• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನಾಟಕದ ಈ ಮಾಜಿ ಮುಖ್ಯಮಂತ್ರಿಯ ಸ್ನೇಹಿತರೆಲ್ಲ ಕೋಟಿ ಕುಳಗಳೇ!

|

ಚಿಕ್ಕಮಗಳೂರು, ನವೆಂಬರ್.21: ರಾಜಕಾರಣದಲ್ಲಿ ಬಡವರು ಅಂತಾ ಯಾರೂ ಇಲ್ಲ. ರಾಜಕೀಯ ಮಾಡುವವರು ಎಲ್ಲರೂ ಕೋಟಿ ಕೋಟಿ ಕುಳಗಳೇ. ಇಲ್ಲಿ ಒಮ್ಮೆ ಅಧಿಕಾರ ದಕ್ಕಿದರೆ ಎಂಥವರೂ ಕೈಯಲ್ಲಿ ಲಕ್ಷ್ಮಿದೇವಿ ತಾಂಡವವಾಗುತ್ತಾಳೆ.

ಇಂಥ ಮಾತುಗಳನ್ನು ಇಷ್ಟುದಿನ ಜನರಷ್ಟೇ ಆಡಿಕೊಳ್ಳುತ್ತಿದ್ದರು. ಆದರೆ, ಇತ್ತೀಚಿಗೆ ರಾಜಕೀಯ ನಾಯಕರೇ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾನು ಅವರಿಗೆ ಕೋಟಿ ಕೋಟಿ ಸಾಲ ನೀಡಿದ್ದೆ ಅನ್ನುವವರು ಒಬ್ಬರು. ಪಡೆದ ಸಾಲವನ್ನು ವಾಪಸ್ ಕೊಟ್ಟಿದ್ದೀನಿ ಎನ್ನುವವರು ಮತ್ತೊಬ್ಬರು.

ಇದರ ಮಧ್ಯೆ ಇಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ ಹೊಸ ಬಾಂಬ್ ಸಿಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದು, ಮಾಜಿ ಮುಖ್ಯಮಂತ್ರಿಗಳು ಭಾಗ್ಯಶಾಲಿಗಳು ಎಂದು ವ್ಯಂಗ್ಯವಾಗಿ ಹೊಗಳಿದ್ದಾರೆ.

ಸಿದ್ದು ಸ್ನೇಹಿತರೆಲ್ಲ ಕೋಟಿ ಕುಳಗಳೇ!

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾವೊಬ್ಬ ಸಮಾಜವಾದಿ ಅನ್ನುತ್ತಾರೆ. ಆದರೆ, ಅವರು ಕಣ್ಣಿಗೆ ಹೋಕೋದೆಲ್ಲ 3, 4, 5 ಲಕ್ಷ ರೂಪಾಯಿಯ ಗ್ಲಾಸ್. ಕೈಗೆ ಕಟ್ಟುವುದು ಬರೋಬ್ಬರಿ 50, 60 ಲಕ್ಷ ರೂಪಾಯಿ ವಾಚ್. ಇನ್ನು, ಅವರು ಓಡಾಡುವ ಕಾರಿನ ಬೆಲೆ ಒಂದೂವರೆಯಿಂದ ಎರಡು ಕೋಟಿ ರೂಪಾಯಿ. ಇಷ್ಟೆಲ್ಲಾ ಆದರೆ, ಇಂದಿಗೂ ಅವರು ತಮ್ಮನ್ನು ಒಬ್ಬ ಸಮಾಜವಾದಿ ಎಂದು ಹೇಳಿಕೊಳ್ಳುತ್ತಾರೆ ಎಂದು ಸಚಿವ ಸಿ.ಟಿ.ರವಿ ಟೀಕಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯನವರು ನಿಜಕ್ಕೂ ಪುಣ್ಯವಂತರು. ಅವರಿಗೆ ಲಕ್ಷ ಲಕ್ಷ ರೂಪಾಯಿ ಬೆಲೆ ಬಾಳುವ ಗ್ಲಾಸ್, ವಾಚ್ ನ್ನು ನೀಡುವ ಸ್ನೇಹಿತರಿದ್ದಾರೆ. ಕೋಟಿಗಟ್ಟಲೇ ಹಣ ನೀಡುವ ಸ್ನೇಹಿತರನ್ನೂ ಅವರು ಹೊಂದಿದ್ದಾರೆ. ಕೋಟಿ ಕೋಟಿ ಬಾಳುವ ಕಾರ್ ನ್ನು ಕೂಡಾ ಸ್ನೇಹಿತರು ಅವರಿಗೆ ಗಿಫ್ಟ್ ಆಗಿ ನೀಡುತ್ತಾರೆ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

English summary
Karnataka By-Poll: Siddaramayya Have Rich Friends. He Get Expensive Gifts From Then. Minister C.T.Ravi Sarkiness About Ex-Cm Siddaramayya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X