ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ; ಸಚಿವ ಸಿ.ಟಿ.ರವಿ ಏನಂದರು?

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 29: ಸ್ಯಾಂಡಲ್ ವುಡ್ ನ ಕೆಲವು ನಟ ನಟಿಯರು, ಸಂಗೀತ ನಿರ್ದೇಶಕರಿಗೆ ಡ್ರಗ್ ಮಾಫಿಯಾದ ಜೊತೆ ನಂಟಿದೆ ಎನ್ನುವ ವಿಚಾರ ಬಹಿರಂಗವಾಗಿದ್ದು, ಈ ವಿಷಯವಾಗಿ ಸಚಿವ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.

ಡ್ರಗ್ ಮಾಫಿಯಾ ಎನ್ನುವುದು ವ್ಯವಸ್ಥಿತವಾದ ರಾಜ್ಯ, ಅಂತರಾಷ್ಟ್ರೀಯ ಜಾಲ ಎಂದಿರುವ ಸಚಿವ ಸಿ.ಟಿ. ರವಿ, "ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ದಂಧೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ಬಗ್ಗೆ ತಮ್ಮ ಬಳಿ ಸಂಪೂರ್ಣ ಮಾಹಿತಿ ಇದೆ, ಅದನ್ನು ತಿಳಿಸಲು ನಾನು ಸಿದ್ಧ, ಆದರೆ ತಮಗೆ ರಕ್ಷಣೆ ಬೇಕು" ಎಂದು ಕೇಳಿರುವ ಇಂದ್ರಜಿತ್ ಲಂಕೇಶ್ ಅವರಿಗೆ ರಕ್ಷಣೆ ನೀಡಲಾಗುವುದು ಎಂದಿದ್ದಾರೆ.

ಮಕ್ಕಳ ಆಟಿಕೆಯಲ್ಲಿಟ್ಟು ಬೆಂಗಳೂರಲ್ಲಿ ಡ್ರಗ್ಸ್ ಮಾರಾಟ!ಮಕ್ಕಳ ಆಟಿಕೆಯಲ್ಲಿಟ್ಟು ಬೆಂಗಳೂರಲ್ಲಿ ಡ್ರಗ್ಸ್ ಮಾರಾಟ!

"ಇಂದ್ರಜಿತ್ ಲಂಕೇಶ್ ಅವರು ತನಿಖೆಗೆ ಸಹಕಾರ ನೀಡಬೇಕು. ಯಾರ ಬಗ್ಗೆಯೂ ಅವರಿಗೆ ಭಯ ಬೇಡ. ಅವರಿಗೆ ಪೊಲೀಸ್ ಇಲಾಖೆ ರಕ್ಷಣೆ ವ್ಯವಸ್ಥೆ ಮಾಡುತ್ತದೆ. ಈ ಜಾಲವನ್ನು ಬಗ್ಗು ಬಡಿಯಲು, ಮತ್ತಷ್ಟು ಜನ ಬಲಿಯಾಗದಿರಲು ಅವರ ಸಹಕಾರ ಬೇಕಿದೆ. ಬಹಳ ದಿನಗಳಿಂದ ದಂಧೆಯ ಸೈಡ್ ಆಕ್ಟರ್ ಸಿಗ್ತಿದ್ರು. ಈಗ ಮೇನ್ ಆಕ್ಟ್ರು ಸಿಗ್ತಾರಾ ನೋಡ್ಬೇಕು. ಇದರ ತನಿಖೆಯನ್ನು ಗಂಭೀರವಾಗಿ ನಡೆಸಲಾಗುತ್ತಿದೆ. ಈ ಜಾಲದಲ್ಲಿ ಯಾರಿದ್ದಾರೆ, ವ್ಯಾಪಾರ ಯಾರದ್ದು ಎಂಬುದು ತನಿಖೆಯ ಬಳಿಕ ತಿಳಿಯಲಿದೆ" ಎಂದು ಹೇಳಿದ್ದಾರೆ.

Minister CT Ravi Reaction On Drug Mafia In Sandalwood

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆಯಲ್ಲಿ ಡ್ರಗ್ ಮಾಫಿಯಾದ ಲಿಂಕ್ ಇರುವ ಬಗ್ಗೆ ಸುಳಿವು ಸಿಗುತ್ತಿದ್ದಂತೆ, ಇತ್ತ ಸ್ಯಾಂಡಲ್ ವುಡ್ ಗೂ ಡ್ರಗ್ ಮಾಫಿಯಾ ಸಂಪರ್ಕ ಇರುವುದು ಬಹಿರಂಗವಾಗಿದೆ. ಈ ಸಂಬಂಧ ಇತ್ತೀಚಿಗೆ ಬೆಂಗಳೂರಿನಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ ಬಳಿಕ ಸ್ಯಾಂಡಲ್ ವುಡ್ ನ ಕೆಲವು ನಟಿ ನಟಿಯರು ಡ್ರಗ್ ವ್ಯಸನಿಗಳಾಗಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ. ಈ ವಿಷಯವಾಗಿ ಇಂದ್ರಜಿತ್ ಅವರು ಮಾತನಾಡಿದ್ದರು.

English summary
Drug Mafia is an organized state, international network, reacted Minister CT Ravi to the issue of drug mafia in sandalwood,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X