ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಚಿವ ಅಶೋಕ್ ಪಿಎ ಲಂಚ ಕೇಳಿದ ಆರೋಪ; ಪೊಲೀಸರಿಗೆ ದೂರು ನೀಡುತ್ತೇನೆಂದ ಚೆಲುವರಾಜ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 25: ಕಂದಾಯ ಸಚಿವ ಆರ್.ಅಶೋಕ್ ಪಿಎ ಲಂಚ ಕೇಳಿದ ಆರೋಪದ ವಿಚಾರವಾಗಿ, ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಅವರು ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಚೆಲುವರಾಜ್, ""ಜ.20ನೇ ತಾರೀಖು ವಾಟ್ಸಾಪ್ ಮೂಲಕ ಸಚಿವರ ವೇಳಾಪಟ್ಟಿ ಬಂದಿತ್ತು. 24ನೇ ತಾರೀಖು ಸಚಿವರು ಬರುತ್ತಾರೆ, ನೀವು ಸಿಗಿ ಎಂದು ಕರೆ ಮಾಡಿದ್ದರು.''

ಶಿವಮೊಗ್ಗದಲ್ಲಿ ಭಾರೀ ಸ್ಫೋಟ; ಸಿಬಿಐ ತನಿಖೆ ಇಲ್ಲಶಿವಮೊಗ್ಗದಲ್ಲಿ ಭಾರೀ ಸ್ಫೋಟ; ಸಿಬಿಐ ತನಿಖೆ ಇಲ್ಲ

""24ನೇ ತಾರೀಖು ಬೆಳಿಗ್ಗೆ 10.30ಕ್ಕೆ ಫೋನ್ ಮಾಡಿ ಸಂಜೆ ಸಿಗಲು ಹೇಳಿದರು. ನಾನು ಸಂಜೆ 6 ಗಂಟೆಗೆ ಶೃಂಗೇರಿಯ ಆದಿಚುಂಚನಗಿರಿ ಸಭಾ ಭವನಕ್ಕೆ ಹೋದೆ. ಅವರು 7.30ಕ್ಕೆ ಬಂದರು. ಅಲ್ಲೇ ಇದ್ದ ರೂಮಿಗೆ ಕರೆದುಕೊಂಡು ಹೋದರು.''

 Chikkamagaluru: Minister R Ashok PA Accused Of Bribery; Cheluvaraj Decided To Complaint

""ಅವರು ಯಾರೆಂದು ಗೊತ್ತಿರಲಿಲ್ಲ ನಾನು ಮೊದಲೇ ಪೊಲೀಸರಿಗೆ ಅವರನ್ನು ತೋರಿಸಲು ಕೇಳಿದ್ದೆ. ಪೊಲೀಸರು ಇವರೇ ಕಂದಾಯ ಸಚಿವರ ಪಿಎ ಎಂದು ಹೇಳಿದ್ದರು.''

""ಪಕ್ಕದ ರೂಮಿಗೆ ಹೋದ ಕೂಡಲೇ ಏನಿದೆ ಕೊಡಿ ಎಂದರು. ನಾನು ಕೊಡೋದಿಲ್ಲ, ತಗಳೋದು ಇಲ್ಲ ಎಂದು ನಾನು ನೇರವಾಗಿ ಹೇಳಿದೆ. ಆಮೇಲೆ ಆಯ್ತು ಹೋಗಿ ಎಂದರು. ಕೈಯಲ್ಲಿದ್ದ ಪೇಪರ್ ನೋಡಿ ಏನದು ಎಂದು ಕೇಳಿದರು.''

""ಕರ್ನಾಟಕ ಸೆಕ್ರಟರಿಗೆ ಕಂಪ್ಲೇಟ್ ಮಾಡಿದ್ದೇನೆ ಈ ಲೆಟರ್ ಸಚಿವರಿಗೆ ಕೊಡಿ ಎಂದೆ. ಅದನ್ನು ನೀವೇ ಕೊಟ್ಟುಕೊಳ್ಳಿ ಎಂದು ಹೇಳಿ ಹೋದರು. ನಿನ್ನೆ ರಾತ್ರಿ ವಾಟ್ಸಾಪ್ ಕಾಲ್ ಬಂದಿತ್ತು, ನಾನು ನೋಡಿರಲಿಲ್ಲ. ಸೋಮವಾರ ಬೆಳಗ್ಗೆ ಮತ್ತೆ ಕಾಲ್ ಮಾಡಿದ್ದೆ. ಅವರು ಫೈಲ್ ಕೊಡಲಿಲ್ಲ ಎಂದರು. ಯಾವ ಫೈಲ್ ಇಲ್ಲ. ನೀವು ಲಂಚ ಕೇಳಿದರೂ ನಾನು ಕೊಡಲಿಲ್ಲ ಎಂದೆ.''

Recommended Video

ಗಣರಾಜ್ಯೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಬ್ರೇಕ್- ರಾಜಧಾನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ | Oneinda Kannada

ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇನೆ, ಡ್ರಾಫ್ಟ್ ರೆಡಿ ಮಾಡುತ್ತಿದ್ದೇನೆ. ಕಂದಾಯ ಸಚಿವರ ಹೆಸರಿನಲ್ಲಿ ಹಣ ಕೀಳುವ ಕೆಲಸವಾಗುತ್ತಿದೆ ಎಂದು ಶೃಂಗೇರಿ ಉಪ ನೋಂದಣಾಧಿಕಾರಿ ಚೆಲುವರಾಜ್ ತಿಳಿಸಿದ್ದಾರೆ.

English summary
Sringeri sub-registrar Cheluvaraj has made an explosive statement on the allegations that Revenue Minister R.Ashok PA has asked for bribe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X