ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೇಜಸ್ವಿ ಪ್ರತಿಷ್ಠಾನದಲ್ಲಿ ಪೋಟೋಗ್ರಾಫಿಕ್ ಸೊಸೈಟಿ ಉದ್ಘಾಟನೆ

|
Google Oneindia Kannada News

ಕೊಟ್ಟಿಗೆಹಾರ, ಜನವರಿ 06: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಆಯೋಜಿಸಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪೋಟೋಗ್ರಾಫಿಕ್ ಸೊಸೈಟಿಯ ಉದ್ಘಾಟನೆಯನ್ನು ಕ್ಯಾಮರಾ ಚಾಲನೆ ಮಾಡುವ ಮೂಲಕ ಖ್ಯಾತ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ನೆರವೇರಿಸಿದರು.

ತೇಜಸ್ವಿಯವರು ಅಪಾರ ತಾಳ್ಮೆ, ಏಕಾಗ್ರತೆಯಿಂದ ಪಕ್ಷಿಗಳ ಪೋಟೋಗ್ರಫಿ ತೆಗೆದು ಜಗತ್ತಿಗೆ ಉತ್ತಮ ಛಾಯಾಚಿತ್ರಗಳನ್ನು ನೀಡಿದ್ದಾರೆ. ಪಕ್ಷಿಗಳ ಚಲನವಲನದ ಚಿತ್ರ ತೆಗೆಯಲು ತೇಜಸ್ವಿಯರು ಬಹಳ ಕಾಲ ಕಾಯುತ್ತಿದ್ದರು. ಏಕಾಗ್ರತೆ ಒಂದೆಡೆ ಕೇಂದ್ರೀಕರಿಸಿ ತಾಳ್ಮೆಯಿಂದ ಸುಂದರವಾದ ಛಾಯಾಚಿತ್ರ ತೆಗೆಯುವ ಗುಣ ಅವರಲ್ಲಿತ್ತು. ಆ ಕಾಲದಲ್ಲಿಯೇ ಅವರು ಪೋಟೋಗ್ರಫಿಗೆ ಹೆಚ್ಚಿನ ಒತ್ತು ನೀಡಿದ್ದರು. ಅವರ ಮಾರ್ಗಧರ್ಶನ ಈಗಿನ ಯುವ ಪೀಳಿಗೆಗೆ ಶಿಕ್ಷಣವಾಗಬೇಕು. ಮಕ್ಕಳು, ಯುವಜನರು ಶಿಕ್ಷಣದ ಜೊತೆ ಪೋಟೋಗ್ರಫಿ, ಚಿತ್ರ ರಚನೆಯಲ್ಲಿ ಯುವ ಪೀಳಿಗೆ ತೊಡಗಿಸಿ ಉತ್ತಮ ಸಾಧನೆ ಮಾಡಬೇಕು ಎಂದು ಕೆ.ಟಿ.ಶಿವಪ್ರಸಾದ್ ಹೇಳಿದರು.

ಚಿಕ್ಕಮಗಳೂರು ಸಹಮತ ಸಂಸ್ಥೆಯ ಐವನ್ ಡಿಸಿಲ್ವಾ ಮಾತನಾಡಿ, ಈ ಭಾಗದಲ್ಲಿ ಛಾಯಾಗ್ರಹಣದಲ್ಲಿ ಆಸಕ್ತರಿರುವ ಸಮಾನಮನಸ್ಕರನ್ನು ಒಂದೆಡೆ ಸೇರಿಸಿ ಛಾಯಾಗ್ರಹಣಕ್ಕೆ ಸಂಬಂಧಿಸಿದ ಸಕ್ರಿಯ ಕಾರ್ಯಕ್ರಮಗಳನ್ನು ನಡೆಸಲು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪೋಟೋÀಗ್ರಾಫಿಕ್ ಸೊಸೈಟಿಯನ್ನು ಹುಟ್ಟು ಹಾಕಲಾಗಿದ್ದು ಇದರ ಮೂಲಕ ಪೋಟೋಗ್ರಫಿ ತಜ್ಞರನ್ನು ಕರೆಸಿ ತಾಂತ್ರಿಕತೆ ಮತ್ತು ಪೋಟೊ ತೆಗೆಯುವ ಕೌಶಲ್ಯವನ್ನು ವಿವರಿಸಿಉವ ಶಿಬಿರಗಳನ್ನು ಆಯೋಜಿಸುವುದು, ಛಾಯಾಚಿತ್ರ ಪ್ರದರ್ಶನಗಳನ್ನು ನಡೆಸುವುದು ಮತ್ತು ಮಲೆನಾಡಿನ ಜ್ವಲಂತ ಸಮಸ್ಯೆಗಳಿಗೆ ಛಾಯಾಚಿತ್ರಗಳ ಮೂಲಕ ಅಭಿವ್ಯಕ್ತಿ ಪಡಿಸಿ ಜನಜಾಗೃತಿ ಮೂಡಿಸುವುದು ಪೋಟೋಗ್ರಫಿ ಸೊಸೈಟಿಯ ಉದ್ದೇಶವಾಗಿದೆ ಎಂದರು.

KP Poornachandra Tejaswi Trust inaugurates Photographic Society

ಖ್ಯಾತ ಚಿತ್ರಕಲಾವಿದ ಕಿರಣ್ ಮಾತನಾಡಿ, ತೇಜಸ್ವಿ ಅವರಿಂದ ಪ್ರಭಾವಿತರಾಗಿ ಅನೇಕ ಯುವಕರು ಪೋಟೋಗ್ರಫಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ತೇಜಸ್ವಿಯವರಿಗೆ ಪೋಟೋ ಕ್ಷಿಯರಿಟಿ, ಬ್ಯಾಕ್ ಗ್ರೌಂಡ್, ಪೋಟೋ ತೆಗೆಯುವ ಆಯಾಮಗಳು ಹೇಗಿರಬೇಕು ಎಂಬುದನ್ನು ಅನುಭವದಿಂದ ಸ್ಪಷ್ಟವಾಗಿ ತಿಳಿದುಕೊಂಡಿದ್ದರು. ಆಗಿನ ಕಾಲದಲ್ಲಿ ಪೋಟೋ ತೆಗೆದರೆ ಅದು ಹೇಗೆ ಬಂದಿದೆ ಎಂಬುದು ನೋಡುವುದೇ ಕಷ್ಟವಾಗಿತ್ತು. ಅದರಲ್ಲಿಯೇ ಅತ್ಯುತ್ತಮವಾದ ಚಿತ್ರಗಳನ್ನು ತೇಜಸ್ವಿಯವರು ತೆಗೆದಿದ್ದರು ಎಂದರು.

ತೇಜಸ್ವಿ ಒಡನಾಡಿ ರಾಘವೇಂದ್ರ ಮಾತನಾಡಿ, ತೇಜಸ್ವಿಯವರ ಪ್ರಭಾವದಿಂದ ನನಗೂ ಛಾಯಾಗ್ರಹಣದ ಆಸಕ್ತಿ ಹುಟ್ಟಿತ್ತು. ಬೆಲೆಬಾಳುವ ಕ್ಯಾಮರಾಗಳಿಲ್ಲದಿದ್ದರೂ ಕಲಾತ್ಮಕತೆ ಇದ್ದರೆ ಉತ್ತಮ ಚಿತ್ರ ತೆಗೆಯಲು ಸಾಧ್ಯ ಎಂದು ಹೇಳಿದರು.

ಖ್ಯಾತ ಚಿತ್ರಕಾರ ನೇಮಿರಾಜ್ ಶೆಟ್ಟಿ, ಪೋಟೋಗ್ರಾಫಿಕ್ ಸೊಸೈಟಿಯ ಸಂಚಾಲಕರಾದ ನಂದೀಶ್ ಬಂಕೇನಹಳ್ಳಿ, ಪೂರ್ಣೇಶ್ ಮತ್ತಾವರ, ತೇಜಸ್ವಿ ಒಡನಾಡಿಗಳಾದ ರಾಘವೇಂದ್ರ, ಬಾಪುದಿನೇಶ್, ಕೆಂಜಿಗೆ ಪ್ರದೀಪ್, ತೇಜಸ್ವಿ ಪ್ರತಿಷ್ಟಾನದ ಆಕರ್ಷ್, ಛಾಯಾಗ್ರಾಹಕರಾದ ಶಿವಕುಮಾರ್, ಚೇತನ್, ತನ್ಮಯ, ಮುರಳಿ, ಸಂತೋಷ್‍ಪೈ, ವಿಲ್ಸನ್, ಹರೀಶ್, ರಾಜೇಂದ್ರ, ಸಂತೋಷ್, ಕುಲದೀಪ್, ಲಿಂಟನ್, ಉದಯಪ್ರಸಾದ್, ಕೆ.ಅತುಲ್‍ರಾವ್, ಅಭಿಷ್ಠಾ, ಪತ್ರಕರ್ತ ಜಿ.ಟಿ.ಸತೀಶ್ ಹಾಗೂ ತರುವೆ ಏಕಲವ್ಯ ಶಾಲೆಯ ವಿದ್ಯಾರ್ಥಿಗಳು, ಭಾಗವಹಿಸಿದ್ದರು.

English summary
KP Poornachandra Tejaswi Trust inaugurates Photographic Society at trust office Kottigehara. K.T Shivaprasad launched the society.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X