ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಜೆಟ್ ಮುಗಿಸಿ ಶೃಂಗೇರಿಗೆ ಸಿಎಂ ಕುಮಾರಸ್ವಾಮಿ ಭೇಟಿ ಸಾಧ್ಯತೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ 08: ದಿನಕ್ಕೊಂದು ರಾಜಕೀಯ ಚದುರಂಗದಾಟದಿಂದ ಕಂಗಲಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಶುಕ್ರವಾರ ಮತ್ತೆ ಶೃಂಗೇರಿಯ ಶಾರದಾ ಮಠಕ್ಕೆ ಬರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ತಿಳಿಸಿವೆ.

ಆಪರೇಷನ್ ಆಡಿಯೋ ಬಾಂಬ್ ಸಿಡಿಸಿದ ಕುಮಾರಸ್ವಾಮಿಆಪರೇಷನ್ ಆಡಿಯೋ ಬಾಂಬ್ ಸಿಡಿಸಿದ ಕುಮಾರಸ್ವಾಮಿ

ಬಜೆಟ್ ಮುಗಿಸಿ ಸಂಜೆ ನಾಲ್ಕು ಗಂಟೆಗೆ‌ ಬೆಂಗಳೂರು ಬಿಡಲಿರುವ ಸಿಎಂ, ಕುರ್ಚಿಗಾಗಿ ಮತ್ತೆ ದೈವದ ಮೊರೆ ಹೋಗ್ತಾರಾ ಎಂಬ ಮಾತು ಕೇಳಿಬರುತ್ತಿದೆ. ಈ ಹಿಂದೆಯೂ ಸರ್ಕಾರಕ್ಕೆ ಅಸ್ಥಿರತೆ ಉಂಟಾದಾಗ ಕುಮಾರಸ್ವಾಮಿ ಅವರು ಶೃಂಗೇರಿಗೆ ಭೇಟಿ ನೀಡಿದ್ದರು.

 ಕರ್ನಾಟಕ ವಿಧಾನಸಭೆ ಅಧಿವೇಶನ LIVE: ತಮ್ಮ ಧ್ವನಿಯ ಆಡೀಯೋಗೆ BSY ಪ್ರತಿಕ್ರಿಯೆ ಕರ್ನಾಟಕ ವಿಧಾನಸಭೆ ಅಧಿವೇಶನ LIVE: ತಮ್ಮ ಧ್ವನಿಯ ಆಡೀಯೋಗೆ BSY ಪ್ರತಿಕ್ರಿಯೆ

ಈ ಹಿನ್ನೆಲೆಯಲ್ಲಿ ಇಂದು ಕೂಡ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ಸಾಧ್ಯತೆಯಿದೆ. ದೇವೇಗೌಡರ ಕುಟುಂಬ ಪಟ್ಟಕ್ಕಾಗಿ ಅತಿರುದ್ರ ಮಹಾಯಾಗ ನಡೆಸಿತ್ತು. ಅಷ್ಟೇ ಅಲ್ಲ, ಸಿಎಂ ಆದ ಮೇಲೆ ಕುಮಾರಸ್ವಾಮಿ ಅವರು ಐದು ಬಾರಿ ಶೃಂಗೇರಿಗೆ ಬಂದಿದ್ದರು.

Kumaraswamy is likely to arrive at Sarada matha in Sringeri

ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿಶೂಲಿನಿ ಯಾಗ ಮಾಡಿಸಿದ್ದ ಕುಮಾರಸ್ವಾಮಿ, ಬಂದಾಗೆಲ್ಲಾ ಒಂದೊಂದು ವಿಶೇಷ ಪೂಜೆ ಕೈಗೊಳ್ಳುತ್ತಾರೆ. ಇದೀಗ ಶೃಂಗೇರಿ ಶಾರದಾಂಬೆ ಕುಮಾರಸ್ವಾಮಿ ಕೈ ಹಿಡಿವಳೋ-ಬಿಡುವಳೋ ಎಂಬುದನ್ನು ಕಾದು ನೋಡಬೇಕಿದೆ.

English summary
Chief Minister Kumaraswamy is likely to arrive at Sharada mata in Sringeri, Chikmagalur today after the budget is completed, police sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X