ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಎಸ್ಐ ಪರೀಕ್ಷೆ ರದ್ದುಪಡಿಸುವುದಕ್ಕಿಂತ ಮಧ್ಯಮ ಮಾರ್ಗದ ಬಗ್ಗೆ ಯೋಚಿಸಲಿ: ವೈಎಸ್ ವಿ ದತ್ತಾ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು ಮೇ 5 : ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸರ್ಕಾರ ತಲೆಗೆಲ್ಲಾ ಒಂದೇ ಮಂತ್ರ ಎಂಬಂತೆ ನಡೆದುಕೊಳ್ಳಬಾರದು ಎಂದು ಚಿಕ್ಕಮಗಳೂರು ಜಿಲ್ಲೆ ಕಡೂರಿನ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್.ವಿ.ದತ್ತಾ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಪಿ.ಎಸ್.ಐ. ನೇಮಕಾತಿಯಲ್ಲಿ ಅಕ್ರಮ ಹಿನ್ನೆಲೆ ಸರ್ಕಾರ ಆಯ್ಕೆ ಪಟ್ಟಿಯನ್ನೇ ರದ್ದುಪಡಿಸುವುದಕ್ಕಿಂತ ಮಧ್ಯಮ ಮಾರ್ಗ ಯೋಚಿಸಲಿ, ಸರ್ಕಾರಕ್ಕೆ ಅದ್ಯಾವುದೂ ದೊಡ್ಡ ಕೆಲಸವಲ್ಲ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರು ಮತ್ತು ಪರೀಕ್ಷೆಯ ಅಕ್ರಮದಲ್ಲಿ ಪಾಲ್ಗೊಂಡವರ ಪಟ್ಟಿಯನ್ನ ಪ್ರತ್ಯೇಕಿಸಿ ಪ್ರಾಮಾಣಿಕರಿಗೆ ಕೆಲಸ ನೀಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು, ಪ್ರಮಾಣಿಕವಾಗಿ ಓದಿ, ಪರೀಕ್ಷೆ ಬರೆದವರಿಗೆ ಮೋಸ ಆಗಬಾರದು ಎಂದಿದ್ದಾರೆ. ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ಪ್ರಾಮಾಣಿಕರು ಹಾಗೂ ಅಕ್ರಮವೆಸಗಿದವರನ್ನ ಪ್ರತ್ಯೇಕ ಮಾಡಬೇಕೆಂದು ಹೇಳಿದ್ದಾರೆ.

Let’s think of a middle way than canceling the PSI test: YSV Datta

ಎಲ್ಲದಕ್ಕೂ ಕಾಲ ಕೂಡಿ ಬರಬೇಕು:

ಇದೇ ವೇಳೆ ಪ್ರಾದೇಶಿಕ ಪಕ್ಷ ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರುತ್ತಾರೆಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ವೈ.ಎಸ್‌.ವಿ ದತ್ತ ಅವರು ಜೆಡಿಎಸ್ ಬಿಡುತ್ತೇನೆ ಎಂದು ಹೇಳಲು ಕಾಲ ಬಂದಾಗ ಎಲ್ಲರಿಗೂ ತಿಳಿಸುತ್ತೇನೆ. ಆ ಕಾಲ ಬಂದಾಗ ನಿಮಗೆ ಖಂಡಿತ ನಿರ್ಧಾರ ಏನೇಂಬುದನ್ನು ಗೊತ್ತಾಗಲಿದೆ. ಸದ್ಯಕ್ಕೆ ನಾನು ಜೆಡಿಎಸ್ ನಲ್ಲಿ ಇರುತ್ತೇನೆ ಇಲ್ಲವೂ ಎನ್ನುವುದಕ್ಕೆ ಕಾಲ ಕೂಡಿ ಬರಬೇಕು ಎಂದು ತಿಳಿಸಿದರು.

English summary
Former MLA and JDS leader of Chikkamagaluru district YSV Datta said the government should not act as one mantra in the PSI recruitment scandal. Datta has appealed to the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X