ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಟ್ಟಿಗೆಹಾರದಲ್ಲಿ ಮೂಷಿಕನನ್ನು ಕೊಲ್ಲಲು ಹೊರಟವ ಮಾಡಿದ್ದೇ ಬೇರೆ?!

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 02: ಬೋನಿನಲ್ಲಿ ಇಲಿಯೊಂದು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಅರೆ, ಇದರಲ್ಲೇನಿದೆ ವಿಷಯ, ಅಚ್ಚರಿ ಅಂತೀರಾ? ವಿಷಯ ಇರುವುದೇ ಅಲ್ಲಿ. ಎಲ್ಲಾ ಇಲಿಗಳ ಹಾಗೆ ಇದು ತನ್ನ ಮರಿಗಳಿಗೆ ಜನ್ಮ ನೀಡಿತು, ಆದರೆ ಅದು ಅಲ್ಲೇ ಅಂದರೆ ಬೋನಿನಲ್ಲಿ ಜನ್ಮ ನೀಡಲು ಕಾರಣವೇನು ಎಂದು ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಅದೇನೆಂದು ತಿಳಿಯಲು ಈ ಸುದ್ದಿಯನ್ನು ಒಮ್ಮೆ ಪೂರ್ತಿಯಾಗಿ ಓದಿ...

ಈ ಘಟನೆ ನಡೆದದ್ದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ‌ ಕೊಟ್ಟಿಗೆಹಾರದಲ್ಲಿ. ಇಲ್ಲಿನ ತನು ಎಂಬುವವರ ಮೊಬೈಲ್ ಶಾಪ್ ನಲ್ಲಿ ಇಲಿಯೊಂದು ಪ್ರತಿನಿತ್ಯ ಆಹಾರ ಅರಸಿಬಂದು ವೈರ್ ಗಳನ್ನು ಕಟ್ ಮಾಡಿ ಅಂಗಡಿ ಮಾಲೀಕನಿಗೆ ಕಿರಿಕಿರಿ ನೀಡುತ್ತಿತ್ತು.

Interesting incident happened in Kottigehara

ತಾಜಾ ತಾಜಾ ಇಲಿ ಮಾಂಸಕ್ಕೆ ಬಲು ಬೇಡಿಕೆ, ಕೇಜಿಗೆ ಜಸ್ಟ್ ಟೂ ಹಂಡ್ರೆಡ್ತಾಜಾ ತಾಜಾ ಇಲಿ ಮಾಂಸಕ್ಕೆ ಬಲು ಬೇಡಿಕೆ, ಕೇಜಿಗೆ ಜಸ್ಟ್ ಟೂ ಹಂಡ್ರೆಡ್

ಇದರಿಂದ ಬೇಸತ್ತು ಈ ಇಲಿಯನ್ನು ಕೊಲ್ಲುವ ಸಲುವಾಗಿ ಅಂಗಡಿಯಲ್ಲಿ ಬೋನಿಟ್ಟು, ಬೋನಿನಲ್ಲಿ ಬೊಂಡಾವನ್ನು ಇಡಲಾಗಿತ್ತು. ಹೀಗೆ ಬೊಂಡಾವನ್ನು ಸವಿಯಲು ಬಂದ ಮೂಷಿಕ ಬೋನಿನಲ್ಲಿ ಬಂಧಿಯಾಗಿ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ.

Interesting incident happened in Kottigehara

 ನೋಟಿನ ಮೇಲೆ ಮೂಷಿಕನ ಮುನಿಸು: ಇದು ನಡೆದಿದ್ದು ಬೆಂಗಳೂರಿನಲ್ಲಿ ಅಲ್ಲ! ನೋಟಿನ ಮೇಲೆ ಮೂಷಿಕನ ಮುನಿಸು: ಇದು ನಡೆದಿದ್ದು ಬೆಂಗಳೂರಿನಲ್ಲಿ ಅಲ್ಲ!

ಬೆಳಗ್ಗೆ ಅಂಗಡಿ ಮಾಲೀಕ ಇದನ್ನು ನೋಡಿದಾಗ ಮನ‌ ಕರಗಿ ಇಲಿಗೆ ಆಹಾರವನ್ನು ನೀಡಿದ್ದಾರೆ.‌ ನಂತರ ಅದನ್ನು ಊರಿನಿಂದ ಹೊರಗೆ ಹೋಗಿ ಬಿಟ್ಟು ಬಂದು ಮಾನವೀಯತೆ ಮೆರೆದಿದ್ದಾರೆ.

English summary
Purpose of that person was to kill the mouse.But the interesting incident happened there. Read this article to know what it is.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X