• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

SSLC Result: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಚಿಕ್ಕಮಗಳೂರಿನ ತನ್ಮಯಿ

By Lekhaka
|

ಚಿಕ್ಕಮಗಳೂರು, ಆಗಸ್ಟ್ ೧೦: ಕೊರೊನಾ ವೈರಸ್ ಆತಂಕದ ನಡುವೆಯೇ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಚಿಕ್ಕಮಗಳೂರು ತಾಲ್ಲೂಕು ಇಂದಾವರ ಗ್ರಾಮದ ಐ.ಪಿ ತನ್ಮಯಿ ಎಂಬ ವಿದ್ಯಾರ್ಥಿನಿಯು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದವರಲ್ಲಿ ಒಬ್ಬರಾಗಿದ್ದಾರೆ.

   SSLC Results : Chikkaballapura ರಾಜ್ಯಕ್ಕೆ ಫರ್ಸ್ಟ್ | Oneindia Kannada

   ಸಂತ ಜೋಸೆಫರ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿನಿಯಾಗಿರುವ ಐ.ಪಿ ತನ್ಮಯಿ, 625ಕ್ಕೆ 625 ಅಂಕ ಪಡೆದಿದ್ದಾಳೆ. ತಂದೆ ಪ್ರಸನ್ನ ಉಪ ತಹಶೀಲ್ದಾರ್, ತಾಯಿ ಸಂದ್ಯಾ ಶಿಕ್ಷಕಿ ವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

   ಎಸ್‌ಎಸ್‌ಎಲ್‌ಸಿ ಫಲಿತಾಂಶ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶಿರಸಿಯ ಸನ್ನಿಧಿ ಹೆಗಡೆ

   ಮಂಡ್ಯದಲ್ಲಿ 625ಕ್ಕೆ 625 ಪಡೆದ ಕೋಲಾರ ಮೂಲದ ಪ್ರತಿಭೆ

   ಮಂಡ್ಯದ ವಸತಿ ಶಾಲೆಯಲ್ಲಿ ಓದಿರುವ ವಿದ್ಯಾರ್ಥಿ ಧೀರಜ್ ರೆಡ್ಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ 625ಕ್ಕೆ 625 ಅಂಕ ಪಡೆದಿದ್ದಾರೆ. ಮೂಲತಃ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಕ್ಯಾಸಂಬಳ್ಳಿ ಗ್ರಾಮದವನಾಗಿದ್ದಾನೆ.

   1 ರಿಂದ 8 ನೇ ತರಗತಿವರೆಗೂ ಗ್ರಾಮೀಣ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, 9 ಹಾಗೂ 10 ನೇ ತರಗತಿಯನ್ನು ಮಂಡ್ಯದ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದನು. ಮೊದಲಿನಿಂದಲೂ ಧೀರಜ್ ರೆಡ್ಡಿ ತರಗತಿಯಲ್ಲಿ ಟಾಪರ್ ಆಗಿದ್ದನು. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದಕ್ಕೆ ಮನೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.

   ಐಎಎಸ್ ಕನಸು ಕಂಡಿರುವ ಧೀರಜ್ ರೆಡ್ಡಿ, ನನ್ನ ಸಾಧನೆಗೆ ಪೋಷಕರ ಮಾರ್ಗದರ್ಶನ ಕಾರಣ. ಪೋಷಕರು ಇಬ್ಬರೂ ಶಿಕ್ಷಕರಾಗಿದ್ದಕ್ಕೆ ಅಗತ್ಯ ಮಾರ್ಗದರ್ಶನ ಸಿಕ್ಕಿತು. ಮಂಡ್ಯದ ಸತ್ಯ ಸಾಯಿ ಸರಸ್ವತಿ ಶಾಲೆಯಲ್ಲಿ ಉತ್ತಮ ಕಲಿಕಾ ವ್ಯವಸ್ಥೆ ಇದ್ದ ಕಾರಣ ಉತ್ತಮ ಫಲಿತಾಂಶ ಬರಲು ಕಾರಣವಾಯಿತು ಎಂದು ಪ್ರತಿಕ್ರಿಯಿಸಿದನು.

   ಸಾಧನೆ ಮಾಡಬೇಕೆಂಬ ಹಂಬಲ ಇದ್ದರೆ ಎಲ್ಲವೂ ಸಾಧ್ಯ, ಮುಂದೆ ನಾನು ಸೈನ್ಸ್ ವಿಭಾಗದಲ್ಲಿ ಓದಲು ಬಯಸಿದ್ದೇನೆ ಎಂದು ಟಾಪರ್ ವಿದ್ಯಾರ್ಥಿ ಧೀರಜ್ ರೆಡ್ಡಿ ತಿಳಿಸಿದನು.

   English summary
   Karnataka Secondary Education Examination Board (KSEEB) is declared SSLC result. IP Tanmayi, a student from Chikkamagaluru one of the State Topper.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X