ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುವೆಗೆ ಬಂದ ಅಧಿಕಾರಿಗಳು; ವಧು ಬಿಟ್ಟು ವರ ಪರಾರಿ!

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಮೇ 25; ವಿವಾಹ ಕಾರ್ಯಕ್ರಮದಲ್ಲಿ ಲಾಕ್‌ಡೌನ್ ನಿಯಮಗಳನ್ನು ಪರಿಶೀಲನೆ ನಡೆಸಲು ಅಧಿಕಾರಿಗಳು ಆಗಮಿಸಿದರು. ಈಗ ಸ್ಟೇಜ್‌ನಲ್ಲಿದ್ದ ವರ ವಧುವನ್ನು ಬಿಟ್ಟು ಪರಾರಿಯಾದ ಘಟನೆ ಕಡೂರಿನಲ್ಲಿ ನಡೆದಿದೆ.

Recommended Video

ಪೊಲೀಸರನ್ನ ನೋಡಿ ಹೆದರಿ ಕಾಲ್ಕಿತ್ತ ಮಧುಮಗ ! | Oneindia Kannada

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕರಿಕಲ್ಲಳ್ಳಿಯಲ್ಲಿ ಈ ಘಟನೆ ನಡೆದಿದೆ. ಕೋವಿಡ್ ನಿಯಮ ಉಲ್ಲಂಘಿಸಿ ಅದ್ದೂರಿಯಾಗಿ ವಿವಾಹವನ್ನು ಮಾಡಲಾಗಿತ್ತು. ಅಧಿಕಾರಿಗಳು ಹೋಗುವಾಗ ಮದುವೆ ಪೂರ್ಣಗೊಂಡಿತ್ತು.

ದಕ್ಷಿಣ ಕನ್ನಡ; ವಾರಾಂತ್ಯದ ಕರ್ಫ್ಯೂ ನಡುವೆಯೂ 372 ವಿವಾಹ!ದಕ್ಷಿಣ ಕನ್ನಡ; ವಾರಾಂತ್ಯದ ಕರ್ಫ್ಯೂ ನಡುವೆಯೂ 372 ವಿವಾಹ!

ಸ್ಟೇಜ್ ಮೇಲೆ ನೂತನ ವಧು, ವರರು ಇದ್ದರು. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಬಂದಿದ್ದು ನೋಡಿ ವಧುವನ್ನು ಬಿಟ್ಟು ವರ ಪರಾರಿಯಾಗಿದ್ದಾನೆ. ಮದುವೆಗೆ ಬಂದಿದ್ದ ಅನೇಕ ಜನರು ಕೂಡ ದಿಕ್ಕಾಪಾಲಾಗಿ ಓಡಿದ್ದಾರೆ.

 ಆಗಸದಲ್ಲಿ ಮದುವೆ; ಸ್ಪೈಸ್ ಜೆಟ್ ಸಿಬ್ಬಂದಿ ಅಮಾನತು ಮಾಡಿದ ಡಿಜಿಸಿಎ ಆಗಸದಲ್ಲಿ ಮದುವೆ; ಸ್ಪೈಸ್ ಜೆಟ್ ಸಿಬ್ಬಂದಿ ಅಮಾನತು ಮಾಡಿದ ಡಿಜಿಸಿಎ

Kadur Groom Escapes After Officials Come To Marriage Function

ಮದುವೆಗೆ ಬಂದವರಿಗೆ ಭರ್ಜರಿ ಭೋಜನವನ್ನೂ ಸಿದ್ಧಪಡಿಸಲಾಗಿತ್ತು. ಅದನ್ನು ಅಲ್ಲಿಯೇ ಬಿಟ್ಟು ಜನರು ಓಡಿ ಹೋಗಿದ್ದಾರೆ. 10 ಜನರ ಸಮ್ಮುಖದಲ್ಲಿ ವಿವಾಹ ಮಾಡುತ್ತೇವೆ ಎಂದು ಅನುಮತಿ ಪಡೆದಿದ್ದರು. ಆದರೆ ನೂರಾರು ಜನರು ಸೇರಿದ್ದರು.

ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಬಂದರು. ಜೋಡಿಹೋಚಿಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಂದಾಗ ವರ ಸೇರಿದಂತೆ ಹಲವರು ಪರಾರಿಯಾದರು. ಅಧಿಕಾರಿಗಳ ಊಟ ಮಾಡುತ್ತಿದ್ದ ಊರಿನವರನ್ನು ನೋಡಿ ಬುದ್ಧಿ ಮಾತು ಹೇಳಿ ವಾಪಸ್ ಹೋದರು.

ಉಡುಪಿ; ಕಠಿಣ ಲಾಕ್‌ಡೌನ್, ಮದುವೆ, ಮೆಹಂದಿ ಕಾರ್ಯಕ್ರಮ ರದ್ದು ಉಡುಪಿ; ಕಠಿಣ ಲಾಕ್‌ಡೌನ್, ಮದುವೆ, ಮೆಹಂದಿ ಕಾರ್ಯಕ್ರಮ ರದ್ದು

ಕೋವಿಡ್ ಹರಡುವಿಕೆ ತಡೆಯಲು ಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ವಿವಾಹದಲ್ಲಿ 10 ಜನರು ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ. ಕೆಲವು ಜಿಲ್ಲೆಗಳಲ್ಲಿ ವಿವಾಹ ಸಮಾರಂಭಗಳಿಗೆ ಅನುಮತಿ ಸಹ ನೀಡಿಲ್ಲ.

English summary
Groom escaped from marriage function after officials conducted raid in the time lockdown. Incident reported at Kadur taluk of Chikkamagaluru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X