ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂಡಿಗೆರೆಯಲ್ಲಿ ಭತ್ತದ ನಾಟಿ ಕೆಲಸ ಮಾಡಿದ ಜೆಡಿಎಸ್ ಕಾರ್ಯಕರ್ತರು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜುಲೈ 22: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಪುರ ಗ್ರಾಮದಲ್ಲಿ ರೈತರ ಜೊತೆಗೂಡಿ ಯುವ ಜೆಡಿಎಸ್ ಕಾರ್ಯಕರ್ತರು ಭತ್ತದ ನಾಟಿ ಕೆಲಸ ಮಾಡಿ ಗಮನ ಸೆಳೆದಿದ್ದಾರೆ.

Recommended Video

ಅಪ್ಪನ ಹಾದಿಯನ್ನೇ ಹಿಡಿದ ಮಗ | Oneindia Kannada

ಇಂದು ಭತ್ತ ನಾಟಿ ಕಾರ್ಯದಲ್ಲಿ ಹತ್ತಾರು ಯುವ ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಇಂದಿಗೆ ವರ್ಷದ ಹಿಂದೆ ಅಧಿಕಾರ ಕಳೆದುಕೊಂಡಿದ್ದರು. ಈ ಕರಾಳ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಮೂಡಿಗೆರೆ ಜೆಡಿಎಸ್ ಯುವ ಕಾರ್ಯಕರ್ತರು ನಾಟಿ ಕಾರ್ಯ ಹಮ್ಮಿಕೊಂಡಿದ್ದರು.

ಯಕಶ್ಚಿತ್ 'ಕುಮಾರಸ್ವಾಮಿ'ಯನ್ನು 'ಕುಮಾರಣ್ಣ'ನನ್ನಾಗಿಸಿದ್ದು ನಿಮ್ಮ ಪ್ರೀತಿಯಕಶ್ಚಿತ್ 'ಕುಮಾರಸ್ವಾಮಿ'ಯನ್ನು 'ಕುಮಾರಣ್ಣ'ನನ್ನಾಗಿಸಿದ್ದು ನಿಮ್ಮ ಪ್ರೀತಿ

ಇನ್ನೊಂದೆಡೆ ದಿನೇ ದಿನೇ ಕೊರೊನಾ ಸೋಂಕಿನ ಆರ್ಭಟ ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆ ಊರು ಬಿಟ್ಟು ಬೆಂಗಳೂರು ಸೇರಿದ್ದ ನೂರಾರು ಯುವಕರು ಇದೀಗ ಮರಳಿ ಗ್ರಾಮಗಳತ್ತ ಮುಖ ಮಾಡುತ್ತಿದ್ದಾರೆ. ಮತ್ತೊಂದೆಡೆ ಆರ್ಥಿಕವಾಗಿ ಅಷ್ಟೊಂದು ಲಾಭವಲ್ಲದ ಭತ್ತದ ಕೃಷಿಯಿಂದ ರೈತರು ವಿಮುಖವಾಗುತ್ತಿರುವ ಈ ಕಾಲಘಟ್ಟದಲ್ಲಿ ಅವರನ್ನು ಪ್ರೋತ್ಸಾಹಿಸುವ ಕೆಲಸಕ್ಕೆ ಚಿಕ್ಕಮಗಳೂರು ಯುವ ಜೆಡಿಎಸ್ ಈ ಕಾರ್ಯವನ್ನು ಹಮ್ಮಿಕೊಂಡಿತ್ತು.

JDS Activists Cultivated Paddy With Farmers In Mudigere Chikkamagaluru

ಜಿಲ್ಲಾಧ್ಯಕ್ಷ ವಿನಯ್ ರಾಜ್ ನೇತೃತ್ವದಲ್ಲಿ ಕಾರ್ಯಕರ್ತರು ರೈತರೊಂದಿಗೆ ಕೂಡಿ ನಾಟಿ ಕೆಲಸ ಮಾಡಿದರು. ಹತ್ತಾರು ಕಾರ್ಯಕರ್ತರು ಹಾಡು ಹೇಳುತ್ತಾ ಹುಮ್ಮಸ್ಸಿನಿಂದ ನಾಟಿ ಕೆಲಸದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾ ಯುವ ಜೆಡಿಎಸ್ ಹಮ್ಮಿಕೊಂಡಿದ್ದ ಈ ನಾಟಿ ಕಾರ್ಯದಲ್ಲಿ ಮಾಜಿ ಸಚಿವ ಬಿ.ಬಿ ನಿಂಗಯ್ಯ, ಜಿಲ್ಲಾಧ್ಯಕ್ಷ ಹೊಲದಗದ್ದೆ ಗಿರೀಶ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

English summary
Young JDS activists dragged the attention by cultivating paddy with farmers in the village of Pura of Mudigere in Chikkamagaluru district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X