• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚಿಕ್ಕಮಗಳೂರು: ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹಗೆ ಹಿಂದೂಪರ ಕಾರ್ಯಕರ್ತರ ಮುತ್ತಿಗೆ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಸೆಪ್ಟೆಂಬರ್ 16: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದ ಬಸ್ ನಿಲ್ದಾಣದ ಎದುರು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮೈಸೂರು ಜಿಲ್ಲೆಯಲ್ಲಿ ದೇವಾಲಯ ಕೆಡವಿದ ಪ್ರಕರಣವನ್ನು ಖಂಡಿಸಿ ಸಂಸದರಾದ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಪಟ್ಟಣದಲ್ಲಿ ಸಂಸದ ಪ್ರತಾಪ್‌ ಸಿಂಹ ಪತ್ನಿ ಡಾ.ಅರ್ಪಿತಾ ಸಿಂಹರ ಹೊಯ್ಸಳ ಹೆಲ್ತ್‌ಕೇರ್ ಸಂಸ್ಥೆ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪ್ರತಾಪ್‌ಸಿಂಹ ಹಾಗೂ ಸಂಸದ ತೇಜಸ್ವಿ ಸೂರ್ಯ, ಕಾರ್ಯಕ್ರಮ ಮುಗಿಸಿ ತೆರಳುತ್ತಿರುವ ಸಂದರ್ಭದಲ್ಲಿ ಮೂಡಿಗೆರೆ ಪಟ್ಟಣದ ಬಸ್ ನಿಲ್ದಾಣದ ಎದುರು ಹಿಂದೂಪರ ಸಂಘಟನೆಯ ಕಾರ್ಯಕರ್ತರು ದಿಢೀರ್ ಮುತ್ತಿಗೆ ಹಾಕಿ, ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.

ಬಸ್ ನಿಲ್ದಾಣದ ಬಳಿ ಕಾರಿನಲ್ಲಿ ಇಬ್ಬರು ಸಂಸಂದರು ತೆರಳುತ್ತಿರುವಾಗ ಅಡ್ಡಗಟ್ಟಿದ ಹಿಂದೂಪರ ಕಾರ್ಯಕರ್ತರು ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ಪ್ರಕರಣಕ್ಕೆ ಸಂಬಂಧ, ಮೈಸೂರು ಜಿಲ್ಲೆಯಲ್ಲಿ ದೇವಸ್ಥಾನ ಕೆಡವಲು ಬಿಡಬಾರದಿತ್ತು. ಅಧಿಕಾರಿಗಳು ವಿರೋಧ ಪಕ್ಷಗಳ ಏಜೆಂಟರಂತೆ ವರ್ತನೆ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಆಡಳಿತದಲ್ಲಿದ್ದರೂ ದೇವಸ್ಥಾನ ರಕ್ಷಿಸಲು ಸಾಧ್ಯವಾಗದಿರುವುದು ದುರಾದೃಷ್ಟ. ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಸಂಸದರ ಎದುರು ಆಕ್ರೋಶ ಹೊರ ಹಾಕಿದರು. ಈ ವೇಳೆ ಪೊಲೀಸರು ಗದ್ದಲ ನಿಯಂತ್ರಿಸಲು ಹರಸಾಹಸಪಟ್ಟರು. ಬಳಿಕ ಇಬ್ಬರೂ ಸಂಸದರು ಕಾರ್ಯಕರ್ತರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.

ಈ ವೇಳೆ ಪ್ರತಿಭಟಕಾರರನ್ನು ಮನವೊಲಿಸಿ ಮಾಧ್ಯಮದ ಜೊತೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, "ಸುಪ್ರೀಂ ಕೋರ್ಟ್ ಆದೇಶ ಮಾಧ್ಯಮಗಳ ಗಮನಕ್ಕೆ ತಂದಿದ್ದೇವೆ. ತುಂಬಾ ಕಡೆ ದೇವಸ್ಥಾನಗಳನ್ನು ಏಕಾಏಕಿ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ನೆಲಸಮ ಮಾಡಿದ್ದರಿಂದ ರಾಜ್ಯಾದ್ಯಂತ ಭಕ್ತರಿಗೆ ನೋವುಂಟು ಮಾಡಲಾಗಿದೆ. ಇಂತಹ ನೋವಿಗೆ ಸ್ಪಂದಿಸುವ ಮನಸ್ಥಿತಿ ಮುಖ್ಯಮಂತ್ರಿಗಳಿಗೆ ಇದೆ. ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ," ಎಂದು ಹೇಳಿದರು.

"ಹಿಂದೆ ಯಾರು ವಿರೋಧಿಸಿದ್ದರು, ನಾವೇ ನೆಲಸಮ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆಂದು ಹೇಳಿದ್ದಾರೋ ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಸಿದ್ದರಾಮಯ್ಯನವರು ಪ್ರತಿಪಕ್ಷದ ನಾಯಕರಾಗಿದ್ದಾರೆ. ಅವರು ಹಾಗೆಯೇ ಮಾತನಾಡುವುದು ಸಹಜ. ಕೋವಿಡ್‌ನಿಂದಾಗಿ ಜನರ ಪ್ರಾಣ ರಕ್ಷಣೆ ಮಾಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಜನ ವಿಶ್ವಾಸ ಇಟ್ಟಿದ್ದಾರೆ. ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದಿರುವ ಮಹಾನಗರ ಪಾಲಿಕೆ, ಕಲಬುರಗಿ ಹಾಗೂ ಹುಬ್ಬಳ್ಳಿ- ಧಾರವಾಡದಲ್ಲಿ ನಡೆದ ಚುನಾವಣೆಯಲ್ಲಿ ಜನ ತಮ್ಮ ಅಭಿಪ್ರಾಯ ಕೊಟ್ಟಿದ್ದಾರೆ," ಎಂದು ತಿಳಿಸಿದರು.

Hindu Activists Besiege To MPs Tejasvi Surya MP And Pratap Simha In Mudigere

ನಂತರ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, "ರಾಜ್ಯದ ಎಲ್ಲಾ ಮಂದಿರಗಳು ಉಳಿಯಬೇಕೆಂಬುದೇ ಸಮಸ್ತ ಹಿಂದೂ ಹಾಗೂ ಭಕ್ತರ ಭಾವನೆಯಾಗಿದೆ. ಇದನ್ನು ರಾಜ್ಯ ಸರ್ಕಾರ ಪ್ರೋತ್ಸಾಹಿಸಬೇಕೆಂಬ ನಿಲುವು ಯುವಮೋರ್ಚಾದ್ದಾಗಿದೆ. ಅದೇ ನಿಟ್ಟಿನಲ್ಲಿ ಹಿಂದೂಗಳ ಭಾವನೆಗೆ ದಕ್ಕೆಯಾಗದಂತೆ ದೇವಸ್ಥಾನ ರಕ್ಷಿಸಲು ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಕೈಗೊಳ್ಳುವ ನಂಬಿಕೆಯಿದೆ," ಎಂದರು.

   ಬುಮ್ರಾರನ್ನು ಎದುರಿಸೋ ತಾಕತ್ತಿರೋದು RCB ಯ ಈ ಆಟಗಾರನಿಗೆ ಮಾತ್ರ | Oneindia Kannada

   "ಇಂತಹ ಸಮಯದಲ್ಲಿ ರಾತ್ರೋರಾತ್ರಿ ಮಂದಿರದ ಮೇಲೆ ಪ್ರೀತಿ ಉಕ್ಕಿಸಿಕೊಂಡು ಆಷಾಢಭೂತಿತನ ತೋರಿಸುತ್ತಿರುವ ಕಾಂಗ್ರೆಸ್‌ನ ನಾಟಕ ಜನ ನಂಬುವುದಿಲ್ಲ. ಇಷ್ಟು ವರ್ಷ ಅವರು ಯಾರ್ಯಾರನ್ನು ಪೂಜೆ ಮಾಡಿದ್ದಾರೆ, ಆರಾಧಿಸಿದ್ದಾರೆ, ಮೂರ್ತಿ ಭಂಜಕರಾಗಿರುವಂತಹ ಟಿಪ್ಪು ಸುಲ್ತಾನ್ ಜಯಂತಿಯನ್ನು ಯಾರು ಆಚರಣೆ ಮಾಡಿದ್ದಾರೆಂದು ಜನರು ಗಮನಿಸಿದ್ದಾರೆ. ಇದರ ನಡುವೆ ಮಂದಿರ ರಕ್ಷಣೆ ಮಾಡುವ ಹೋರಾಟದಲ್ಲಿ ಪಾಲ್ಗೊಂಡು ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ. ಈ ನಾಟಕ ಆಡುವುದನ್ನು ನಿಲ್ಲಿಸಬೇಕು," ಎಂದು ಹೇಳಿದರು.

   English summary
   Hindu Activists laid siege to MPs Pratap Simha and Tejasvi Surya in front of the bus stand in Mudigere town in Chikkamagaluru district.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X