ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಚಲು ಮರದಲ್ಲಿ ಮೂಡಿದ ಗಣಪ, ಜನರಿಂದ ಪೂಜೆ, ಪುನಸ್ಕಾರ ಆರಂಭ!

|
Google Oneindia Kannada News

ಚಿಕ್ಕಮಗಳೂರು , ಜೂನ್ 25: : ಈಚಲು ಮರದಲ್ಲಿ ಗಣಪ ಉದ್ಭವವಾಗಿರೋದನ್ನ ಕಂಡು ಚಿಕ್ಕಮಗಳೂರಿನ ಜನ ಮೂಕವಿಸ್ಮಿತರಾಗಿದ್ದಾರೆ. ನಗರದ ಪಟಾಕಿ ಗ್ರೌಂಡ್‌ನ ಪಕ್ಕದಲ್ಲಿರುವ ಒಂದು ಹೊಲದ ಈಚಲುಮರದಲ್ಲಿ ಗಣಪನನೇ ಹೋಲುವ ಸೊಂಡಿಲು, ಕಣ್ಣು, ಕೈಗಳು, ದೇಹ ಎಲ್ಲವನ್ನೂ ಹೊಂದಿರುವ ಆಕೃತಿ ಮೂಡಿದೆ. ಈ ವಿಷಯ ಗೊತ್ತಾಗುತ್ತಿದ್ದಂತೆ, ಜನರು ತಂಡೋಪತಂಡವಾಗಿ ಈಚಲುಮರ ಗಣಪನ ದರ್ಶನಕ್ಕೆ ಮುಗಿಬಿದ್ದು ಪೂಜೆ ಸಲ್ಲಿಸಲು ಪ್ರಾರಂಭಿಸಿದ್ದಾರೆ.

ಚಿಕ್ಕಮಗಳೂರು ನಗರದ ಹೊಲವೊಂದರಲ್ಲಿ ಈಚಲು ಮರವನ್ನ ಮಾಲೀಕ ಮಾಮೂಲಿ ಮರವಷ್ಟೆ ಎಂದು ಭಾವಿಸಿದ್ದರು. ಆದರೆ, ಈಚಲು ಈ ಮರದಲ್ಲಿ ಉದ್ಭವವಾಗಿರು ಆಕೃತಿಯಂತೆ ಕಾಣುತ್ತಿದ್ದಂತೆ ಈ ವಿಷ್ಮಯವನ್ನು ನೋಡಲು, ಪೂಜೆಸಲ್ಲಿಸಲು ಸಾಕಷ್ಟು ಜನ ಬರುತ್ತಿದ್ದಾರೆ. ಈ ಮರದಲ್ಲಿ ಮೂಡಿರುವ ಆಕೃತಿ ಗಣಪನನೇ ಹೋಲುವ ಸೊಂಡಿಲು, ಕಣ್ಣು, ಕೈಗಳು, ದೇಹವನ್ನು ಹೊಂದಿದೆ. ಇದೀಗ ದಾರಿಯಲ್ಲಿ ಹೋಗುವವರೆಲ್ಲೂ ಈ ಈಚಲು ಮರದ ಗಣಪನನ್ನ ನೋಡಿ ಪ್ರಾರ್ಥಿಸಲು ಶುರು ಮಾಡಿದ್ದಾರೆ.

'ದೇವರ' ಲೋಕ ಈ 'ಮನೆ'; ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರಿಲ್ಲ'ದೇವರ' ಲೋಕ ಈ 'ಮನೆ'; ಪ್ರಕೃತಿ ಸೌಂದರ್ಯಕ್ಕೆ ಮನಸೋಲದವರಿಲ್ಲ

ನಗರದಲ್ಲಿ ನಾಲ್ಕೈದು ಗಣಪತಿ ದೇವಸ್ಥಾನಗಳಿದ್ದರೂ ಕೂಡ ಎಲ್ಲವೂ ಪಶ್ಚಿಮ ದಿಕ್ಕಿಗೆ ಮುಖ ಮಾಡಿವೆ. ಆದರೆ, ಈ ಈಚಲು ಮರದಲ್ಲಿ ಉದ್ಭವಿಸಿರುವ ಗಣಪತಿ ಪೂರ್ವ ದಿಕ್ಕಿಗೆ ಮುಖ ಮಾಡಿ ಹುಟ್ಟಿರೋದು ಸ್ಥಳೀಯರು ಹಾಗೂ ಆಸ್ತಿಕರ ತೀವ್ರ ತರವಾದ ಭಕ್ತಿಗೆ ಕಾರಣವಾಗಿದೆ. ಕಂಪ್ಲೀಟ್ ಗಣೇಶನನ್ನೇ ಹೋಲುವ ಮೂರ್ತಿಯನ್ನ ನೋಡಿ ಜನ ನಾ ಮುಂದು-ತಾ ಮುಂದು ಅಂತ ಗಣಪನಿಗೆ ಪೂಜೆ ಸಲ್ಲಿಸಿ ಬೇಡಿಕೊಳ್ಳಲು ಆರಂಭಿಸಿದ್ದಾರೆ. ಬೇಡಿಕೆ ಈಡೇರುತ್ತಿದ್ದಂತೆ ಈಚಲು ಮರದ ಗಣಪನಿಗೆ ಉಘೇ...ಉಘೇ.... ಎನ್ನುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ.

Lord Ganesh naturally created in Phoenix sylvestris in Chikmagalur

ಕೆಲ ವರ್ಷಗಳ ಹಿಂದೆ ಗಣಪ ಹಾಲು ಕುಡಿಯುತ್ತಿದ್ದಾನೆ. ಕಣ್ಣನ್ನ ಮುಚ್ಚಿ-ಬಿಡುತ್ತಿದ್ದಾನೆ ಅಂತೆಲ್ಲಾ ಭಕ್ತರು ಮಾತನಾಡಿಕೊಳ್ಳುತ್ತಿದ್ದರು. ಇದೀಗ ಈಚಲು ಮರದಲ್ಲಿ ಗಣಪನನ್ನೇ ಹೋಲುವ ಆಕೃತಿ ಪತ್ತೆಯಾಗಿದ್ದು, ಸ್ಥಳೀಯರು ದಿನನಿತ್ಯ ಪೂಜೆ-ಪುನಸ್ಕಾರ ಮಾಡಿ ನಮಿಸುತ್ತಿದ್ದಾರೆ. ಆದರೆ, ಜನ ಮರಳೋ, ಜಾತ್ರೆ ಮರಳೋ ಎಂಬಂತೆ ರಾತ್ರೋರಾತ್ರಿ ಜನ ಈ ಈಚಲು ಮರದ ಗಣಪನಿಗೆ ಭಕ್ತ ಸಮೂಹ ಹುಟ್ಟಿಕೊಂಡಿರುವುದು ಸತ್ಯ.

ಚಿಕ್ಕಮಗಳೂರು: ಅರಳೀಮರದ ಕೆಳಗಿದ್ದ ಪೂಜಾ ಸಾಮಾಗ್ರಿಗಳಿಗೆ ಬೆಂಕಿ, ಸ್ಥಳದಲ್ಲಿ ಬಿಗುವಿನ ವಾತವರಣಚಿಕ್ಕಮಗಳೂರು: ಅರಳೀಮರದ ಕೆಳಗಿದ್ದ ಪೂಜಾ ಸಾಮಾಗ್ರಿಗಳಿಗೆ ಬೆಂಕಿ, ಸ್ಥಳದಲ್ಲಿ ಬಿಗುವಿನ ವಾತವರಣ

ಈಚಲು ಮರದಲ್ಲಿ ಪಾರ್ವತಿ ಸುತ ಮೂಡಿರುವ ಸುದ್ದಿ ಒಬ್ಬರ ಬಾಯಿಂದ ಒಬ್ಬರಿಗೆ ಹರಡಿ ಇದೀಗ ದಿನಕ್ಕೆ ನೂರಾರು ಜನ ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಈಗಾಗಲೇ ಹಲವು ಭಕ್ತರು ನಿತ್ಯ ಯಾವುದಾದರೂ ಒಳ್ಳೆ ಕೆಲಸಕ್ಕೆ ಹೋಗುವ ಮುನ್ನ ಇಲ್ಲಿಗೆ ಬಂದು ಕೈಮುಗಿದು ಬೇಡಿಕೊಂಡು ಹೋಗುತ್ತಿದ್ದಾರೆ.

English summary
People started worship Lord Ganesh, which is naturally created in Phoenix sylvestris in Chikmagalur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X