ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೌದೆ ಹೊತ್ತು 3,800 ಅಡಿ ಬೆಟ್ಟ ಏರಿದ ಪುನೀತ್‌ ಅಭಿಮಾನಿಗಳು!

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ನವೆಂಬರ್ 09; ನಟ ಪುನೀತ್ ರಾಜ್‍ಕುಮಾರ್ ಆತ್ಮಕ್ಕೆ ಶಾಂತಿ ಸಿಗಲಿ, ಅಶ್ವಿನಿ ಅಕ್ಕನಿಗೆ ಒಳ್ಳೆದಾಗಲಿ ಎಂದು ಚಿಕ್ಕಮಗಳೂರು ನಗರದ ಅಪ್ಪುರವಿ ಹಾಗೂ ಅನಂತ್ ಎಂಬ ಇಬ್ಬರು ಸ್ನೇಹಿತರು ಹೆಗಲ ಮೇಲೆ ಸೌದೆ ಹೊತ್ತುಕೊಂಡು 3,800 ಅಡಿ ಬೆಟ್ಟ ಏರಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿಯಲ್ಲರುವ ಪಿರಮಿಡ್ ಆಕಾರದ ಸುಮಾರು 3,800 ಅಡಿ ಎತ್ತರದ ಬೆಟ್ವವನ್ನು ಹತ್ತಿ ದೇವೀರಮ್ಮನೆಗೆ ಬೇಡಿಕೊಂಡಿದ್ದಾರೆ. ಈ ಮೂಲಕ ನೆಚ್ಚಿನ ನಟ ಮೇಲಿನ ಅಭಿಮಾನ ಮೆರೆದಿದ್ದಾರೆ.

ನೆನಪು; ಚಿಕ್ಕಮಗಳೂರಿನ ಜೊತೆ ಪುನೀತ್ ರಾಜ್‌ಕುಮಾರ್ ನಂಟು ನೆನಪು; ಚಿಕ್ಕಮಗಳೂರಿನ ಜೊತೆ ಪುನೀತ್ ರಾಜ್‌ಕುಮಾರ್ ನಂಟು

ಅಕ್ಟೋಬರ್ 29ರಂದು ಪುನೀತ್ ರಾಜ್‌ಕುಮಾರ್‌ಗೆ ಹೃದಯಾಘಾತವಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಶಕ್ತಿದೇವತೆ ದೇವೀರಮ್ಮನ ದೇವಾಲಯಕ್ಕೆ ಹೋಗಿ ಪುನೀತ್‍ಗೆ ಏನೂ ಆಗುವುದು ಬೇಡ, ಸೌದೆ ಹೊತ್ತಿಕೊಂಡು ಬಂದು ಬೆಟ್ಟ ಹತ್ತಿ ದೀಪ ಹಚ್ಚುತ್ತೇನೆಂದು ರವಿ ದೇವೀರಮ್ಮನಿಗೆ ಹರಕೆ ಕಟ್ಟಿಕೊಂಡಿದ್ದರು.

ಚಿಕ್ಕಮಗಳೂರಿನಲ್ಲಿ ದೇವಿರಮ್ಮ ದರ್ಶನ: 3000 ಅಡಿಯ ಬೆಟ್ಟ ಏರಿದ ಸಾವಿರಾರು ಭಕ್ತರು! ಚಿಕ್ಕಮಗಳೂರಿನಲ್ಲಿ ದೇವಿರಮ್ಮ ದರ್ಶನ: 3000 ಅಡಿಯ ಬೆಟ್ಟ ಏರಿದ ಸಾವಿರಾರು ಭಕ್ತರು!

ಆದರೆ ವಿಧಿಲಿಖಿತ ಬೇರೆಯೇ ಇತ್ತು. ಪುನೀತ್ ರಾಜ್‌ಕುಮಾರ್ ನಮ್ಮನ್ನು ಅಗಲಿದರು. ಪುನೀತ್ ಅಗಲಿಕೆಯ ನೋವಿನ ಮಧ್ಯೆಯೂ ರವಿ ಹಾಗೂ ಅನಂತ್ ಇಬ್ಬರೂ ಹೆಗಲ ಮೇಲೆ ಸೌದೆ ಹೊತ್ತುಕೊಂಡು ಬೆಟ್ಟ ಏರಿ ದೇವೀರಮ್ಮನಿಗೆ ಬೇಡಿಕೊಂಡಿದ್ದಾರೆ.

ಚಿತ್ರದುರ್ಗದ ಮುರುಘಾಮಠದಿಂದ ನಟ ಪುನೀತ್ ರಾಜಕುಮಾರ್ ರಿಗೆ ಬಸವಶ್ರೀ ಪ್ರಶಸ್ತಿ ಚಿತ್ರದುರ್ಗದ ಮುರುಘಾಮಠದಿಂದ ನಟ ಪುನೀತ್ ರಾಜಕುಮಾರ್ ರಿಗೆ ಬಸವಶ್ರೀ ಪ್ರಶಸ್ತಿ

ಅಪ್ಪು ಕ್ಯಾಂಟೀನ್ ಎಂದು ನಾಮಕರಣ

ಅಪ್ಪು ಕ್ಯಾಂಟೀನ್ ಎಂದು ನಾಮಕರಣ

ರವಿ ಮೂಲತಃ ಚಿಕ್ಕಮಗಳೂರು ನಗರ ನಿವಾಸಿ. ಚಿಕ್ಕಂದಿನಿಂದಲೂ ಪುನೀತ್ ರಾಜ್‌ಕುಮಾರ್ ಬಗ್ಗೆ ಅಪಾರ ಪ್ರೀತಿ. ಅವರ ಪ್ರತಿಯೊಂದು ಸಿನಿಮಾಗಳನ್ನು ನೋಡಿಕೊಂಡು ಅವರಂತೆಯೇ ಡ್ಯಾನ್ಸ್ ಮಾಡಿ ಖುಷಿ ಪಡುತ್ತಿದ್ದರು.

ನಗರದ ಶ್ರೀಲೇಖಾ ಥಿಯೇಟರ್ ಬಳಿ ಕ್ಯಾಂಟೀನ್ ಇಟ್ಟುಕೊಂಡು ಜೀವನ ಸಾಗಿಸಿತ್ತಿರುವ ರವಿ ಇಷ್ಟು ದಿನ ಕ್ಯಾಂಟೀನ್‍ಗೆ ತನ್ನ ಮಗಳ ಹೆಸರು ಇಟ್ಟಿದ್ದರು. ಇದೀಗ, ಮಗಳ ಹೆಸರು ತೆಗೆದು ಅಪ್ಪು ಕ್ಯಾಂಟೀನ್ ಎಂದು ಮರುನಾಮಕರಣ ಮಾಡಲು ಮುಂದಾಗಿದ್ದಾರೆ.

ಅಪ್ಪು ರವಿ ಎಂದೇ ಕರೆಯುತ್ತಾರೆ

ಅಪ್ಪು ರವಿ ಎಂದೇ ಕರೆಯುತ್ತಾರೆ

ರವಿಗೆ ಪುನೀತ್ ಮೇಲಿದ್ದ ಗೌರವ, ಪ್ರೀತಿ ಕಂಡು ರವಿ ಸ್ನೇಹಿತರು ರವಿಯನ್ನು ಅಪ್ಪುರವಿ ಎಂದೇ ಕರೆಯುತ್ತಿದ್ದಾರೆ. ಆರಂಭದಲ್ಲಿ ಆಕ್ರೆಸ್ಟ್ರಾದಲ್ಲಿ ಕೆಲಸ ಮಾಡುತ್ತಿದ್ದ ರವಿ ಆಕ್ರೆಸ್ಟ್ರಾದ ಕೊನೆಯಲ್ಲಿ ಪುನೀತ್ ಹಾಡು ಇಲ್ಲದೆ ವಾಪಸ್ ಬರುತ್ತಿರಲಿಲ್ಲ. ಪುನೀತ್ ಡ್ಯಾನ್ಸ್ ಮಾಡಿದಂತೆ ನಾನೂ ಮಾಡಬೇಕೆಂದು ಡ್ಯಾನ್ಸ್ ಕ್ಲಾಸ್ ಸೇರಿ ಡ್ಯಾನ್ಸ್ ಸ್ಪರ್ಧೆಗಳಿಗೂ ಹೋಗಿದ್ದರು ರವಿ.

ತನ್ನ ಮನಸಿನಲ್ಲಿ ತನಗೆ ಪುನೀತ್ ಮೆಂಟರ್ ಎಂದು ಭಾವಿಸಿ ಅವರ ಡ್ಯಾನ್ಸ್‌ಗಳನ್ನು ಅದೇ ರೀತಿ ಮಾಡುತ್ತಿದ್ದರು. ಆದರೆ ಇಂದು ಪುನೀತ್ ನಮ್ಮೊಂದಿಗೆ ಇಲ್ಲ. ನಾನು ಯಾರನ್ನು ಅನುಕರಣೆ ಮಾಡಲಿ?, ಯಾರನ್ನು ಅಣ್ಣ ಎಂದು ಕರೆಯಲಿ? ಎಂದು ರವಿ ಕಣ್ಣೀರಿಟ್ಟಿದ್ದಾರೆ. ಬೆಂಗಳೂರಿಗೆ ಹೋಗಿ ಪುನೀತ್ ಪಾರ್ಥಿವ ಶರೀರದ ಅಂತಿಮ ದರ್ಶನವನ್ನೂ ಮಾಡಿಕೊಂಡು ಬಂದಿದ್ದಾರೆ.

ನೇತ್ರದಾನ ಮಾಡಲು ಸಂಕಲ್ಪ

ನೇತ್ರದಾನ ಮಾಡಲು ಸಂಕಲ್ಪ

"ಪುನೀತ್‍ ರಾಜ್‌ಕುಮಾರ್ ರಂತೆ ನಾನು ಹಾಗೂ ನನ್ನ ಸಹೋದರ ಇಬ್ಬರೂ ನೇತ್ರದಾನ ಮಾಡುತ್ತೇವೆ. ರಾಜ್‍ಕುಮಾರ್ ಮರಣ ಹೊಂದಿದಾಗಲೇ ನೇತ್ರದಾನದ ಸಂಕಲ್ಪ ಮಾಡಿ ಹೋಗಿದ್ದೆವು. ಮನೆಯವರ ಸಹಿ ಬೇಕು ಎಂದು ಹೇಳಿ ವಾಪಸ್ ಕಳಿಸಿದ್ದರು. ಈಗ ಬೇಡ ಎಂದಿದ್ದಾರೆ. ಅದಕ್ಕೆ ನೇತ್ರದಾನ ಮಾಡುತ್ತೇನೆ" ಎಂದು ರವಿ ಹೇಳಿದ್ದಾರೆ.

Recommended Video

ಅಪ್ಪುಅನ್ನಸಂತರ್ಪಣೆಯಲ್ಲಿ ಅಭಿಮಾನಿಗಳಿಗೆ ಊಟ ಬಡಿಸಿದ ಶಿವಣ್ಣ & ಪನೀತ್ ಪತ್ನಿ | Oneindia Kannada
ಉಚಿತವಾಗಿ ಊಟ, ತಿಂಡಿ ವಿತರಣೆ

ಉಚಿತವಾಗಿ ಊಟ, ತಿಂಡಿ ವಿತರಣೆ

"ನನ್ನ ಕ್ಯಾಂಟೀನ್‍ಗೆ ಬರುವ 60 ವರ್ಷ ಮೇಲ್ಪಟ್ಟವರಿಗೆ ಅಪ್ಪು ನೆನಪಿಗಾಗಿ ಉಚಿತ ಊಟ-ತಿಂಡಿ, ಕಾಫಿ-ಟೀ ಕೊಡುತ್ತೇನೆ. ಅವರಂತೆ ನನ್ನ ಕೈಲಾದ ಸೇವೆ ಮಾಡುತ್ತೇನೆ" ಎಂದು ರವಿ ಹೇಳಿದ್ದಾರೆ.

ಅಪ್ಪು ಮೇಲಿನ ಅಭಿಮಾನ, ಪ್ರೀತಿಯನ್ನು ಜೀವಂತವಾಗಿರಿಸಲು ಮುಂದಾಗಿದ್ದಾರೆ. ಜೊತೆಗಿರದ ಜೀವ ಎಂದೆಂದೂ ಜೀವಂತ ಎಂಬಂತೆ ತನ್ನ ಕ್ಯಾಂಟೀನ್ ಮುಂಭಾಗವೇ ಅಪ್ಪುವಿನ 11ನೇ ದಿನದ ಆರಾಧಾನೆ ಮಾಡಿ ಪುನೀತ್ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

English summary
Appu Ravi big fan of Kannada actor late Puneeth Rajkumar. Know about Appu Ravi works in the name of Puneeth Rajkumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X