ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಪ್ಪ; ಮಹಿಳೆ ಹೊಟ್ಟೆಯಿಂದ ಭಾರೀ ಗಾತ್ರದ ಗೆಡ್ಡೆ ಹೊರತೆಗೆದ ವೈದ್ಯರು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜುಲೈ 4: ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 15 ಕೆ.ಜಿ ತೂಕದ ಗೆಡ್ಡೆಯನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಶಿವಮೊಗ್ಗ ಮೂಲದ 45 ವರ್ಷದ ಶಫುರಭಿ ಎಂಬ ಮಹಿಳೆಗೆ ಕೆಲದಿನಗಳಿಂದ ಹೊಟ್ಟೆ ಊದಲು ಪ್ರಾರಂಭಿಸಿತ್ತು. ದಪ್ಪ ಆಗಿರಬಹುದು ಎಂದು ಅವರು ಸುಮ್ಮನಾಗಿದ್ದರು. ಆದರೆ ಇತ್ತೀಚೆಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಈ ವೇಳೆ ವೈದ್ಯರನ್ನು ಸಂಪರ್ಕಿಸಿ ಸ್ಕ್ಯಾನಿಂಗ್ ಮಾಡಿಸಿದಾಗ ಹೊಟ್ಟೆಯಲ್ಲಿ ಗೆಡ್ಡೆ ಬೆಳೆಯುತ್ತಿರುವುದು ಗೊತ್ತಾಗಿದೆ. ಕೂಡಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ವೈದ್ಯರು ಸೂಚಿಸಿದ್ದರು.

ಮಹಿಳೆ ಹೊಟ್ಟೇಲಿದ್ದ 12 ಕೇಜಿ ದುರ್ಮಾಂಸ ಹೊರತೆಗೆದ ಮೈಸೂರು ವೈದ್ಯರುಮಹಿಳೆ ಹೊಟ್ಟೇಲಿದ್ದ 12 ಕೇಜಿ ದುರ್ಮಾಂಸ ಹೊರತೆಗೆದ ಮೈಸೂರು ವೈದ್ಯರು

ಈ ಹಿನ್ನೆಲೆ ಕೊಪ್ಪ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಈ ವೇಳೆ ಮಹಿಳೆಯ ಹೊಟ್ಟೆಯಲ್ಲಿ 15 ಕೆ.ಜಿ ತೂಕದ ಗೆಡ್ಡೆ ಪತ್ತೆಯಾಗಿದೆ.

Chikkamagaluru Koppa Doctors Successfully Removed 15 KG Tumor From Woman Stomach

ಕೊಪ್ಪ ಸರ್ಕಾರಿ ಆಸ್ಪತ್ರೆಯ ವೈದ್ಯ ಬಾಲಕೃಷ್ಣ ಅವರ ಪರಿಶ್ರಮದಿಂದ ಸರ್ಕಾರಿ ಆಸ್ಪತ್ರೆಯಲ್ಲೇ ಯಶಸ್ವಿ ಆಪರೇಶನ್ ನಡೆದಿದೆ. ಮಹಿಳೆ ಆರೋಗ್ಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯ ಕುಟುಂಬಸ್ಥರು ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ಈ ರೀತಿಯ ದೊಡ್ಡ ಗಾತ್ರದ ಗೆಡ್ಡೆಯನ್ನು ಕಂಡು ವೈದ್ಯರು ಸಹ ಆಶ್ಚರ್ಯಗೊಂಡಿದ್ದಾರೆ. ಶಸ್ತ್ರಚಿಕಿತ್ಸೆಯಲ್ಲಿ ಡಾ. ಬಾಲಕೃಷ್ಣ ಜೊತೆಗೆ ಡಾ. ಧನಂಜಯ್, ದಾದಿ ರೇಷ್ಮಾ ಸಿಬ್ಬಂದಿ ಮಂಜುನಾಥ್ ಸಹಕರಿಸಿದ್ದಾರೆ.

English summary
Chikkamagaluru koppa government hospital doctors successfully operated and removed 15 k.g. tumor from woman stomach
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X