ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲೈಂಗಿಕ ಕಿರುಕುಳ ಆರೋಪ:ಪೀಠ ತ್ಯಾಗ ಮಾಡಿದ ಜಯಬಸವಾನಂದ ಸ್ವಾಮೀಜಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್ 05:ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಬಸವ ಮಠದ ಸ್ವಾಮೀಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ
ಸ್ವಾಮೀಜಿ ಪೀಠ ತ್ಯಾಗ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಸ್ವಾಮೀಜಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು. ಸ್ವಾಮೀಜಿ ವಿರುದ್ಧ ಈ ಗುರುತರ ಆರೋಪ ಹಿನ್ನಲೆಯಲ್ಲಿ ಬಸವ ಮಂದಿರ ವಿರಕ್ತ ಮಠದ ಜಯಬಸವಾನಂದ ಸ್ವಾಮೀಜಿ ಪೀಠ ತ್ಯಾಗ ಮಾಡಿದ್ದಾರೆ.

Jaya Basavananda Swamiji resigned to Basava Tatva Peeta

ಅಕ್ರಮ ಸಂಬಂಧ: ಕಳ್ಳ ಸ್ವಾಮೀಜಿಗೆ ಯದ್ವಾತದ್ವಾ ಗೂಸಾ ಕೊಟ್ಟ ಪತ್ನಿಅಕ್ರಮ ಸಂಬಂಧ: ಕಳ್ಳ ಸ್ವಾಮೀಜಿಗೆ ಯದ್ವಾತದ್ವಾ ಗೂಸಾ ಕೊಟ್ಟ ಪತ್ನಿ

ಸದ್ಯ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ಸತ್ಯಾಂಶ ಹೊರ ಬರುವ ತನಕ ಬಸವತತ್ವ ಪೀಠವನ್ನು ತ್ಯಜಿಸಲು ಸ್ವಾಮೀಜಿ ನಿರ್ಧರಿಸಿದ್ದಾರೆ. ಇದೀಗ ಪೀಠ ತ್ಯಜಿಸಿ ಸ್ವಾಮೀಜಿ ಬೆಂಗಳೂರಿಗೆ ತೆರಳಿದ್ದು, ಅವರು ಸಲ್ಲಿರುವ ರಾಜೀನಾಮೆ ಪತ್ರದಲ್ಲಿ ವಿವರ ಇಂತಿದೆ...

Jaya Basavananda Swamiji resigned to Basava Tatva Peeta

 ಉಪವಾಸ ಸತ್ಯಾಗ್ರಹ ಕೈ ಬಿಟ್ಟ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪವಾಸ ಸತ್ಯಾಗ್ರಹ ಕೈ ಬಿಟ್ಟ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

"ತಮ್ಮ ಮೇಲೆ ಗಂಭೀರ ಆರೋಪ ಬಂದಿರುವುದರಿಂದ ಬಸವತತ್ವ ಪೀಠದ ಪಾವಿತ್ರ್ಯವನ್ನು ಕಾಪಾಡುವ ಸಲುವಾಗಿ ಟ್ರಸ್ಟ್ ಮತ್ತು ಸಮಾಜದ ಮುಖಂಡರ ಸಲಹೆ ಮೇರೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇವೆ. ಚಿಕ್ಕಮಗಳೂರಿನ ಸಿವಿಲ್‌ ನ್ಯಾಯಾಲಯದಲ್ಲಿ ತಮ್ಮ ವಿರುದ್ಧ ಪ್ರಕರಣವಿದ್ದು, ಹೊರಿಸಿದ ಆರೋಪ, ಕಳಂಕದಿಂದ ಮುಕ್ತನಾಗಿ ಬರುವವರೆಗೆ ಪೀಠದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುತ್ತೇವೆ. ಸತ್ಯಕ್ಕೆ, ಸಮಾಜಕ್ಕೆ ಗೌರವ ತೋರಿಸಿ ರಾಜೀನಾಮೆ ಸಲ್ಲಿಸಿದ್ದು, ಸತ್ಯಕ್ಕೆ ಕೊನೆಯಲ್ಲಿ ಜಯ ಸಿಗಲಿದೆ" ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

English summary
Basava mandira virakta mata Jaya Basavananda Swamiji resigned to Basava Tatva Peeta in Chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X