ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಯಲಾಯ್ತು ಕಳಸ ಅರಣ್ಯಾಧಿಕಾರಿಯ ಬಣ್ಣ, ಅರಣ್ಯ ರಕ್ಷಕನ ಮೇಲೆಯೇ ಹಲ್ಲೆ!

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ 15: ಸಮವಸ್ತ್ರದಲ್ಲಿದ್ದ ಅರಣ್ಯ ರಕ್ಷಕನಿಗೆ ಕಚೇರಿಯಲ್ಲಿಯೇ ಅರಣ್ಯಾಧಿಕಾರಿ ಹಲ್ಲೆ ನಡೆಸಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ನಡೆದಿದೆ.

ನಕಲಿ ದಾಖಲೆಗಳಗೆ ಸಹಿ ಮಾಡಲು ನಿರಾಕರಿಸಿದ್ದಕ್ಕೆ ಉಪ ವಲಯ ಅರಣ್ಯಾಧಿಕಾರಿ ಎಂ ವೀರಭದ್ರಪ್ಪ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕಚೇರಿಯಲ್ಲಿಯೇ ಶರ್ಟ್ ಕಾಲರ್ ಹಿಡಿದು ಹಲ್ಲೆ ನಡೆಸಿರುವ ವೀಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದ್ದು, ಅರಣ್ಯಾಧಿಕಾರಿಯ ಬಣ್ಣ ಈ ಮೂಲಕ ಬಯಲಾಗಿದೆ.

ಮಹಿಳಾ ಸಹೋದ್ಯೋಗಿಯ ಅಶ್ಲೀಲ ವಿಡಿಯೋ ಮಾಡಿದ ಟೆಕ್ಕಿ ವಿರುದ್ಧ ದೂರುಮಹಿಳಾ ಸಹೋದ್ಯೋಗಿಯ ಅಶ್ಲೀಲ ವಿಡಿಯೋ ಮಾಡಿದ ಟೆಕ್ಕಿ ವಿರುದ್ಧ ದೂರು

ಇನ್ನು ಹಲ್ಲೆಗೊಳಗಾದ ಕೀರ್ತನ್ ಕಳಸ ಪ್ರಾಥಮಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಹಲ್ಲೆಗೊಳಗಾದ ಕೀರ್ತನ್ ಕಳಸ ವಲಯದ ಬಾಳೆಹೊಳೆ ಶಾಖೆಯ ತೋಟದೂರು ಬೀಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Kalasa zone forest officer attacked on forest defender

 ಹೈದರಾಬಾದ್ ಮೆಟ್ರೋ: ಮೂರು ಯುವ ಜೋಡಿಗಳ ಆಪ್ತ ಕ್ಷಣಗಳ ವಿಡಿಯೋ ವೈರಲ್ ಹೈದರಾಬಾದ್ ಮೆಟ್ರೋ: ಮೂರು ಯುವ ಜೋಡಿಗಳ ಆಪ್ತ ಕ್ಷಣಗಳ ವಿಡಿಯೋ ವೈರಲ್

ನಿನ್ನೆ ಗುರುವಾರ (ಫೆ14) ಸರ್ಕಾರಿ ಜಮೀನು ಅಕ್ರಮ ಸಕ್ರಮ ಕುರಿತಂತೆ 94 (ಸಿ) ಪ್ರಕರಣದಡಿಯಲ್ಲಿ ಇಲಾಖೆ ಅಭಿಪ್ರಾಯ ಕುರಿತು ಪಂಚನಾಮೆ, ನಕಾಶೆಗಳನ್ನು ವೀರಭದ್ರಪ್ಪ ತಾವೇ ತಯಾರಿಸಿ ಅವುಗಳನ್ನು ತೋರಿಸದೇ ದಾಖಲೆಗಳನ್ನು ಮುಚ್ಚಿಟ್ಟು ಅರಣ್ಯ ರಕ್ಷಕರಿಗೆ ಸಹಿ ಹಾಕಲು ಒತ್ತಾಯ ಮಾಡಿದ್ದು, ಸಹಿ ಮಾಡಲು ನಿರಾಕರಿಸಿದಾಗ ಅರಣ್ಯ ರಕ್ಷಕರ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

English summary
Kalasa zone forest officer attacked on forest defender. This incident happened in At the Kalasa Zone Forest Officer's Office in Moodigere Taluk. The video of this incident is viral on social sites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X