ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು; ಮೊದಲ ಮಂಗನ ಕಾಯಿಲೆ ಪ್ರಕರಣ ಪತ್ತೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ 24: ಎನ್. ಆರ್. ಪುರ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮನೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ. ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ವೀರಪ್ರಸಾದ್ ಸಹ ಇದನ್ನು ಖಚಿತ ಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಸ್ತುತ ವರ್ಷದ ಮಂಗನ ಕಾಯಿಲೆಯ ಮೊದಲ ಪ್ರಕರಣವಿದಾಗಿದೆ. ಪಾಸಿಟಿವ್ ಬಂದ ವ್ಯಕ್ತಿಯೂ ತೀರ್ಥಹಳ್ಳಿಯ ಆರಗದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದೆ.

 ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಭೀತಿ; ಜಿಲ್ಲಾಧಿಕಾರಿಗಳಿಂದ ಹಲವು ಸಲಹೆ ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ಭೀತಿ; ಜಿಲ್ಲಾಧಿಕಾರಿಗಳಿಂದ ಹಲವು ಸಲಹೆ

ಜ್ವರ ಬಂದ ಕಾರಣ ತೀರ್ಥಹಳ್ಳಿಯ ಆಸ್ಪತ್ರೆಯೊಂದರಿಂದ ರಕ್ತ ಮಾದರಿಯನ್ನು ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಕೆಎಫ್‍ಡಿ ಪಾಸಿಟಿವ್ ಬಂದಿರುವುದು ಧೃಢವಾಗಿದೆ.‌ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಲೆನಾಡಿಗರಲ್ಲಿ ಮತ್ತೆ ಭೀತಿ ಹುಟ್ಟಿಸಿದ ಮಂಗನ ಕಾಯಿಲೆ; ವೈರಸ್ ಪತ್ತೆಮಲೆನಾಡಿಗರಲ್ಲಿ ಮತ್ತೆ ಭೀತಿ ಹುಟ್ಟಿಸಿದ ಮಂಗನ ಕಾಯಿಲೆ; ವೈರಸ್ ಪತ್ತೆ

Chikkamagaluru Monkey Fever Case Found In Narasimharajapura

ಮುಂಜಾಗ್ರತ ಕ್ರಮವಾಗಿ ಹೆಮ್ಮೂರು, ಕೊನೋಡಿ, ಬೆಮ್ಮನೆ, ಕಾರಹಡಲು, ಹೊನಗಾರು, ಮಕ್ಕಿಕೊಪ್ಪ ಸೇರಿ 6 ಹಳ್ಳಿಗಳ ಜನರಿಗೆ ಫೆಬ್ರವರಿ 26ರಂದು ಕೆಎಫ್‍ಡಿ ಲಸಿಕೆ ಹಾಕಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

 ಬೆಳೆದ ಸೀಬೆಯನ್ನೆಲ್ಲಾ ಮಂಗ, ನವಿಲುಗಳಿಗೆ ಕೊಟ್ಟುಬಿಟ್ಟ ಕೋಲಾರ ರೈತ ಬೆಳೆದ ಸೀಬೆಯನ್ನೆಲ್ಲಾ ಮಂಗ, ನವಿಲುಗಳಿಗೆ ಕೊಟ್ಟುಬಿಟ್ಟ ಕೋಲಾರ ರೈತ

Recommended Video

ಗುಜರಾತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು-ಕೇಂದ್ರ ಗೃಹಸಚಿವ ಅಮಿತ್ ಶಾ ಸಂತಸ | Oneindia Kannada

ಫೆಬ್ರವರಿ 26ರಂದಯ ಬೆಳಗ್ಗೆ 10 ರಿಂದ 2 ಗಂಟೆಯವರೆಗೆ ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದ್ದು ಸ್ಥಳೀಯರು ಆಗಮಿಸಿ ಲಸಿಕೆ ಪಡೆಯಬೇಕು ಎಂದು‌ ಆರೋಗ್ಯ ಇಲಾಖೆ‌ ಮನವಿ‌ ಮಾಡಿದೆ.

English summary
This year first KFD also referred to as Monkey Fever case found in Narasimharajapura taluk of Chikkamagaluru district. Health department planned for vaccination drive on February 26 at 6 village.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X