ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಲೋಗೋ ರಚಿಸಿ, ಬಹುಮಾನ ಗೆಲ್ಲಿ

|
Google Oneindia Kannada News

ಚಿಕ್ಕಮಗಳೂರು/ ಬೆಂಗಳೂರು, ಫೆಬ್ರವರಿ 14: ಸಾಹಿತಿ ಕೆ.ಪಿ ಪೂರ್ಣಚಂದ್ರತೇಜಸ್ವಿ ಪ್ರತಿಷ್ಠಾನ, ಕೊಟ್ಟಿಗೆಹಾರ ವತಿಯಿಂದ ಸೃಜನಶೀಲ ವಿನ್ಯಾಸಗಾರರು, ಕಲಾವಿದರಿಗೆ ಲೋಗೋ ಸ್ಪರ್ಧೆ ಆಯೋಜಿಸಲಾಗಿದೆ. ಈ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ ಹೊರಡಿಸಿದೆ.

ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಖಾಂತರ ನಾಡಿನ ಹೆಸರಾಂತ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿಯವರ ಬದುಕು ಬರಹ ಹಾಗೂ ಅವರ ಪರಿಸರ ಕಾಳಜಿಯನ್ನು ಯುವಜನಾಂಗಕ್ಕೆ ತಲುಪಿಸುವ ಉದ್ದೇಶದಿಂದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವನ್ನು ರಚಿಸಲಾಗಿದೆ.

'ಅವರಿಂದಲೇ ನಾನು ಹೀಗೆ ಇರೋದು.. 'ಎಂದು ಭಾವುಕರಾದ ರಾಜೇಶ್ವರಿ ತೇಜಸ್ವಿ 'ಅವರಿಂದಲೇ ನಾನು ಹೀಗೆ ಇರೋದು.. 'ಎಂದು ಭಾವುಕರಾದ ರಾಜೇಶ್ವರಿ ತೇಜಸ್ವಿ

ಈ ಪ್ರತಿಷ್ಠಾನಕೆ ಲಾಂಛನ(ಲೋಗೋ) ರಚಿಸಲು ರಾಜ್ಯಮಟ್ಟದ ಸ್ಪರ್ಧೆ ಏರ್ಪಡಿಸಿದೆ. ಈ ಲಾಂಛನವು ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಮನೋಧರ್ಮ, ಆಸಕ್ತಿ, ಹವ್ಯಾಸ ಹಾಗೂ ಅವರ ಒಟ್ಟು ಸಾಹಿತ್ಯವನ್ನು ಬಿಂಬಿಸುವಂತಿರಬೇಕು.

KP Poornachandra Tejaswi Trust Logo Competition, Send your entries

ಆಯ್ಕೆ: ಪ್ರತಿಷ್ಠಾನದ ಅಧ್ಯಕ್ಷರು, ಸದಸ್ಯರು ಹಾಗೂ ತಜ್ಞರನ್ನೊಳಗೊಂಡ ಸಮಿತಿಯು ಲಾಂಛನವನ್ನು ಆಯ್ಕೆ ಮಾಡಲಿದ್ದು, ಸಮಿತಿಯ ತೀರ್ಮಾನವೆ ಅಂತಿಮವಾಗಿರುತ್ತದೆ. ಆಯ್ಕೆಯಾಗುವ ಲೋಗೋವನ್ನು ಮುದ್ರಣ, ಜಾಹೀರಾತು ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಬಳಸಲಾಗುತ್ತದೆ.

'ಮಂದಣ್ಣ' ಮೇಷ್ಟ್ರು ಕರ್ವಾಲೊವನ್ನು ವರ್ಣಿಸುತ್ತಿದ್ದ ಪರಿ, ವಾಹ್! 'ಮಂದಣ್ಣ' ಮೇಷ್ಟ್ರು ಕರ್ವಾಲೊವನ್ನು ವರ್ಣಿಸುತ್ತಿದ್ದ ಪರಿ, ವಾಹ್!

ಬಹುಮಾನ: ಆಯ್ಕೆಯಾದ ಅತ್ಯುತ್ತಮ ರಚನೆಗೆ ಪ್ರತಿಷ್ಠಾನದ ವತಿಯಿಂದ 10,000 ರು ಬಹುಮಾನ ನೀಡಲಾಗುವುದು.

ಆಸಕ್ತರು ಮಾರ್ಚ್ 15, 2019ರೊಳಗೆ ತಮ್ಮ ರಚನೆಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳಿಸಬಹುದು.

ತೇಜಸ್ವಿ ಜನ್ಮದಿನಕ್ಕೆ ಫೋಟೋಗ್ರಾಫರ್ ಹಂಚಿಕೊಂಡ ಅನುಭವ ತೇಜಸ್ವಿ ಜನ್ಮದಿನಕ್ಕೆ ಫೋಟೋಗ್ರಾಫರ್ ಹಂಚಿಕೊಂಡ ಅನುಭವ

ಸಹಾಯಕ ನಿರ್ದೇಶಕರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಕುವೆಂಪು ಕಲಾಮಂದಿರ
ಚಿಕ್ಕಮಗಳೂರು- 577 101
ದೂರವಾಣಿ: 08262-231372

English summary
KP Poornachandra Tejaswi Trust, Kottigehara affiliated to Kannada and culture department has invited entries for creation of new logo for the trust. Last date for sending the entries March 15, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X