ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈ ಮೇಲೆ ಹರಿದು ಹೋದ ಕಾಳಿಂಗ ಸರ್ಪ; ಬೆಚ್ಚಿಬಿದ್ದ ವ್ಯಕ್ತಿ!

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 10: ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿಯಾದ ಕಾಳಿಂಗ ಸರ್ಪ ವ್ಯಕ್ತಿಯೊಬ್ಬರ ಮೈಮೇಲೆ ಹರಿದು ಹೋದ ಘಟನೆ ನಡೆದಿದೆ. ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ ಘಟನೆ ಬಗ್ಗೆ ನೆನೆಪು ಮಾಡಿಕೊಂಡು ಬೆಚ್ಚಿಬಿದ್ದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಂಗಳಗಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಯಂಬಳ್ಳಿಯಲ್ಲಿ ಈ ಘಟನೆ ನಡೆದಿದೆ. ಗ್ರಾಮದ ನಿವಾಸಿ ಸಂತೋಷ್ ಅವರ ಮನೆಯಲ್ಲಿ ನಾಗ ಎಂಬುವವರ ಮೇಲೆ ಕಾಳಿಂಗ ಸರ್ಪ ಹರಿದು ಹೋಗಿದೆ.

ಚಿಕ್ಕಮಗಳೂರು; ದನದ ಕೊಟ್ಟಿಗೆಯಲ್ಲಿ ಸೆರೆಸಿಕ್ಕ ಭಾರೀ ಗಾತ್ರದ ಕಾಳಿಂಗಚಿಕ್ಕಮಗಳೂರು; ದನದ ಕೊಟ್ಟಿಗೆಯಲ್ಲಿ ಸೆರೆಸಿಕ್ಕ ಭಾರೀ ಗಾತ್ರದ ಕಾಳಿಂಗ

ನಾಗ ರಾತ್ರಿ 9.30ರ ಸುಮಾರಿಗೆ ಮನೆಯಲ್ಲಿ ಮಲಗಿದ್ದರು. ಆಗ ಮನೆಯೊಳಗೆ ಬಂದ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ವ ಅವರ ಮೇಲೆ ಹರಿದು ಹೋಗಿದೆ. ಮೈಮೇಲೆ ಹಾವು ಹರಿದು ಹೋದ ಅನುಭವ ಆಗಿದೆ ಎಂದು ಅವರು ತಕ್ಷಣ ಎದ್ದು ಕೂತಿದ್ದಾರೆ.

ಹೊಸಂಗಡಿಯಲ್ಲಿ ಶಾಲೆಗೆ ನುಗ್ಗಿದ ಬೃಹತ್ ಗಾತ್ರದ ಕಾಳಿಂಗ! ಹೊಸಂಗಡಿಯಲ್ಲಿ ಶಾಲೆಗೆ ನುಗ್ಗಿದ ಬೃಹತ್ ಗಾತ್ರದ ಕಾಳಿಂಗ!

 Man Escapes From Bite Of King Cobra

ನಂತರ ಮನೆಯಲ್ಲಿ ಹುಡುಕಾಟ ನಡೆಸಿದಾಗ ರಟ್ಟಿನ ಪೆಟ್ಟಿಗೆಯೊಳಗೆ ಕಾಳಿಂಗ ಸರ್ವ ಪತ್ತೆಯಾಗಿದೆ. ಕ್ಷಣ ಕಾಲದಲ್ಲಿ ಪ್ರಾಣಾಪಾಯದಿಂದ ಪಾರಾದ ನಾಗ ಘಟನೆ ಬಳಿಕ ಬೆಚ್ಚಿಬಿದ್ದಿದ್ದಾರೆ. ಶೃಂಗೇರಿಯ ಸ್ನೇಕ್ ಅರ್ಜುನ್ ಹಾವನ್ನು ರಕ್ಷಣೆ ಮಾಡಿದ್ದಾರೆ.

 ಸೋಮ್ಲಾಪುರದಲ್ಲಿ 13 ಅಡಿ ಉದ್ದವಿರುವ ಬೃಹತ್ ಕಾಳಿಂಗ ಸರ್ಪ ಸೆರೆ ಸೋಮ್ಲಾಪುರದಲ್ಲಿ 13 ಅಡಿ ಉದ್ದವಿರುವ ಬೃಹತ್ ಕಾಳಿಂಗ ಸರ್ಪ ಸೆರೆ

ಮನೆಯ‌ ಒಳಗೆ ಆಗಮಿಸಿದ ಕಾಳಿಂಗ ಸರ್ಪ ನಾಗ ಅವರ ಮೇಲೆ ಹರಿದು ಹೋಗಿದೆ. ಕೊಂಚ ಅಲುಗಾಡಿದರೂ ಅದು ಕಚ್ಚುವ ಸಾಧ್ಯತೆ ಇತ್ತು. ಕಾಳಿಂಗ ಕಚ್ಚುವುದರಿಂದ ಆಶ್ಚರ್ಯಕರವಾಗಿ ನಾಗ ಪಾರಾಗಿದ್ದಾರೆ.

ಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತುಈ ಪುಟಾಣಿಯ ತೊದಲು ನುಡಿ ಕೇಳಿ ಮೂರು ವರ್ಷವಾಯಿತು

ಕಾಳಿಂಗ ಸರ್ಪ ಅತ್ಯಂತ ಅಪಾಯಕಾರಿ ಮತ್ತು ವಿಷಕಾರಿಯಾದ ಹಾವು. ಕಚ್ಚಿದರೆ ಕ್ಷಣ ಮಾತ್ರದಲ್ಲಿಯೇ ವ್ಯಕ್ತಿ ವಿಷವೇರಿ ಸಾವನ್ನಪ್ಪುತ್ತಾನೆ. ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮನೆಗಳ ಸಮೀಪ ಕಾಳಿಂಗ ಸರ್ಪ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತದೆ.

English summary
In Chikkamagaluru district Koppa man escaped from the bite of an King cobra. Snake which hidden in paper box rescued.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X