಲ ಲೈಂಗಿಕ ದೌರ್ಜನ್ಯ ಪ್ರಕರಣದ ಹಿಂದೆ-ಮುಂದೆ ಹತ್ತಾರು ಕಾರಣಗಳಿರುತ್ತೆ. ಪಶ್ಚಾತ್ತಾಪಕ್ಕಿಂತ ಮತ್ತೊಂದು ಶಿಕ್ಷೆ ಇಲ್ಲ ಅಂತಾರೆ. ಆದ್ರೆ, ಪಶ್ಚಾತ್ತಾಪ ನಡೆದ ತಪ್ಪನ್ನ ಸರಿಪಡಿಸಲ್ಲ. ಆದ್ದರಿಂದ ಆ ಮನಸ್ಥಿತಿಯೂ ಬದಲಾಗಬೇಕು. ಸಮಾಜ ಅವರನ್ನ ನೋಡುವ ರೀತಿಯೂ ಬದಲಾಗಬೇಕು. ಅದು ಆದಷ್ಟು ಬೇಗ ಆಗಲಿ ಅನ್ನೋದು ನಮ್ಮ ಆಶಯ.

English summary
There are more than 160 POCSO Trial Inmates in Chikmagalur District Prison. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X