ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಲ್ಪ ಯಾಮಾರಿದ್ದರೂ ಇವರು ಭದ್ರಾ ಪಾಲು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 6: ಸೇತುವೆ ಬಳಿ ಒಂದಡಿ ನೀರು ಇಳಿಕೆಯಾಗಿ ಯಥಾಸ್ಥಿತಿಗೆ ತಲುಪಿದ್ದ ಹೆಬ್ಬಾಳೆ ಸೇತುವೆ ಇದೀಗ ಮತ್ತೆ ಜಲಾವೃತಗೊಳ್ಳುವ ಆತಂಕ ಎದುರಾಗಿದೆ.

ಚಿಕ್ಕಮಗಳೂರಿನಲ್ಲಿ ಜೋರು ಮಳೆ; ಚಾರ್ಮಾಡಿ ಘಾಟ್ ಬಳಿ ಉರುಳಿದ ಮರಚಿಕ್ಕಮಗಳೂರಿನಲ್ಲಿ ಜೋರು ಮಳೆ; ಚಾರ್ಮಾಡಿ ಘಾಟ್ ಬಳಿ ಉರುಳಿದ ಮರ

ಜಿಲ್ಲೆಯಲ್ಲಿ ಅಬ್ಬರದ ಮಳೆ ಮುಂದುವರಿದಿದ್ದು, ಭದ್ರಾ ನದಿ ತುಂಬಿ ಹೊರನಾಡು ಕಳಸದ ಸಂಪರ್ಕವಾಗಿರುವ ಹೆಬ್ಬಾಳ ಸೇತುವೆ ಮೇಲೆ ತುಂಬಿ ಹರಿಯುತ್ತಿದೆ.

ಬೆಳಗಾವಿಯಲ್ಲಿ ಮನೆಯೊಳಗೇ ನುಗ್ಗಿದೆ ನೀರು: ನೆಲಕಚ್ಚುತ್ತಿವೆ ಸೂರು...

ಹೀಗೆ ನೀರು ಹರಿಯುತ್ತಿರುವಾಗಲೇ ಸೇತುವೆ ಮೇಲೆ ಮರದ ದಿಬ್ಬವೊಂದು ಸಿಲುಕಿಕೊಂಡಿದ್ದು, ಒಂದಿಬ್ಬರು ಅದನ್ನು ಎತ್ತಲು ಮುಂದಾಗಿದ್ದಾರೆ. ಪ್ರಯತ್ನಿಸಿ ಸೋತಿದ್ದಾರೆ. ಆದರೆ ಸ್ವಲ್ಪ ಯಾಮಾರಿದ್ದರೂ ಅವರಿಬ್ಬರೂ ಭದ್ರಾ ನದಿ ಪಾಲಾಗುವ ಸಾಧ್ಯತೆಯಿತ್ತು. ಅಪಾಯಕಾರಿ ಸೇತುವೆ ಮೇಲೆ ಜನರು ಓಡಾಡುವ ದೃಶ್ಯವನ್ನು ಸ್ಥಳೀಯರೇ ಸೆರೆಹಿಡಿದಿದ್ದಾರೆ.

Hebbale Bridge Is Overflowed By Bhadra River

ಸ್ಥಳೀಯರು ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನದೇ ಇವರು ನೀರಿಗಿಳಿದಿದ್ದಾರೆ. ಮುಳುಗಡೆ ಸೇತುವೆ ಮೇಲೆ ಮೋಜು ಮಸ್ತಿ ನಡೆಸಿದ್ದಾರೆ. ಒಂದು ಗಂಟೆಯಿಂದ ವಾಹನ ಸಂಚಾರ ಬಂದ್ ಕೂಡ ಆಗಿತ್ತು. ಈ ಜಾಗದಲ್ಲಿ ಪೊಲೀಸರನ್ನು ನಿಯೋಜಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

English summary
The Bhadra River is overflowing over the Hebbal Bridge. at the same time, some people walked on this bridge. This dangerous act was recorded by locals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X