ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಲೆನಾಡಿನ ಹಲಸಿಗೂ ತಟ್ಟಿದ ಲಾಕ್ ಡೌನ್ ಬಿಸಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಏಪ್ರಿಲ್ 12: ಮಲೆನಾಡಿನ ಹಲಸಿನ ಹಣ್ಣು ಕೊಳ್ಳುವವರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಕೊರೊನಾ ವೈರಸ್ ನ ಪರಿಣಾಮವಾಗಿ ಎಲ್ಲ ಕಡೆ ಲಾಕ್ ಆಗಿದ್ದರಿಂದ ಹಲಸಿನ ಹಣ್ಣಿನ ಸಾಗಾಟಕ್ಕೆ ಹೊಡೆತ ಬಿದ್ದಿದೆ.

ಹಲಸಿನ ಹಣ್ಣು ಸೇರಿದಂತೆ ಇತರೆ ಹಣ್ಣುಗಳನ್ನು ಸಾಗಿಸಲು ವಾಹನ ಸಿಗದೆ ರೈತ ಕಣ್ಣೀರು ಹಾಕುತ್ತಿದ್ದಾನೆ. ಹಣ್ಣು ಕೊಳ್ಳುವವರಿಲ್ಲದೇ ಹಲಸಿನ ಹಣ್ಣುಗಳನ್ನು ಕಿತ್ತು ರಸ್ತೆಗೆ ಬಿಸಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರೈತರು ತಮ್ಮ ಹೊಲದಲ್ಲಿ ಬೆಳೆದ ಹಲಸಿನ ಹಣ್ಣನ್ನು ಯಾರೂ ಕೇಳುವವರಿಲ್ಲ. ಚಿಕ್ಕಮಗಳೂರು ತಾಲೂಕಿನ ಅಂಡುವಾನೆ ಗ್ರಾಮದಲ್ಲಿ 400 ಕ್ಕೂ ಹೆಚ್ಚು ಹಲಸಿನ ಹಣ್ಣುಗಳನ್ನು ರೈತರು ಕಿತ್ತು ಬಿಸಾಡಿರುವ ಘಟನೆ ನಡೆದಿದೆ.

Lockdwn: Farmers Throwed Fruits To Road In Chikkamagaluru

ಕರಾವಳಿ ಭಾಗದಲ್ಲಿ ಮಲೆನಾಡಿನ ಹಲಸಿಗೆ ಭಾರೀ ಬೇಡಿಕೆ ಇದ್ದರೂ, ಆದರೆ ಲಾಕ್ ಡೌನ್ ಇರುವುದರಿಂದ ಅದನ್ನು ಸಾಗಿಸಲು ವಾಹನ ಸಿಗುತ್ತಿಲ್ಲ. ಹಾಗಾಗಿ ರೈತರು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
The farmer is in tears without a vehicle to transport fruits in Chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X