ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು: ಜನರಿಕ್ ಮೆಡಿಕಲ್ ಸ್ಟೋರ್‌ನಲ್ಲಿ ಅವಧಿ ಮೀರಿದ ಗ್ಲೂಕೋಸ್ ಮಾರಾಟ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಏಪ್ರಿಲ್ 20: ಚಿಕ್ಕಮಗಳೂರು ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನರಿಕ್ ಮೆಡಿಕಲ್ ಕೇಂದ್ರದಲ್ಲಿ ಒಂಬತ್ತು ವರ್ಷ ಹಿಂದಿನ ಗ್ಲೂಕೋಸ್ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

2012ರಲ್ಲಿ ಗ್ಲೂಕೋಸ್ ತಯಾರು ಮಾಡಲಾಗಿತ್ತು. ಇದರ ವಾಯಿದೆ ಕೇವಲ 24 ತಿಂಗಳು ಮಾತ್ರ. ಅನಂತರದಲ್ಲಿ ಗ್ಲೂಕೋಸ್ ಉಪಯೋಗ ನಿಷಿದ್ಧ. ಆದರೆ, ಚಿಕ್ಕಮಗಳೂರಿನ ಜನರಿಕ್ ಮೆಡಿಕಲ್ ಸ್ಟೋರ್ ಹಳೆಯ ಗ್ಲೂಕೋಸ್ ಪ್ಯಾಕೆಟ್ ಮೇಲಿನ ದಿನಾಂಕದ ಮೇಲೆ ಹೊಸ ತಯಾರಿಕಾ ದಿನಾಂಕದ ಲೇಬಲ್ ಅಂಟಿಸಿ ಮಾರಾಟ ಮಾಡಲಾಗಿದೆ.

Chikkamagaluru: Medical Shop Fraudulently Sold Outdated Glucose Packets To Customer

ಚಿಕ್ಕಮಗಳೂರು; ಆಂಬ್ಯುಲೆನ್ಸ್ ಅವ್ಯವಸ್ಥೆಗೆ ಶಾಸಕರ ಅಸಮಾಧಾನಚಿಕ್ಕಮಗಳೂರು; ಆಂಬ್ಯುಲೆನ್ಸ್ ಅವ್ಯವಸ್ಥೆಗೆ ಶಾಸಕರ ಅಸಮಾಧಾನ

ಗುರು ಎಂಬುವವರು ಗ್ಲೂಕೋಸ್ ಖರೀದಿ ಮಾಡಿದ್ದು, ಆಗ ಅವರ ಗಮನಕ್ಕೆ ಬಂದಿದೆ. ಮೆಡಿಕಲ್ ಸ್ಟೋರ್ ನವರು ಮೋಸ‌ ಮಾಡಿರುವುದನ್ನು ಖಚಿತ ಪಡಿಸಿಕೊಳ್ಳಲು ಪುನಃ ಇನ್ನೊಂದು ಗ್ಲೂಕೋಸ್‌ ಪ್ಯಾಕೆಟ್ ಖರೀದಿಸಿದ್ದಾರೆ. ಆ ಪ್ಯಾಕೆಟ್ ನಲ್ಲಿಯೂ ಸಹ ಲೆಬೆಲ್ ಅಂಟಿಸಿ ಮೋಸ ಮಾಡಿರುವುದು ದೃಢಪಟ್ಟಿದೆ. 26 ರೂಪಾಯಿಯ ಗ್ಲೂಕೋಸ್ ಕೇವಲ 13 ರೂಪಾಯಿಗೆ ಮಾರಾಟ ಮಾಡಿದ್ದಾರೆ.

Chikkamagaluru: Medical Shop Fraudulently Sold Outdated Glucose Packets To Customer

Recommended Video

ಭಾರತ ಮತ್ತು ಇಂಗ್ಲೆಂಡ್ ನಡುವಿನ ವಿಮಾನ ಹಾರಾಟ ರದ್ದುಗೊಳಿಸಿದ ಏರ್‌ ಇಂಡಿಯಾ! | Oneindia Kannada

ಕೇಂದ್ರ ಸರ್ಕಾರ ಜನರಿಗೆ ಅಗ್ಗ ದರದಲ್ಲಿ ಔಷಧಿಗಳು ಲಭಿಸುವಂತೆ ಆಗಬೇಕು ಎಂಬ ಉದ್ದೇಶದಿಂದ ಜನರಿಕ್ ಮೆಡಿಕಲ್ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಮೆಡಿಕಲ್ ನವರು ಹಣ ಮಾಡುವ ಉದ್ದೇಶದಿಂದ ಜನರ ಜೀವದ ಜೊತೆಯಲ್ಲಿ ಆಟವಾಡಲು ಮುಂದಾಗಿದ್ದಾರೆ. ಈ ಕುರಿತು ಸರ್ಕಾರ ಕೂಡಲೇ ಎಚ್ಚೆತ್ತು, ತಪ್ಪಿತಸ್ಥರ ವಿರುದ್ಧ ಕ್ರಮ ಮುಂದಾಗಬೇಕು ಎಂಬ ಕೂಗು ಕೇಳಿಬಂದಿದೆ.

English summary
Chikkamagaluru: Medical shop sold 9-year-old glucose packets to a customer within the government hospital premises. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X