ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಚಿತ ಅಂಬ್ಯುಲೆನ್ಸ್ ಸೇವೆ ನೀಡಿದ ಚಿಕ್ಕಮಗಳೂರಿನ ಪಿಎಸ್ಐ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಏಪ್ರಿಲ್ 23: ರಾಜ್ಯದಲ್ಲಿ ಕೊರೊನಾ ವೈರಸ್ ಸಂಬಂಧ ಲಾಕ್ ಡೌನ್ ಆದಾಗಿನಿಂದ ತನ್ನ ವೃತ್ತಿಯ ಜೊತೆಗೆ ಒಂದಲ್ಲಾ ಒಂದು ಸಾಮಾಜಿಕ ಕಳಕಳಿ ಕಾರ್ಯಗಳನ್ನು ಮಾಡುತ್ತಿರುವ ಪೊಲೀಸರು, ಸ್ಥಳೀಯ ಜನರಿಗೆ ಪೊಲೀಸ್ ಠಾಣೆಯಿಂದ ಉಚಿತ ಅಂಬ್ಯುಲೆನ್ಸ್ ಸೇವೆ ನೀಡುವ ಮೂಲಕ ಮತ್ತೊಂದು ಸಮಾಜಮುಖಿ‌ ಕೆಲಸಕ್ಕೆ ಮುಂದಾಗಿದ್ದಾರೆ.

Recommended Video

ಪಿಎಸ್ ಐ ಹೊಡೆತಕ್ಕೆ ಯುವಕ ಸಾವು ಪ್ರಕರಣ:ಗ್ರಾಮಸ್ಥರ ಪ್ರತಿಭಟನೆ

ಚಿಕ್ಕಮಗಳೂರಿನ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಕಷ್ಟು ಹಳ್ಳಿಗಳಿವೆ. ಅದರಲ್ಲೂ ಕೆಮ್ಮಣ್ಣುಗುಂಡಿ, ಕಲ್ಲತ್ತಿಗಿರಿ ಭಾಗದಲ್ಲಿ ಸಾಕಷ್ಟು ಜನ ಕೂಲಿ ಕಾರ್ಮಿಕರಿದ್ದು, ಅವರು ಲಾಕ್ ಡೌನ್ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ತೆರಳಲು ಸಾಕಷ್ಟು ಹರಸಾಹಸ ಪಡಬೇಕಾಗಿತ್ತು.

ಇದನ್ನು ಗಮನಿಸಿದ ಪಿಎಸ್ಐ ರಫೀಕ್, ಠಾಣೆಗೆ ವೈಯುಕ್ತಿಕವಾಗಿ ಅಂಬ್ಯುಲೆನ್ಸ್ ಸೇವೆ ನೀಡುವುದರ ಬಗ್ಗೆ ಚಿಂತನೆ ಮಾಡುತ್ತಿದ್ದರು.

ವಾಹನಕ್ಕೆ ಅಂಬ್ಯುಲೆನ್ಸ್ ನಲ್ಲಿರಬೇಕಾದ ಸೌಲಭ್ಯ ಒದಗಿಸಿದ ಪಿಎಸ್ಐ

ವಾಹನಕ್ಕೆ ಅಂಬ್ಯುಲೆನ್ಸ್ ನಲ್ಲಿರಬೇಕಾದ ಸೌಲಭ್ಯ ಒದಗಿಸಿದ ಪಿಎಸ್ಐ

ಈ ವೇಳೆ ಮೂಲತಃ ಲಿಂಗದಹಳ್ಳಿಯವರಾದ ನಿವೃತ್ತ ಪೊಲೀಸ್ ಎಎಸ್ಐ ಮರುಳಸಿದ್ದಯ್ಯ ಎಂಬುವವರ ಮಗ ರುದ್ರೇಶ್ ಎಂಬುವರು ತಮ್ಮ ವಾಹನವನ್ನು ಉಚಿತವಾಗಿ ಠಾಣೆಗೆ ನೀಡುವುದರ ಬಗ್ಗೆ ಪ್ರಸ್ತಾಪಿಸಿದರು.

ಈ ವೇಳೆ ಪಿಎಸ್ಐ ರಫೀಕ್ ಆ ವಾಹನವನ್ನು ಠಾಣೆಗೆ ದಾನವಾಗಿ ಪಡೆದು ಆ ವಾಹನಕ್ಕೆ ಅಂಬ್ಯುಲೆನ್ಸ್ ವಾಹನದಲ್ಲಿ ಇರಬೇಕಾದ ಸೌಲಭ್ಯಗಳನ್ನು ಸಿದ್ದಪಡಿಸಿ ಸೇವೆಗೆ ಮುಂದಾಗಿದ್ದಾರೆ.

ಖಾಸಗಿ ಅಂಬ್ಯುಲೆನ್ಸ್ ದಂಧೆ ಕಂಡು ಉಚಿತ ಅಂಬುಲೆನ್ಸ್ ಚಾಲನೆ

ಖಾಸಗಿ ಅಂಬ್ಯುಲೆನ್ಸ್ ದಂಧೆ ಕಂಡು ಉಚಿತ ಅಂಬುಲೆನ್ಸ್ ಚಾಲನೆ

ಕಳೆದ ಒಂದು ತಿಂಗಳ ಲಾಕ್ ಡೌನ್ ಸಂದರ್ಭದಲ್ಲಿ ಖಾಸಗಿ‌ ಅಂಬ್ಯುಲೆನ್ಸ್ ಗಳು ಬಡವರ ಬಳಿ ಹತ್ತಾರು ಕಿ.ಮೀ ಸಾಗಲು ಸಾವಿರಾರು ರುಪಾಯಿ ಪಡೆಯುತ್ತಿದ್ದವು. ಈಗಾಗಿ ಹಲವಾರು ಬಡ ಜನರು ಪೊಲೀಸ್ ಠಾಣೆಗೆ ಬಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದರು. ಇದನ್ನು ಮನಗಂಡ ಪಿಎಸ್ಐ ರಫೀಕ್ ಠಾಣೆಯ ಮೂಲಕವೇ ಅಂಬ್ಯುಲೆನ್ಸ್ ಸೇವೆ ಮಾಡಲು ಮುಂದಾಗಿದ್ದಾರೆ.

ಕೂಲಿ ಕಾರ್ಮಿಕರಿಗೆ ಸೂರು ನೀಡಿ‌ ನೆರವಾಗಿದ್ದ ಪೊಲೀಸರು

ಕೂಲಿ ಕಾರ್ಮಿಕರಿಗೆ ಸೂರು ನೀಡಿ‌ ನೆರವಾಗಿದ್ದ ಪೊಲೀಸರು

ಕೆಮ್ಮಣ್ಣುಗುಂಡಿ ಭಾಗದಲ್ಲಿ ಕಾಫಿ ತೋಟಗಳು ಸೇರಿದಂತೆ ಹಲವು ಕಡೆ ಕೂಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು, ಲಾಕ್ ಡೌನ್ ಸಂದರ್ಭದಲ್ಲಿ ಅಕ್ಷರಶಃ ನಿರಾಶ್ರಿತರಾಗಿದ್ದರು.‌ ಈ ವೇಳೆ ಲಿಂಗದಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳೀಯರ ಸಹಾಯ ತಗೆದುಕೊಂಡು ನೂರಾರು ಜನರಿಗೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಟ್ಟಿದ್ದು, ಅಲ್ಲದೇ ಪ್ರತಿದಿನ ಅವರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು.

ಜನಸ್ನೇಹಿಯಾಗಿ ಕಾರ್ಯ ಮಾಡುತ್ತಿರುವ ಲಿಂಗದಹಳ್ಳಿ ಪೊಲೀಸರು

ಜನಸ್ನೇಹಿಯಾಗಿ ಕಾರ್ಯ ಮಾಡುತ್ತಿರುವ ಲಿಂಗದಹಳ್ಳಿ ಪೊಲೀಸರು

ಈಗಾಗಲೇ ಹಲವಾರು ಕಾಫಿ ತೋಟಗಳು ಸೇರಿದಂತೆ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿರುವವರು, ಆರೋಗ್ಯದ ಸಮಸ್ಯೆ ಎದುರಾದವರಿಗೆ ಇದೇ ಅಂಬ್ಯುಲೆನ್ಸ್ ಅವರ ಸೇವೆಯಲ್ಲಿ ನಿರತರಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಉಚಿತ ಸೇವೆಯನ್ನು ಈ ಪೊಲೀಸ್ ಅಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿದೆ. ಲಾಕ್ ಡೌನ್ ನಂತಹ ಸಂದಿಗ್ಧತೆಯಲ್ಲಿಯೂ ತಮ್ಮ‌ ಕಾರ್ಯದ ಜೊತೆಗೆ ತನ್ನ ಸುತ್ತಲಿನ ಸಮಾಜದ ಬಗ್ಗೆಯೂ ಕಾಳಜಿ ವಹಿಸಿ, ಜನಸ್ನೇಹಿಯಾಗಿ ಕೆಲಸ ಮಾಡುತ್ತಿರುವ ಲಿಂಗದಹಳ್ಳಿ ಪೊಲೀಸರ ಕಾರ್ಯ ಉಳಿದವರಿಗೆ ಮಾದರಿಯಾಗುವಂತಹದ್ದಾಗಿದೆ.

English summary
Another ambitious work is being done by providing free ambulance service to the local people from the Lingadahalli police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X